ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಷ್ಟವೋ ಅಥವಾ ಪ್ರೀತಿಯೋ?

ಇಮೇಜ್
  ಇಷ್ಟ‌  v/s ಪ್ರೀತಿ ------- ಗಿಡದ ಜೊತೆ ಸಲ್ಲಾಪ ----------- ಸಂಚಿಕೆ #10 ************************ ಬಹಳ ದಿನಗಳ ನಂತರ,  ನನ್ನ 'ತರ್ಲೆ ಸ್ನೇಹಿತೆ'  ಹೂವಿನಗಿಡದ ಬಳಿ ಹೋ‍ದೆ. ಗಿಡ ಅದೇನೋ ಕಾತುರತೆ ತೋರಿಸಿತು. "ಒಹ್...ಬಂದ್ಯಾ...ಬಾ! ಬಾ! ಅಂದಿನಿಂದ ನಿನಗೆ  ಒಂದು ಪ್ರಶ್ನೆ ಕೇಳಬೇಕು ಅಂತ ಕಾಯ್ತಾ ಇದ್ದೆ" 'ಅಯ್ಯೋ ದೇವರೇ! ಏನು ಪ್ರಶ್ನೆ ಕೇಳುತ್ತಪ್ಪಾ'  ಎಂಬ ಆತಂಕ ನನಗೆ. ಸಾಮಾನ್ಯವಾಗಿ ನನ್ನನ್ನು ಗೋಜಲಿಗೆ ಸಿಕ್ಕಿಸುವ ಪ್ರಶ್ನೆಗಳನ್ನು ಕೇಳಿ ಮಜಾ ಪಡೆಯೋ ಸ್ವಭಾವ ಈ ಗಿಡದ್ದು. { ನಾ ಬರೆದಿರೋ ಹಿಂದಿನ 9 ಸಂಚಿಕೆಗಳನ್ನು ಓದಿದೋರಿಗೆ ಗೊತ್ತಿರುತ್ತೆ } " ಸರಿ, ಅದೇನು ? ಕೇಳು" ಗಿಡ ಮತ್ತೆ ಎಚ್ಚರಿಸಿತು  " ಪ್ರಶ್ನೆ ತುಂಬಾ  ಸರಳ ಅನಿಸಬಹುದು. ಥಟ್ ಅಂತ ಉತ್ತರ ಕೊಟ್ಟುಬಿಡಬೇಡ" " ಆಯ್ತು , ಅದೆಷ್ಟು build up ಕೊಡ್ತೀಯಾ? ಬೇಗ ಬೇಗ ಕೇಳು, ನನಗೆ ಬೇರೆ ಕೆಲ್ಸ ಇದೆ"  ಗಿಡ ಕೇಳಿಯೇಬಿಟ್ಟಿತು " ನೀನು ನನ್ನನ್ನು ಇಷ್ಟ ಪಡ್ತೀಯಾ? ಅಥವಾ ಪ್ರೀತಿಸ್ತೀಯಾ? " "ಆ..., ಇನ್ನೊಮ್ಮೆ ಕೇಳು" " ನೀನು ನನ್ನನ್ನು ಇಷ್ಟ ಪಡ್ತೀಯಾ? ಅಥವಾ ಪ್ರೀತಿಸ್ತೀಯಾ? " ----------------- ನಾನು ಜೋರಾಗಿ ನಕ್ಕುಬಿಟ್ಟೆ.  "ಅಯ್ಯ....ಇದೂ ಒಂದು ಪ್ರಶ್ನೆನಾ?  ಸುಮಾರು 15 ವರ್ಷಗಳಿಂದ ನಿನ್ನ ಒಡನಾಟ ನನಗೆ. ನಾ ನಿನ್ನನ್ನು ಬಹ...

