ಗಣಪಜ್ಜ ಅನಕ್ಷರಸ್ತ, ಆದರೆ ಅವನ ಆಚಾರ-ವಿಚಾರ-ಅನುಸರಣೀಯ
ಆದರೆ
ಅವನ ಆಚಾರ-ವಿಚಾರ-ಅನುಸರಣೀಯ
{ವಿ.ಸೂ.
******
" ಅಲ್ದಾ ಗಣಪಜ್ಜ ,
ನೀ ಎಂತ ಬ್ರಾಹ್ಮಣನೋ ಮಾರಾಯಾ. ಮನೇಲಿ ದೇವರ ಪೂಜೆ ಇಲ್ಲೆ. ಮಂತ್ರ, ಶ್ಲೋಕ ಪಠಣ ಇಲ್ಲೆ. ದೇವಸ್ತಾನಕ್ಕೂ ಬತ್ತಲ್ಲೆ.
ಅದೇನು ಜನ್ಮವೋ ನಿಂದು?
"
ಹೀಗೆ ಒಂದೇ ಸಮನೆ, ಗಣಪಜ್ಜನ ಮೇಲೆ, ಕಟುವಾದ ದೂಷಣೆಗಳ ಮಳೆ ಸುರಿಸಿದರು, ಕೃಷ್ಣಭಟ್ಟರು.
ಆ ಸೀಮೆಯಲ್ಲಿಯೇ ಹೆಸರಾಂತ ಪುರೋಹಿತರು, ಧಾರ್ಮಿಕ ನೇಮ, ನಿಷ್ಠೆ, ಆಚರಣೆಯ ಶಿಸ್ತಿನ ಮನುಷ್ಯ. ಅವರ ಮಾತಿಗೆ ಎದುರುತ್ತರ ಕೊಡುವ ಧೈರ್ಯ ಯಾರಿಗೂ ಇರ್ತಿರ್ಲೆ.
ಆದರೆ,
ಗಣಪಜ್ಜ ,
ಅನಕ್ಷರಸ್ತ,ಮುಗ್ಧ. ಒಂಥರಾ ಪಾಪದವ.
" ಎಂತ ಹೇಳ್ತ್ರಾ ಭಟ್ರೆ.
ಆನು ಬ್ರಾಹ್ಮಣ ಅಲ್ದಾ?
ದೇವರು, ನೇಮ , ನಿಷ್ಟೆ ಇಲ್ಯಾ?
ಆ ಹಾಸ ಸೊಪ್ಪೇ, ಬಿಲ್ವಪತ್ರೆ. ಪುಷ್ಪ.
ಅದೇ ಎಮ್ಮನೆ ದೇವ್ರಿಗೆ ಅಭಿಷೇಕ.
ಅದ್ನೆಲಾ ಮಾಡಕಾದ್ರೆ, ಎಂಗೆ ಅರ್ಥ ಆಪ ಕನ್ನಡ ಭಾಷೆಲಿ, ಉದಯರಾಗದ ಹಾಡು, ಭಜನೆ ಹೇಳ್ಕ್ಯತ್ತಿ.
ಮನಿಗೆ ಬಂದು , ಕೊಟ್ಟಿಗೆಲಿಪ್ಪ ನಾಕು ದನಕರದ ವಾಗೈತಿ ಮಾಡ್ತಿ.
ಕೊನೆಕೊಯ್ಲು ಆದಮೇಲೆ,
ಎಲ್ಲಾ ಆಳುಗಳನ್ನೂ ಕರೆದು ಒಂದು ಪಾಯ್ಸದ ಊಟ ಹಾಕ್ತಿ.
ಅದೇ ಆನು ಮಾಡೋ ಪಾರಾಯಣ, ಸಂತರ್ಪಣೆ.
ಈಗ ಹೇಳಿ ಆನು ಬ್ರಾಹ್ಮಣ ಹೌದಾ , ಅಲ್ದಾ ಅಂತ.
ನೀವೆಂತ ಎನ್ನ ಬಗ್ಗೆ ದೂಷಣೆ ಮಾಡದು?
"
-----------
-----------
ಕೃಷ್ಣಭಟ್ಟರು ಸ್ಥಬ್ದರಾದರು.
-----------
ಗಣಪಜ್ಜ ಮುಂದುವರೆಸಿ ಹೇಳಿದ
"
ಭಟ್ರೇ, ಒಂದು ವಿಚಾರ ಹೇಳ್ತಿ, ಸರಿಯಾಗಿ ಕೇಳ್ಕ್ಯಳಿ.
-----------
ಗಣಪಜ್ಜ ,
ತನ್ನದು 'ಕರ್ಮಮಾರ್ಗ',
********
********
ಈ ಘಟನೆನ, 50 ವರ್ಷಗಳ ಹಿಂದೆ, ಎನ್ನ ಅಪ್ಪ , ( ಶೇಡಿಮನೆ ನಾರಣಣ್ಣ ) , ಆನು ಪ್ರಾಥಮಿಕ ಶಾಲೆಲಿದ್ದಾಗ ಹೇಳಿದ್ದು.
************
ನಂತರ, ಶಾಲೆಲಿ ಗುರುಗಳು
ಬಸವಣ್ಣನವರ
'ಕಾಯಕವೇ ಕೈಲಾಸ'
ಇಂಗ್ಲಿಷ್ ಪಾಠದಲ್ಲಿ
'Work is worship'
---
ಭಗವದ್ಗೀತೆಯ
"ಕರ್ಮಣ್ಯೇವಾಧಿಕಾರಸ್ತೇ...."
----
ಕಲಿಸಿಕೊಟ್ಟಾಗ ಅನಿಸ್ತಾ ಇದ್ದದ್ದು:
" ಎನ್ನಪ್ಪ, ಗಣಪಜ್ಜನ ಘಟನೆ ಮೂಲಕ, ಇದನ್ನು ಎಂದೋ ಎನಗೆ ಕಲಿಸಿದ್ನಲ್ಲಾ"
********
********
ಇಂದು ಮೆಲುಕು ಹಾಕ್ತಾ ಇರಕಾದ್ರೆ ಎನಗನ್ಸಿದ್ದು:
-----
4 ದಶಕಗಳ ಎನ್ನ ವೃತ್ತಿಜೀವನದ
ಯಶಸ್ಸಿಗೆ,
-----
ನಿಮ್ಮ ಬದುಕಿನಲ್ಲಿಯೂ ಇಂತಹ ಗಣಪಜ್ಜರು ಪ್ರಭಾವ ಬೀರಿರ್ತ ತಾನೇ?

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