ಪೋಸ್ಟ್‌ಗಳು

ಡಿಸೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಶಿಶ್ಯೋ ರಸ್ತೆ ಮೇಲೇ ಕಕ್ಕ ಮಾಡ್ತಾ ಇದೆ...

ಇಮೇಜ್
  ತೊದಲುನುಡಿದೀಪ -------------- ಸಂಚಿಕೆ # 4 -------------- ಇಶಿಶ್ಯೋ ರಸ್ತೆ ಮೇಲೇ ಕಕ್ಕ ಮಾಡ್ತಾ ಇದೆ... ------------- ಎಂದಿನಂತೆಯೇ ನಮ್ಮೊಮ್ಮಗಳು 'ಆರೋಹಿ' ಮತ್ತು ನಾನೂ,  morning walk ಮಾಡ್ತಾ, ಮುಖ್ಯರಸ್ತೆಯ ಬಳಿ ಬಂದೆವು.  ಇದ್ದಕ್ಕಿದ್ದಂತೆಯೇ ಆರೋಹಿ,  ಒಂದು ರೀತಿಯ ಆಶ್ಚರ್ಯಭರಿತ, ತುಂಟ ನಗೆ ಬೀರುತ್ತಾ ಜೋರಾಗಿ ಹೇಳಿದಳು " ಅಜ್ಜ, ಅಜ್ಜಾ...ಅಲ್ನೋಡು.. ರಸ್ತೇ ಮೇಲೇ ಕಕ್ಕಾ ಮಾಡ್ತಾ  ಇದೆ ..ಇಶ್ಯಿಶ್ಯೋ.." 🤦‍♂️🤦‍♂️🤦‍♂️🤦‍♂️ ನಾನಂದ್ಕೊಂಡೆ, ಯಾವುದೋ ನಾಯಿನೋ , ದನನೋ ಹಾಗೆ ಮಾಡ್ತಾ ಇರಬಹುದೇನೋ ಅಂತ. ಆದರೆ  ಹತ್ತಿರ ಯಾವ ನಾಯಿನೂ ಇಲ್ಲ,  ದನಾನೂ ಇಲ್ಲ!!🤔!!! "ಏಯ್ ಕೂಸೇ... ಯಾರೂ ಕಕ್ಕ ಮಾಡ್ತಾ ಇರೋದು ಕಾಣಿಸ್ತಾನೇ ಇಲ್ವಲ್ಲೇ?  " "ಅಜ್ಜಾ ನೋಡಲ್ಲಿ" ಅಂತ ತೋರಿಸಿದಳು. ---- ನೋಡಿದೆ, ಓಹ್.ಹೋ.... ಇದಾ ವಿಷಯ ?  ನನ್ನ ದೊಡ್ಡ ದೃಷ್ಟಿಗೆ ಕಾಣಿಸದ್ದು, ಇವಳ 'ದಿವ್ಯದೃಷ್ಟಿ' ಗೆ ಕಂಡಿತ್ತು ------ ಏನಪ್ಪಾ ಅಂದರೆ, ಒಂದು ಟ್ರ್ಯಾಕ್ಟರ್, ಡಾಂಬರ್ ಮಿಶ್ರಿತ ಜಲ್ಲಿಕಲ್ಲುಗಳನ್ನು ತನ್ನ ಹಿಂಬದಿಯಿಂದಾ ರಸ್ತೆ ಮೇಲೆ ಸುರಿಸ್ತಾ ಇತ್ತು.  ಅಷ್ಟೇ... ------ ಆಹಾ.. ರವಿಗೆ ಕಾಣದ್ದು  ಈ ನಮ್ಮ 'ಮುದ್ದುಕವಿ' ಗೆ ಕಂಡಿತ್ತು 😃🤣🤣