ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನದಿಯ ಸಂಕಟ (ಸ್ವಗತ) -ಬರಹ / ಕವಿತೆ

ಇಮೇಜ್
  ನದಿಯ ಸ್ವಗತ ಕವಿ ವರ್ಣಿಸಲಾರಂಭಿಸಿದ   " ಓ ನದಿ ,     ದೂರದ ನಿನ್ನ   ಪ್ರಿಯತಮ ಸಾಗರನ   ಮಿಲನಕ್ಕಾಗಿ   ಬಳುಕುತ   , ಬಾಗುತ , ಲಾಸ್ಯವಾಡುತ , ಓಡುತ ಕುಣಿಯುತ , ಗುಡ್ದ ಬೆಟ್ಟ ಕಾಡು ಕಣಿವೆಯಲ್ಲಿ ನುಸುಳುತ   ,   ಪ್ರಪಾತದಲ್ಲಿ ಧುಮುಕುತ , ಧಾವಿಸುತಿಹ ಪ್ರೇಮವಾಹಿನಿ ನೀ .. .... ಧನ್ಯಳು ನೀನು “ ಇನ್ನೂ ಮುಂದುವರೆದಿತ್ತು ................... ಕವಿಯ ವರ್ಣನೆ  "   ನಿಲ್ಲಿಸು , ನಿನ್ನ ಕವಿ ಕಲ್ಪನಾಲಾಪವನ್ನು-ಭ್ರಮೆಯನ್ನು “ ಇದ್ದಕಿದ್ದಂತೆಯೇ ಒಂದು ಏರು ಧ್ವನಿ ಮೊ ಳಗಿತು.   ಯಾರ ಧ್ವನಿ ? ಆಶ್ಚರ್ಯ! ನದಿಯದೇ ಧ್ವನಿ!!   ಮುಂದುವರೆಸಿತು ನದಿ   “ ನೀ ವರ್ಣಿಸಿದ ಆ ಸಾಗರ ಯಾರೋ ? ಎಲ್ಲಿದ್ದಾನೋ ? ಹೇಗಿದ್ದಾನೋ ? ನನಗಂತೂ ಗೊತ್ತಿಲ್ಲ   ಏನು ಮಾಡೋದು ? ಪ್ರಕೃತಿ ನಿಯಮ (ಭೌತಶಾಸ್ತ್ರದ ನಿಯಮ ) ಮೇಲಿನಿಂದ ಕೆಳಗೆ ನಾ   ಹರಿಯಲೇಬೇಕು .   ಎಲ್ಲೋ ಹುಟ್ಟಿ , ಎಲ್ಲೋ ಬೆಳೆದು , ದಿಕ್ಕು ದೆಸೆಯಿಲ್ಲದೆಯೇ ಹರಿಯುತ್ತೇನೆ.   ಹಾದಿ ಮಧ್ಯೆ , ಒಮ್ಮೊಮ್ಮೆ          ಸಲೀಸು    ಹಾದಿಯಲಿ   ಪ್ರಶಾಂತ ಹರಿವು ಇನ್ನೊಮ್ಮೆ ...