ಅಂದು ನೀಡಿದ್ದರಿಂದ– ಇಂದು ಪಡೆದೆನೇ ?
ಅಂದು ನೀಡಿದ್ದರಿಂದ– ಇಂದು ಪಡೆದೆನೇ ?
*******************************
ನನ್ನ ಜೀವನದಲ್ಲಿ ನಡೆದ ಎರಡು ಪುಟ್ಟ ಸಂಗತಿಗಳು.
ಮೊದಲು ಸಂಗತಿ #2 -ಇತ್ತೀಚಿನದು ( ಸಂಗತಿ#1 ನ್ನು ಮುಂದೆ
ತಿಳಿಸಿದ್ದೇನೆ )
2023
– ಅಕ್ಟೋಬರ್
**********
ನಾನೂ
ನನ್ನಪತ್ನಿ ಬೆಂಗಳೂರಿನಿಂದ ಹೊರಟು ಸಿಂಗಾಪುರ ( Singapore) ನ Airport ನಲ್ಲಿ ಇಳಿದೆವು. ನಮ್ಮ ಚೀಲಗಳನ್ನೆಲ್ಲಾ ಪಡೆದು ,ಹೊರದ್ವಾರದ ಕಡೆಗೆ ಹೊರಟೆವು. ಕಾಫಿ ಕುಡಿಯಬೇಕೆನಿಸಿತು. ಸಮಯ ಬಹಳ ಕಡಿಮೆ ಇತ್ತು.
ಯಾಕೇಂದ್ರೆ ನಮ್ಮನ್ನು ಹೋಟೆಲ್ ಗೆ ಕರೆದೊಯ್ಯುವ ಟ್ಯಾಕ್ಸಿಯವನು ಇನ್ನು ಹತ್ತು ನಿಮಿಷದೊಳಗೆ
ಬರಬೇಕೆಂದೂ, 5 ನಿಮಿಷಕ್ಕಿಂತಾ ಹೆಚ್ಚು ಹೊತ್ತು ಕಾಯುವುದಕ್ಕೆ
ಆಗುವುದಿಲ್ಲವೆಂದೂ ಖಡಕ್ಕಾಗಿ ಫೋನಾಯಿಸಿದ್ದ.
ಸರಿ, ಅಲ್ಲಿಯೇ ಕಾಣಿಸಿದ ಒಂದು ಕಾಫಿ ಕೌಂಟರ್ ಗೆ ಹೋದೆವು. ಅದೇನೇನೋ ಬಗೆ ಬಗೆಯ ಕಾಫಿಯ ಪಟ್ಟಿ
ಇತ್ತು. ಆಯ್ಕೆಯ ಯೋಚನೆಗೆ ಸಮಯ ಇಲ್ಲದಿದ್ದರಿಂದ , 2 ಡಾಲರ್ ದರದ ಎರಡು ಕಾಫಿಯನ್ನು ಆರ್ಡರ್ ಮಾಡಿದೆ. ಆ ಹಂತದಲ್ಲಿ ಒಂದು ಸಮಸ್ಯೆ . ನಾನು ನನ್ನ ವಾಲೆಟ್ ನಲ್ಲಿ ಹುಢುಕಿದರೆ, 4 ಡಾಲರ್ ಚಿಲ್ಲರೆ ಇರಲಿಲ್ಲ . ನನ್ನಲ್ಲಿದ್ದದ್ದು
100 ಡಾಲರ್ ನೋಟುಗಳು. ಅದನ್ನು ಕೊಡಲು ಹೋದಾಗ ಅಂಗಡಿಯಾಕೆ ನಿರಾಕರಿಸಿದಳು. ಭಾರತದಲ್ಲಿರುವ ಹಾಗೆ Google Pay ವ್ಯವಸ್ತೆಯೂ ಇರಲಿಲ್ಲ. ನಾನು ನನ್ನ Debit Card ನ್ನು
ಕೊಟ್ಟೆ. ಅದರೆ ಅದೇನೋ ತಾಂತ್ರಿಕ ಸಮಸ್ಯೆ.
