ಪೋಸ್ಟ್‌ಗಳು

ಸೆಪ್ಟೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗಣಪಜ್ಜ ಅನಕ್ಷರಸ್ತ, ಆದರೆ ಅವನ ಆಚಾರ-ವಿಚಾರ-ಅನುಸರಣೀಯ

ಇಮೇಜ್
ಗಣಪಜ್ಜ ಅನಕ್ಷರಸ್ತ , ಆದರೆ ಅವನ ಆಚಾರ-ವಿಚಾರ-ಅನುಸರಣೀಯ ****** { ವಿ.ಸೂ. ಈ ಬರಹ , ಹವ್ಯಕ ಕನ್ನಡ ಭಾಷೆಯಲ್ಲಿದೆ } ****** " ಅಲ್ದಾ ಗಣಪಜ್ಜ , ನೀ ಎಂತ ಬ್ರಾಹ್ಮಣನೋ ಮಾರಾಯಾ. ಮನೇಲಿ ದೇವರ ಪೂಜೆ ಇಲ್ಲೆ. ಮಂತ್ರ , ಶ್ಲೋಕ ಪಠಣ ಇಲ್ಲೆ. ದೇವಸ್ತಾನಕ್ಕೂ ಬತ್ತಲ್ಲೆ. ವರ್ಷಕ್ಕೊಂದು ಎಂತಾರೂ   ದೇವರ ಕಾರ್ಯ ಮಾಡಿ ನಾಕು ಜನರ ಕರೆದು ಊಟನೂ ಹಾಕ ಪದ್ದತೀನೂ ಇಲ್ಲೆ. ಅದೇನು ಜನ್ಮವೋ ನಿಂದು ? " ಹೀಗೆ ಒಂದೇ ಸಮನೆ ,   ಗಣಪಜ್ಜನ ಮೇಲೆ , ಕಟುವಾದ ದೂಷಣೆಗಳ ಮಳೆ ಸುರಿಸಿದರು ,   ಕೃಷ್ಣಭಟ್ಟರು. ಕೃಷ್ಣಭಟ್ಟರು ಅಂದರೆ , ಆ ಸೀಮೆಯಲ್ಲಿಯೇ ಹೆಸರಾಂತ   ಪುರೋಹಿತರು , ಧಾರ್ಮಿಕ   ನೇಮ , ನಿಷ್ಠೆ , ಆಚರಣೆಯ ಶಿಸ್ತಿನ ಮನುಷ್ಯ. ಅವರ ಮಾತಿಗೆ ಎದುರುತ್ತರ ಕೊಡುವ ಧೈರ್ಯ ಯಾರಿಗೂ ಇರ್ತಿರ್ಲೆ. ಎಂದಿನಂತೆಯೇ , ಇಂದೂ ,    ಅವರ ಮಾತಲ್ಲಿ ವ್ಯಂಗ್ಯ , ಅಹಂ ತುಂಬ್ಕ್ಯಂಡಿತ್ತು. --- ಆದರೆ , ಗಣಪಜ್ಜ , ಅನಕ್ಷರಸ್ತ , ಮುಗ್ಧ. ಒಂಥರಾ ಪಾಪದವ. ಎಂದೂ ಕೃಷ್ಣಭಟ್ಟರಿಗೆ   ಎದುರುತ್ತರ ಕೊಡದ ಅವ , ಇಂದು ಖಾರವಾಗಿಯೇ ಉತ್ತರ ಬಿಸಾಕಿಯೇಬಿಟ್ಟ.   ------- " ಎಂತ ಹೇಳ್ತ್ರಾ ಭಟ್ರೆ. ಆನು ಬ್ರಾಹ್ಮಣ ಅಲ್ದಾ ?   ದೇವರು , ನೇಮ , ನಿಷ್ಟೆ ಇಲ್ಯಾ ?   ಪ್ರತಿದಿನ ಬೆಳಿಗ್ಗೆ 5-30 ಕ್ಕೇ ಎದ್ದು , ಬೆಟ್ಟಕ್ಕೆ ಹೋಗಿ , ಸೊಪ್ಪು ಕಡಿದು , ಗಟ್ಟಿ ಒಂದು ದೊಡ್ಡ ಹೊರೆ ರೆಡಿ ಮಾಡ್ಕ್ಯಂಡು , ...

