ಪೋಸ್ಟ್‌ಗಳು

ಜುಲೈ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೂರ್ಯಮಾಮ ಕೂ...ಕಿ ( ತೊದಲುನುಡಿದೀಪ ಸಂಚಿಕೆ #2)-ಬರಹ

ಇಮೇಜ್
  ನಮ್ಮನೆ ಪುಟ್ಟಪ್ರಣತಿ ಪ್ರಸ್ತುತಿ  ----------------- ತೊದಲುನುಡಿದೀಪ { ಬರಹ ಮಾಲಿಕೆ } ಸಂಚಿಕೆ #2  ***** ಇಂದಿನ ಸಂಚಿಕೆ ಶೀರ್ಷಿಕೆ ------- ಸೂರ್ಯಮಾಮ ಕೂ...ಕಿ *** ಇಂದಿನ ವಿಷಯಕ್ಕೆ ಬರುವ ಮುನ್ನ ಒಂದು ಕಿರು ಪ್ರಸ್ತಾವನೆ ***** ಏನಿದು ಬರಹಮಾಲಿಕೆ ‘ ತೊದಲುನುಡಿದೀಪ ‘ ? ****** ನಮ್ಮನೆ ಪುಟ್ಟ ಪ್ರಣತಿ , ಒಂದೂವರೆ ವರ್ಷದ ಮೊಮ್ಮಗಳು ‘ ಆರೋಹಿ ’ ಯ ಇದುವರೆಗಿನ ಮತ್ತು ಮುಂದಿನ ಒಡನಾಟದಲ್ಲಿ , ನಮ್ಮ ಕುಟುಂಬದವರು { ಪುಟ್ಟಿಯ ಅಮ್ಮ , ಅಪ್ಪ , ಅಜ್ಜ , ಅಜ್ಜಿ } ಪಡೆದ ಅನುಭವಗಳನ್ನುಬರಹ ರೂಪದಲ್ಲಿ ಅಭಿವ್ಯಕ್ತಿಸಿ – ಸಂಗ್ರಹಿಸುವ ಹಂಬಲ ನನಗೆ. ನಂಗೊತ್ತು , ನಿಮ್ಮನೆಯ ಮಕ್ಕಳು , ಮೊಮ್ಮಕ್ಕಳಲ್ಲೂ   ಇಂತಹ ಕ್ಷಣಗಳನ್ನು ಆನಂದಿಸ್ತೀರ ಅಂತ . ---- ಎಷ್ಟಂದರೂ "ಹೆತ್ತವರಿಗೆ ಹೆಗ್ಗಣವೂ ಮುದ್ದು" ಅಲ್ವೇ ? ನಾವೇನೂ ಹೊರತಲ್ಲ ಈ ಗಾದೆಗೆ.   ಆದರೆ , ಕೇವಲ ನಮ್ಮನೆ ಪುಟಾಣಿಯ   ‘ ಲೀಲೆ ’ ಗಳನ್ನದೆಯೇ , ನನ್ನ ಅನುಭವಕ್ಕೆ ಬಂದ ಬೇರೆ ಮಕ್ಕಳ ಸಂಗತಿಗಳನ್ನೂ ಬರೆಯುವ ಹಂಬಲ ಇದೆ.   ----- ಈ ಬರಹಮಾಲಿಕೆಗೆ ಏನು ಪ್ರೇರೇಪಣೆ ? ---- ನನ್ನ ಪ್ರಥಮ ಬರಹವನ್ನು ತುಂಬಾ casual ಆಗಿ ಮೊನ್ನೆ ಪ್ರಕಟಿಸಿದ್ದೆ ಫೇಸ್ ಬುಕ್ ನಲ್ಲಿ. ಅದನ್ನು ಓದಿ- ಪ್ರತಿಕ್ರಿಯಿಸಿದವರ ಸಂಖ್ಯೆ ನಾ ನಿರೀಕ್ಷಿಸಿದ್ದಕ್ಕಿಂತಾ ಹೆಚ್ಚು.ನಮಗೆ ಸಂತಸದ ಆಶ್ಚರ್ಯವನ್ನು ಮೂಡಿಸಿತು. ಅಂದರೆ ಇದರ ಅರ್ಥ , ...