ಸಮೀಪದಲ್ಲಿ ಎಲ್ಲಾ ಸೂಟ್ ಕೇಸ್ ಗಳನ್ನೂ ಕಾಯುತ್ತಾ ನಿಂತಿದ
ನನ್ನಾಕೆಯ ಬಳಿ ಚಿಲ್ಲರೆ ಇರಬಹುದೇನೋ ಅಂತ ಹೋದೆ. ಆಕೆಯ ಬಳಿಯೂ ಇರಲಿಲ್ಲ, ಸಮಯ ಓಡುತ್ತಿತ್ತು. ಚಡಪಡಿಸಿದೆ. ಅಸಹಾಯಕನಾಗಿ
ಅಂಗಡಿಯವಳ ಬಳಿ
” May I cancel this order please” ವಿನಂತಿ ಮಾಡಿದೆ.
ಅಷ್ಟು ಹೊತ್ತಿಗಾಗಲೇ ಬಿಸಿ ಬಿಸಿ ಸ್ತ್ರಾಂಗ್ ಕಾಫಿಯನ್ನು
ಸಿದ್ದಮಾಡಿ ನನ್ನ ಮುಂದಿಟ್ಟಿದ್ದಳು ಅಂಗಡಿಯಾಕೆ .
ಆಕೆಯಿಂದ ಬಂದ ಪ್ರತಿಕ್ರಿಯೆ ಕೇಳಿ ನಾ ಚಕಿತನಾದೆ.
ಆಕೆ ಹೇಳಿದಳು “ No problem at all. Please enjoy your coffee” .
“But I can’t pay “ ಅಂತ ನನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ.
ಆಗ ಆಕೆಯ ಪ್ರತಿಕ್ರಿಯೆ ನನ್ನಲ್ಲಿ ಇನ್ನಷ್ಟುಆಶ್ಚರ್ಯ
ಉಂಟುಮಾಡಿತು.
“ It is already paid” ಅಂದಳು.
ನಾನು ದಂಗಾಗಿ ಹೋದೆ .
“ How is that possible” ಅಂತ ಕೇಳಿದೆ.
ಆಗ ಆಕೆ ಅಲ್ಲಿಯೇ ಕಾಫಿ ಕುಡಿಯುತ್ತಿದ್ದ ಒಬ್ಬ ವ್ಯಕ್ತಿಯ ಕಡೆ
ಬೊಟ್ಟು ಮಾಡಿ “ that gentleman has already paid”
ನಾನು ಆತನನ್ನೊಮ್ಮೆ ನೋಡಿದೆ. ನನಗೆ ಪರಿಚಯವೇ ಇಲ್ಲದವನು.
ಸಮಯ ಓಡುತ್ತಿತ್ತು. ಟ್ಯಾಕ್ಸಿಯವನನ್ನು ತಪ್ಪಿಸಿಕೊಳ್ಳುವ
ಹಾಗಿಲ್ಲ
ಆತನತ್ತ ಧಾವಿಸಿದೆ.
“ EXCUSE ME THANK
YOU SO.. MUCH, HOW DO I PAY THIS BACK ?”
ಅಂತ
ಕೇಳಿದೆ.
ಆತನೂ ಗಡಿಬಿಡಿಯಲ್ಲಿದ್ದ .ಒಂದು ಮುಗಳ್ನಗೆ ಆತನ ಮುಖದಲ್ಲಿ.
“ NO, NO, NO, No need to pay, Enjoy your trip in Singapore” ಅಂತ ಹೇಳಿ ದಡದಡನೆ ನಡೆದೇಬಿಟ್ಟ . **************
ಆತ ಯಾರೋ ಏನೋ ....ನನಗಂತೂ ಗೊತ್ತಾಗಲಿಲ್ಲ
ನನ್ನೊಳಗೆ ಮಿಂಚಿತು ಒಂದು Flash back
**********
ಸಂಗತಿ #1
ಇಂದಿಗೆ 40
ವರ್ಷಗಳ ಹಿಂದೆ( ಡಿಸೆಂಬರ್ - 1981 )
********
Electronic
ಇಂಜಿನಿಯರಿಂಗ್ ಪದವಿ ಪಡೆದು , ಆಗಿನ್ನೂ ನನ್ನ
ವೃತ್ತಿ ಜೀವನವನ್ನು ಪ್ರಾರಂಭಿಸಿದ್ದೆ., ಒಂದು ಖಾಸಗೀ ಕಾರ್ಖಾನೆಯಲ್ಲಿ.
