ಪೋಸ್ಟ್‌ಗಳು

ಜುಲೈ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಷ್ಟವೋ ಅಥವಾ ಪ್ರೀತಿಯೋ?

ಇಮೇಜ್
  ಇಷ್ಟ‌  v/s ಪ್ರೀತಿ ------- ಗಿಡದ ಜೊತೆ ಸಲ್ಲಾಪ ----------- ಸಂಚಿಕೆ #10 ************************ ಬಹಳ ದಿನಗಳ ನಂತರ,  ನನ್ನ 'ತರ್ಲೆ ಸ್ನೇಹಿತೆ'  ಹೂವಿನಗಿಡದ ಬಳಿ ಹೋ‍ದೆ. ಗಿಡ ಅದೇನೋ ಕಾತುರತೆ ತೋರಿಸಿತು. "ಒಹ್...ಬಂದ್ಯಾ...ಬಾ! ಬಾ! ಅಂದಿನಿಂದ ನಿನಗೆ  ಒಂದು ಪ್ರಶ್ನೆ ಕೇಳಬೇಕು ಅಂತ ಕಾಯ್ತಾ ಇದ್ದೆ" 'ಅಯ್ಯೋ ದೇವರೇ! ಏನು ಪ್ರಶ್ನೆ ಕೇಳುತ್ತಪ್ಪಾ'  ಎಂಬ ಆತಂಕ ನನಗೆ. ಸಾಮಾನ್ಯವಾಗಿ ನನ್ನನ್ನು ಗೋಜಲಿಗೆ ಸಿಕ್ಕಿಸುವ ಪ್ರಶ್ನೆಗಳನ್ನು ಕೇಳಿ ಮಜಾ ಪಡೆಯೋ ಸ್ವಭಾವ ಈ ಗಿಡದ್ದು. { ನಾ ಬರೆದಿರೋ ಹಿಂದಿನ 9 ಸಂಚಿಕೆಗಳನ್ನು ಓದಿದೋರಿಗೆ ಗೊತ್ತಿರುತ್ತೆ } " ಸರಿ, ಅದೇನು ? ಕೇಳು" ಗಿಡ ಮತ್ತೆ ಎಚ್ಚರಿಸಿತು  " ಪ್ರಶ್ನೆ ತುಂಬಾ  ಸರಳ ಅನಿಸಬಹುದು. ಥಟ್ ಅಂತ ಉತ್ತರ ಕೊಟ್ಟುಬಿಡಬೇಡ" " ಆಯ್ತು , ಅದೆಷ್ಟು build up ಕೊಡ್ತೀಯಾ? ಬೇಗ ಬೇಗ ಕೇಳು, ನನಗೆ ಬೇರೆ ಕೆಲ್ಸ ಇದೆ"  ಗಿಡ ಕೇಳಿಯೇಬಿಟ್ಟಿತು " ನೀನು ನನ್ನನ್ನು ಇಷ್ಟ ಪಡ್ತೀಯಾ? ಅಥವಾ ಪ್ರೀತಿಸ್ತೀಯಾ? " "ಆ..., ಇನ್ನೊಮ್ಮೆ ಕೇಳು" " ನೀನು ನನ್ನನ್ನು ಇಷ್ಟ ಪಡ್ತೀಯಾ? ಅಥವಾ ಪ್ರೀತಿಸ್ತೀಯಾ? " ----------------- ನಾನು ಜೋರಾಗಿ ನಕ್ಕುಬಿಟ್ಟೆ.  "ಅಯ್ಯ....ಇದೂ ಒಂದು ಪ್ರಶ್ನೆನಾ?  ಸುಮಾರು 15 ವರ್ಷಗಳಿಂದ ನಿನ್ನ ಒಡನಾಟ ನನಗೆ. ನಾ ನಿನ್ನನ್ನು ಬಹ...