ಅಂದು ನೀಡಿದ್ದರಿಂದ– ಇಂದು ಪಡೆದೆನೇ ?

ಇಮೇಜ್
  ಅಂದು ನೀಡಿದ್ದರಿಂದ– ಇಂದು ಪಡೆದೆನೇ ?   ******************************* ನನ್ನ ಜೀವನದಲ್ಲಿ ನಡೆದ ಎರಡು ಪುಟ್ಟ ಸಂಗತಿಗಳು. ಮೊದಲು   ಸಂಗತಿ #2 - ಇತ್ತೀಚಿನದು ( ಸಂಗತಿ # 1 ನ್ನು ಮುಂದೆ ತಿಳಿಸಿದ್ದೇನೆ ) 2023 – ಅಕ್ಟೋಬರ್ ********** ನಾನೂ ನನ್ನಪತ್ನಿ ಬೆಂಗಳೂರಿನಿಂದ ಹೊರಟು ಸಿಂಗಾಪುರ ( Singapore) ನ Airport ನಲ್ಲಿ ಇಳಿದೆವು. ನಮ್ಮ ಚೀಲಗಳನ್ನೆಲ್ಲಾ ಪಡೆದು , ಹೊರದ್ವಾರದ ಕಡೆಗೆ ಹೊರಟೆವು. ಕಾಫಿ ಕುಡಿಯಬೇಕೆನಿಸಿತು. ಸಮಯ ಬಹಳ ಕಡಿಮೆ ಇತ್ತು. ಯಾಕೇಂದ್ರೆ ನಮ್ಮನ್ನು ಹೋಟೆಲ್ ಗೆ ಕರೆದೊಯ್ಯುವ ಟ್ಯಾಕ್ಸಿಯವನು ಇನ್ನು ಹತ್ತು ನಿಮಿಷದೊಳಗೆ ಬರಬೇಕೆಂದೂ , 5 ನಿಮಿಷಕ್ಕಿಂತಾ ಹೆಚ್ಚು ಹೊತ್ತು ಕಾಯುವುದಕ್ಕೆ ಆಗುವುದಿಲ್ಲವೆಂದೂ ಖಡಕ್ಕಾಗಿ ಫೋನಾಯಿಸಿದ್ದ.     ಸರಿ , ಅಲ್ಲಿಯೇ ಕಾಣಿಸಿದ ಒಂದು ಕಾಫಿ ಕೌಂಟರ್ ಗೆ ಹೋದೆವು. ಅದೇನೇನೋ ಬಗೆ ಬಗೆಯ ಕಾಫಿಯ ಪಟ್ಟಿ ಇತ್ತು. ಆಯ್ಕೆಯ ಯೋಚನೆಗೆ ಸಮಯ ಇಲ್ಲದಿದ್ದರಿಂದ , 2 ಡಾಲರ್ ದರದ ಎರಡು ಕಾಫಿಯನ್ನು ಆರ್ಡರ್ ಮಾಡಿದೆ. ಆ ಹಂತದಲ್ಲಿ   ಒಂದು ಸಮಸ್ಯೆ . ನಾನು ನನ್ನ ವಾಲೆಟ್ ನಲ್ಲಿ ಹುಢುಕಿದರೆ , 4 ಡಾಲರ್ ಚಿಲ್ಲರೆ ಇರಲಿಲ್ಲ .   ನನ್ನಲ್ಲಿದ್ದದ್ದು 100 ಡಾಲರ್ ನೋಟುಗಳು. ಅದನ್ನು ಕೊಡಲು ಹೋದಾಗ ಅಂಗಡಿಯಾಕೆ ನಿರಾಕರಿಸಿದಳು.   ಭಾರತದಲ್ಲಿರುವ ಹಾಗೆ Google Pay ವ್ಯವಸ್ತೆಯೂ ಇರಲಿಲ್ಲ. ನಾನು ನನ್ನ D...