400 ರೂಪಾಯಿ ವೇತನ ನನಗೆ. ಡಿಸೆಂಬರ್
ತಿಂಗಳ ಕೊರೆಯುವ ಛಳಿಯಲ್ಲಿ,
ಮಲ್ಲೇಶ್ವರಂನಿಂದಾ ಪೀಣ್ಯಾಗೆ , ಬೆಳಿಗ್ಗೆ 6
ಕ್ಕೇ ಎದ್ದು ಸಿಟಿ ಬಸ್ ಹಿಡಿದು, ಓಡುವ
ತರಾತುರಿ. ನನ್ನ ಮಾಮೂಲೀ ಅಂಗಡಿ ವೀಣಾ ಸ್ಟೋರ್ಸ್ ನಲ್ಲಿ ಇಡ್ಲಿ- ಕಾಫಿ ಗೆ ಆರ್ಡರ್ ಮಾಡಿದೆ
ಒಬ್ಬ
ಯುವಕ ,
ನೋಡಿದ್ರೆ ತುಂಬಾ ಹಸಿದು ಬಳಲಿದವನ ಹಾಗೆ ಕಾಣಿಸ್ತಾ ಇದ್ದ. ತಲೆಯೆಲ್ಲಾ
ಕೆದರಿತ್ತು. 'ಒಂದು ಕಾಫಿ ಕೊಡಿ' ಅಂತ.
ಅಂಗಡಿಯವನನ್ನು ಕೇಳಿದ.
'2
ರೂ ಕೊಡು' ಅಂಗಡಿಯವನ ಉತ್ತರ
ಆತ
ಯಾಕೋ ಚಡಪಡಿಸಿದ.
ನನ್ನ
ಬಿಸಿ ಬಿಸಿ ಕಾಫಿ ಬಂದಾಯ್ತು. ಅದನ್ನು ಸವಿಯುತ್ತಾ, ಆ ಯುವಕ ಮತ್ತು
ಅಂಗಡಿಯವನ ನಡುವಿನ ಸಂಭಾಷಣೆಯನ್ನು ಗಮನಿಸ್ತಾ ಹೋದೆ.
"ದುಡ್ಡಿಲ್ಲಾ ಅಂದ್ರೆ ನಮ್ಮ ಅಂಗಡಿಗ್ಯಾಕಪ್ಪಾ ಬಂದು, ಬೆಳಿಗ್ಗೆ
ಬೆಳಿಗ್ಗೆ ಯಾಕೆ ತಲೆ ತಿಂತೀರೋ ?
ಜಾಗ
ಖಾಲಿ ಮಾಡು ಇಲ್ಲಿಂದ"
ಅಂಗಡಿಯವನ
ಆರ್ಭಟ.
ಅದೇನೆನಿಸಿತೋ
ನನಗೆ
ಅಂಗಡಿಯವನಿಗೆ
ಹೇಳಿದೆ
"
ಒಂದು ಪ್ಲೇಟ್ ಇಡ್ಲಿ - ಕಾಫಿ ಕೊಡಿ ಅವನಿಗೆ. ತಗೊಳ್ಳಿ ಈ ಹಣನ"
----
ನಾ
ಆಡಿದ ಮಾತು ಆ ಯುವಕನಿಗೇನೂ ಕೇಳಿಸಲಿಲ್ಲ
ಆದರೆ, ಆತ ಇಡ್ಲಿಯನ್ನು ಗಬಗಬನೆ ತಿಂದು ಕಾಫಿಯನ್ನು ಗಂಟಲಿಗೆ ಸುರಿದುಕೊಂಡ. ಆತನ ಹಸಿವಿಗೆ ತಾತ್ಕಾಲಿಕ ಶಮನ ಆಗಿತ್ತು. ನನಗೇನೋ ಪುಟ್ಟ ತೃಪ್ತಿ. ಆತ
ಹೊರಟು ಹೋದ. ನಾನೂ ನನ್ನ ಪಾಡಿಗೆ ಹೊರಟೆ
******
ಈಗ ಈ ಎರಡು ಪುಟ್ಟ
ಸಂಗತಿಗಳ ತಳುಕು
*******
40 ವರ್ಷಗಳ ಹಿಂದೆ,
ನನ್ನನ್ನು ಬೇಡದೆಯೇ, ನನ್ನಿಂದ ಸಹಾಯ ಪಡೆದ ಆ ಯುವಕ ಯಾರೋ ಏನೋ!!
