ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ್ವಲ್ಪ ಕಣ್ ಬಿಟ್ಟು ಮೇಲೆ ನೋಡಣ್ಣೋ - ಯಾರು ಬೆಳಕನ್ನು ಚೆಲ್ತಾ ಇರೋದು ಅಂತ ?

ಇಮೇಜ್
    ಪದಪ್ರಣತಿ ನನ್ನ – ಹೂಗಿಡದ ನಡುವಿನ  ಸಲ್ಲಾಪ ---------- ಸಂಚಿಕೆ #9 ---------- ಸ್ವಲ್ಪ ಕಣ್ ಬಿಟ್ಟು ಮೇಲೆ ನೋಡಣ್ಣೋ   - ಯಾರು ಬೆಳಕನ್ನು ಚೆಲ್ತಾ ಇರೋದು ಅಂತ ? ----------- ಮುಂಜಾನೆ ಸಮಯ   6-00 ಇದ್ದಿರಬಹುದು. ಮನೆಯ ಬಾಗಿಲನ್ನು ತೆರೆದು , ಆಚೆ ಬಂದೆ , ಕಸದಬುಟ್ಟಿಯನ್ನು ಹೊರಗಿಡಲು.   ರಾತ್ರಿ ,   ತನ್ನ ಸರದಿ( shift )ಯ ಕರ್ತವ್ಯ ( duty ) ಮುಗಿಸಿ ,     ಹಗಲಿಗೆ         ವರ್ಗಾಯಿಸ್ತಾ ಇತ್ತು. ಪ್ರಶಾಂತ ವಾತಾವರಣಕ್ಕೆ ಸುಂದರ ಮೆರಗು ಆವರಿಸಿದ್ದದ್ದು ನಸು ಬೆಳಕಿನಿಂದ.   ಸೂರ್ಯೋದಯ ಆಗಿರಲಿಲ್ಲ. ಆದರೂ ಹಿತವಾದ ಬೆಳಗು.   ನನಗರಿವಿಲ್ಲದಂತೆಯೇ ನನ್ನಂತರಂಗದಿಂದ  “ಬೆಳಕು ನೀಡಲಾರಂಭಿಸಿದ ಆ ಸೂರ್ಯನಿಗೆ ನಮೋ ನಮಃ” ಎಂಬ ಉದ್ಗಾರ. ಕಣ್ಣು ಮುಚ್ಚಿದ್ದೆ. ಭಕ್ತಿ- ಕೃತಜ್ನತೆ ಎರಡೂ ಮಿಶ್ರಣವಾಗಿತ್ತು ನನ್ನೊಳಗಿನ ಭಾವದಲ್ಲಿ. ಇದ್ದಕ್ಕಿದ್ದಂತೆಯೇ , ನನ್ನ ತನ್ಮಯತೆಗೆ ಭಗ್ನ , ಯಾರದ್ದೋ ಎತ್ತರದ ಧ್ವನಿಯಿಂದಾಗಿ. “ಹಲೋ , good morning , ಏನಣ್ಣಾ ನೀನು ಮಾಡ್ತಾ ಇರೋದು ಸರೀನಾ ?” ಯಾರಪ್ಪಾ ಇದು , ಬೆಳಿಗ್ಗೆ ಬೆಳಿಗ್ಗೆ , ನನ್ನ ಮೇಲೆ ತಪ್ಪು ಹೊರಿಸ್ತಾ ಇರೋದು ಅಂತ ನೋಡಿದ್ರೆ ….!! ನನ್ನನ್ನು   ಆಗೊಮ್ಮೆ , ಈಗೊಮ್ಮೆ ಸಂವಾದಕ್ಕೆ   ಸೆಳೆದು , ನನ್ನ ತಲೆಕೆಡಿಸ್ತಾ (ಗಂ...

“ಅಜ್ಜಾ, ದೇವರು bad boy”

ಇಮೇಜ್
ತೊದಲುನುಡಿದೀಪ { ಬರಹ ಮಾಲಿಕೆ } *********** ಸಂಚಿಕೆ #6  ********* “ ಅಜ್ಜಾ,  ದೇವರು bad boy” ******* ಕೃಪೆ : ಶ್ರೀಮತಿ ಜ್ಯೋತಿ ಕಾಮತ್ ( ನಾವು ಪ್ರತಿದಿನ ಹಾಲು ಮೊಸರು ಖರೀದಿಸುವ ಅಂಗಡಿಯವರು ) ಹಂಚಿಕೊಂಡ ,   ಅವರ ಮೊಮ್ಮಗಳ ಜೊತೆಯ ಸ್ವಾರಸ್ಯಕರ   ಸಂವಾದಕ್ಕೆ , ನಾನು ಸ್ವಲ್ಪ ‘ ರೆಕ್ಕೆ ಪುಕ್ಕ ’ ಹಚ್ಚಿದ್ದೇನೆ ********** ಎರಡೂವರೆ ವರ್ಷದ ಮೊಮ್ಮಗಳು  ನನ್ನ ತೊಡೆ ಮೇಲೆ ಕುಳಿತಿದ್ಲು -   ತನ್ನ ಗೊಂಬೆ ಲಚ್ಚಿಗೆ ಜೋಗುಳ ಹಾಡಿ ಮಲಗಿಸ್ತಾ ಇದ್ಲು. ಇದ್ದಕ್ಕಿದ್ದಂತೆಯೇ ಎಸೆದಳು ಒಂದು ಪ್ರಶ್ನೇನಾ “ ಅಜ್ಜಾ ದೇವರು good boy ನಾ bad boy ನಾ ?” { ಥಟ್ಟನೆ ಉತ್ತರಿಸಿದೆ } “ ದೇವರು good boy ಪುಟ್ಟ ” “ ಅಜ್ಜಾ ನಿನ್ನ ಹೆಸರೇನು ?” { ಇದೇನಪ್ಪಾ , ಮೊದಲನೇ ಪ್ರಶ್ನೆಗೂ ಎರಡನೇ ಪ್ರಶ್ನೆಗೂ ಸಂಬಂಧವೇ ಇಲ್ಲ ??   - ಇವಳು ಯಾವಾಗ್ಲೂ ಇದೇ ಥರ ಪ್ರಶ್ನೆ ಕೇಳೋದು ) “ನನ್ನ ಹೆಸರು ಚಿದಂಬರ – ನೀನು ಚಿದು ಅಜ್ಜ ಅಂತ ಕರೀತೀಯಲ್ಲ ?” { ಎರಡು ನಿಮಿಷ ಅಲ್ಪವಿರಾಮ , ತನ್ನ ಗೊಂಬೆ ಲಚ್ಚಿ ಮಲಗಿಸೋದ್ರಲ್ಲಿ ಅವಳು ನಿರತ } ........ ......... ಮತ್ತೆ ಪ್ರಶ್ನೆ “ಅಜ್ಜಾ ನಿನ್ನಪ್ಪನ ಹೆಸರು ಏನು ?” { ಓಹ್..ಇದು ಸುಲಭದ   ಸುಲಭದ ಪ್ರಶ್ನೆ- ತಕ್ಷಣ ಬಿಸಾಕಿಬಿಟ್ಟೆ ನನ್ನ ಉತ್ತರ } “ ನನ್ನ ಅಪ್ಪನ ಹೆಸ್ರು ನಾರಾಯಣ...