ಓ ಮನುಜ ನಿನಗೆ ವಂದನೆ- ಅಭಿನಂದನೆ-{ ಪ್ರಕೃತಿಯಿಂದ ಮನುಷ್ಯನಿಗೆ ವಂದನಾರ್ಪಣೆ }

ಇಮೇಜ್
  ಓ ಮನುಜ  ನಿನಗೆ ವಂದನೆ - ಅಭಿನಂದನೆ { ಪ್ರಕೃತಿಯಿಂದ   ಮನುಷ್ಯನಿಗೆ ವಂದನಾರ್ಪಣೆ   } ******** ಈ ಬರಹ/ಕವಿತೆ ಕುರಿತು ಒಂದು ಲಘು ಪ್ರಸ್ತಾವನೆ ******** ನಾವು , ಮನುಷ್ಯರು ಎಂದೆಂದಿಗೂ ಪ್ರಕೃತಿಗೆ ಋಣಿಗಳು. ನಮ್ಮ ಅಸ್ತಿತ್ವ – ಬಾಳ್ವೆ- ಸಾಧನೆ ಎಲ್ಲದಕ್ಕೂ   ಪ್ರಕೃತಿ ಮೂಲ . ಸುಸಂಸ್ಕೃತ ,   ಸಂಸ್ಕಾರವಂತನಾದ   ಯಾವುದೇ ಮನುಷ್ಯ ಪ್ರಕೃತಿಗೆ ಸದಾ ವಂದಿಸುತ್ತಲೇ ಇರುವುದು ಸ್ವಾಭಾವಿಕ. ಹಾಗೆಯೇ ಮನುಷ್ಯ ತನ್ನ ಸ್ವಾರ್ಥ , ದುರಾಸೆಗೋಸ್ಕರ ,   ಪ್ರಕೃತಿಯ ನಾಶ ಮಾಡ್ತಾ ಇರುವುದರ ಬಗ್ಗೆ , ಪ್ರಕೃತಿಯ ಬಗ್ಗೆ ಸಂವೇದನೆ ಇರುವವರು , ಚಿಂತಕರು ಒಂದೇ ಸಮನೆ ಮನುಜ ಕುಲವನ್ನೇ ದೂಷಿಸುತ್ತಾ , ಎಚ್ಚರಿಕೆ ಕೊಡುವ   ‘ ಪರಿಸರ ಜಾಗೃತಿ ಸಾಹಿತ್ಯ ’ ತುಂಬಿ ತುಳುಕುತ್ತಿವೆ. ---- ಆದರೆ ಈ ಬರಹ/ಕವಿತೆಯಲ್ಲಿ , ವಿಚಿತ್ರ ಅನ್ನಿಸಬಹುದಾದ , ಒಂದು ಭಿನ್ನ , ಧನಾತ್ಮಕ ದೃಷ್ಟಿಕೋನ -------   ಪ್ರಕೃತಿಯೇ   ಮನುಷ್ಯನಿಗೆ ಅಭಿನಂದನೆ ಮತ್ತು ವಂದನೆ   ಸಲ್ಲಿಸುತ್ತಿದೆ. ಒಂದು ಧನಾತ್ಮಕ ಚಿಂತನೆ.   ***************** ****** ಓ ಮನುಜ ಹೌದು ವಂದಿಸಲೇಬೇಕು ನಿನಗೆ ನಾ   ಕೋಟಿ ಕೋಟಿ ಜೀವಿಗಳು ನನ್ನೊಡಲಲಿ ಆದರೆ ನೀ ಮಾತ್ರ ಎನಗೆ ಅತಿ ವಿಸ್ಮಯ ನಿನ್ನ ಬುದ್ಧಿ ಶಕ್ತಿಗೆ ನಮೋ ನಮಃ ನಿನ್ನ ಭಾವ ಶಕ್ತಿಗೆ...