ಸಿಂಗಪೂರ ನ ವಿಮಾನ
ನಿಲ್ದಾಣದಲ್ಲಿ,
ನಾನು ಬೇಡದೆಯೇ, ನನಗೆ ಸಹಾಯ ಮಾಡಿದ ಆ ವ್ಯಕ್ತಿ ಯಾರೋ ಏನೋ!!
ಅಂದು
ನೀಡಿದ್ದಕ್ಕೆ ಇಂದು ಪಡೆದೆನೇ ?
ಬದುಕಿನಲ್ಲಿ
ನಡೆದ ಇಂತಹ ಅನೇಕ ‘ಸಾಮಾನ್ಯ ಅನಿಸುವ, ಆದರೆ ಆಶ್ಚರ್ಯದ ಸಂಗತಿಗಳು’ ಸಂಭವಿಸಿವೆ.
ನಾನು ಬಾಲ್ಯದಲ್ಲಿ ಓದಿದ್ದ
ಹಾಗೂ
ನನ್ನಪ್ಪ ಅಮ್ಮ, ನನ್ನೊಳಗೆ ಬಲವಾಗಿ ಬಿತ್ತಿದ್ದ ಒಂದು ಸುಭಾಷಿತವನ್ನು ಸಾಬೀತು ಮಾಡಿದೆ
“YOU GET THE HELP IN
PROPORTION TO THE HELP YOU DO,
MAY NOT BE FROM SAME
PERSON”
OR
BUT MAY NOT BE IMMEDIATELY
*******
“ನೀವು ಮಾಡುವ
ಪ್ರತಿ ಸಹಾಯಕ್ಕೂ ಪ್ರತಿ ಸಹಾಯ ದೊರೆತೇ ದೊರೆಯುತ್ತೆ.
ಆದರೆ,
ಅದೇ
ವ್ಯಕ್ತಿಯಿಂದಲೇ ಅಲ್ಲದಿರಬಹುದು
ಅಥವಾ
ತಕ್ಷಣ
ಅಲ್ಲದಿರಬಹುದು
ಎಂದೋ..
ಯಾರಿಂದಲೋ..
ಯಾವ ರೂಪದಲ್ಲಿಯೋ...”
*******
ಜನ್ಮಜನ್ಮಾಂತರದ ಕರ್ಮ ಸಿದ್ಧಾಂತ
ನನಗಿನ್ನೂ ಅರ್ಥ ಆಗಿಲ್ಲ. ಆದರೆ , ನನ್ನ ಬದುಕಿನಲ್ಲಿಯೇ ನಡೆದ ಇಂತಹ
ಅನೇಕ ಸಂಗತಿಗಳು ಆಶ್ಚರ್ಯವನ್ನುಂಟು ಮಾಡಿದೆ.
ಇನ್ನೊಂದಿಷ್ಟು ಸಂಗತಿಗಳನ್ನು
ಮುಂದೆ ಹಂಚಿಕೊಳ್ಳುತ್ತೇನೆ.
********
ನಿಮ್ಮ ಜೀವನವೂ ಇಂತಹ ಹಲವಾರು ಸಂಗತಿಗಳ ಬೆಸುಗೆ ಅಲ್ಲವೇ? ಕೆದಕಿ ನೋಡಿ
ನಿಮ್ಮ ನೆನಪಿನ ಭಂಡಾರವನ್ನೊಮ್ಮೆ .
ಆಸಕ್ತಿ, ಸಮಯ ಇದ್ದರೆ ಇಲ್ಲಿ ಹಂಚಿಕೊಳ್ಳಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