ಡಾ.ಎಚ್.ಎಸ್. ಮೋಹನ್ ಅವರ ಹೊಸಮನೆಯ ಉದ್ಘಾಟನೆ ಶುಭ ಸಂದರ್ಭ / ಯಕ್ಷಗಾನ

ಇಮೇಜ್
  ಡಾ.ಎಚ್.ಎಸ್. ಮೋಹನ್ ಅವರ ಹೊಸಮನೆಯ ಉದ್ಘಾಟನೆ ಶುಭ ಸಂದರ್ಭ / ಯಕ್ಷಗಾನ ಮುದ ಕೊಟ್ಟ ಕ್ಷಣಗಳು                                                                                              -ಚಿದಂಬರ ಕಾಳಮಂಜಿ ಬೆಂಗಳೂರು ನಿವಾಸಿಯಾಗಿರುವ ನಾನು , ಡಾ.ಮೋಹನ್ ಅವರ ಆತ್ಮೀಯ ಕರೆಯಿಂದಾಗಿ , ಅವರ ಹೊಸಬಾಳೆಯ   ಹೊಸಮನೆಯ ಉದ್ಘಾಟನೆಯ ನೆಪದಲ್ಲಿ ,   ಸ್ನೇಹಮಿಲನ ಮತ್ತು ಯಕ್ಷಗಾನದವನ್ನು ಆನಂದಿಸುವ ಸಲುವಾಗಿಯೇ ಹೋಗಿ ಬಂದೆ . ಈ ಸಂದರ್ಭದಲ್ಲಿ ನನಗೆ ತುಂಬಾ ಖುಷಿ ಕೊಟ್ಟಿದ್ದು ,   ಯಕ್ಷಗಾನ – ‘ ಜಾಂಬವತಿ ಕಲ್ಯಾಣ ’     ಇತ್ತೀಚೆಗೆ ಯಾಕೋ ನಾನು ಯಕ್ಷಗಾನ ನೋಡಿ ಖುಷಿಪಟ್ಟದ್ದು ಕಡಿಮೆಯೇ , ನನ್ನದೇ ಆದ ಕಾರಣಗಳಿಂದ...

ಅಗಲಿದ, ಆತ್ಮೀಯ, ಕಾಳಮಂಜಿ ಶ್ರೀನಿವಾಸನಿಗೆ, ಕಾಳಮಂಜಿ ಚಿದಂಬರಣ್ಣನಿಂದ ಒಂದು ಪತ್ರ (ನುಡಿನಮನ)

ಇಮೇಜ್
ಅಗಲಿದ ,  ಆತ್ಮೀಯ,  ಕಾಳಮಂಜಿ ಶ್ರೀನಿವಾಸನಿಗೆ , ಕಾಳಮಂಜಿ ಚಿದಂಬರಣ್ಣನಿಂದ  ಒಂದು ಪತ್ರ (ನುಡಿನಮನ)                                                                       ಏಪ್ರಿಲ್   2025 ಆತ್ಮೀಯ ಜನ್ನೆಮನೆ ಶ್ರೀನಿವಾಸ.  ಕಾವೆಂಶ್ರೀ ( ಕಾ ಳಮಂಜಿ ವೆಂ ಕಟಗಿರಿಯಪ್ಪ ಶ್ರೀ ನಿವಾಸ ) ಎಂದೇ ನೀನು ಉತ್ತರಕರ್ನಾಟಕ ಪ್ರಾಂತ್ಯದಲ್ಲಿ  ಪರಿಚಿತ , ಪ್ರಸಿದ್ಧ.  ಆದರೆ ನನಗೆ ಮತ್ತು ನಮ್ಮ ಹಳ್ಳಿ ಕಾಳಮಂಜಿಯ ನಿನ್ನ  ನಿಕಟವರ್ತಿಗಳಿಗೆ ಹಾಗೆ ಕರೆದರೆ ಯಾಕೋ ಆಪ್ತತೆ ಮೂಡುವುದಿಲ್ಲ. ಆದ್ದರಿಂದಲೇ ನಿನ್ನನ್ನು  ಜನ್ನೆಮನೆ ಶ್ರೀನಿವಾಸ ಎಂಬ ಸಂಬೋಧನೆಯಿಂದ ಪ್ರಾರಂಭಿಸಿದೆ. ಇತ್ತೀಚೆಗೆ ನೀನು ತೀವ್ರ ಅನಾರೋಗ್ಯಕ್ಕೆ ಬಲಿಯಾಗಿ , 58 ನೇ ವಯಸ್ಸಿಗೇ , ಈ ಲೋಕದಿಂದ ದೂರವಾಗಿಬಿಟ್ಟೆ. ತುರ್ತಾಗಿ ನಿರ್ಗಮಿಸಿಬಿಟ್ಟೆ.   ನೀನಿಲ್ಲ ಎಂಬುದನ್ನು  ಊಹಿಸಲೂ ಆಗ್ತಾ ಇಲ್ಲ. ಈ ಸಂದರ್ಭದಲ್ಲಿ , ಯಾಕೋ ನನ್ನಂತರಾಳದಿಂದ ಸ್ಫುರಿಸುತ್ತಿರುವ ಅನಿಸಿಕೆ – ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂಬ ತುಡಿತ ನನಗೆ.  ಆದರೆ , ಒಂದು ಬಗೆಯ ತಳಮಳ , ಆ...