ಸೂರ್ಯಮಾಮ ಎಲ್ಲಿ?- ಮೊಮ್ಮಗಳ ಉತ್ತರ ( ತೊದಲುನುಡಿದೀಪ ಸಂಚಿಕೆ#1 ) -ಬರಹ

ಇಮೇಜ್
  ಮೊಮ್ಮಗಳ ಜೊತೆ ಸರಸ ಸಲ್ಲಾಪ #1 🧏🧏‍♂️ ಸೂರ್ಯಮಾಮ ಎಲ್ಲಿ? 👩🏻👩🏻 ಒಂದೂವರೆ ವರ್ಷದ ಮೊಮ್ಮಗಳು 'ಆರೋಹಿ' ಜೊತೆ, ನನ್ನದು, ಪ್ರತಿ ಬೆಳಿಗ್ಗೆ ಒಂದು ಚಂದದ ವಾಯುವಿಹಾರ.  ನನಗೆ ಆಕರ್ಷಣೆ ಅಂದರೆ  ಒಂದೇ ಸಮನೆ ನನ್ನ ಅವಳ ನಡುವಿನ ಮಾತುಕತೆ. ಆಕೆಯ ತೊದಲು ಮಾತು, ಮುಗ್ಧಪ್ರಶ್ನೆಗಳು,  ಅಂಗಿಕ ಅಭಿನಯ,ನಮ್ಮ ವಿಹಾರವನ್ನು‌ ಸ್ವಾರಸ್ಯಕರ ಮಾಡುತ್ತೆ. ******* ಇಂದಿನ ಪುಟ್ಟ ಸಂಗತಿ ****** ಪ್ರತಿದಿನ ಆಕಾಶದ  'ಸೂರ್ಯಮಾಮ' ನಿಗೆ  ಒಂದು‌ ನಮಸ್ಕಾರ ಮಾಡೋ ರೂಢಿ ಇದೆ. ಆದರೆ...... ಇಂದು ಮಳೆಯ ಮಬ್ಬು ವಾತಾವರಣ. ಸೂರ್ಯ ಕಾಣಿಸ್ತಾನೇ ಇರಲಿಲ್ಲ. ------- ನಾ ಹೇಳಿದೆ "ಪುಟ್ಟಿ,  ಇವತ್ತು ಸೂರ್ಯಮಾಮ ಕಾಣಸ್ತಾನೇ ಇಲ್ಯಲೇ?" ತಕ್ಷಣ ನಮ್ಮ ಪುಟ್ಟಿ ಕೊಟ್ಟ ಉತ್ತರ ಕೇಳಿ  ನನಗೆ ಆಶ್ಚರ್ಯ ಮತ್ತು ಖುಷಿಯಾಯ್ತು.  ಒಬ್ಬ ಕವಿ,  ಆ ಮುಗ್ಧಳ ಮನಸ್ಸೊಳಗೆ ಅಡಗಿಕುಳಿತಂತೆ ಭಾಸವಾಯ್ತು ---- ಆಕೆ ಹೇಳಿದ್ದು ಇಷ್ಟೇ: "  ಅಜ್ಜ, ಮಳೆಯಿಂದ ಸೂರ್ಯಮಾಮ ಒದ್ದೆ ಒದ್ದೆಯಾಯ್ದ.  ಡ್ರೆಸ್ಸ್ ಚೇಂಜ್ ಮಾಡಕೆ ಮೋಡದ ಹಿಂದೆ ಹೋಯ್ದ.  ಸ್ವಲ್ಪ ಹೊತ್ತಿಗೇ ಬತ್ತ ಇರು" ******* ವಾವ್.. ಎಷ್ಟು ಸರಳ, ಸುಂದರ ಕಲ್ಪನೆ  ಅಲ್ವೇ? **** ಭಲೇ..ಮೊಮ್ಮಗಳೇ!

ನನ್ನ 66 ರ ಜನ್ಮದಿನದಂದು ಹೀಗೊಂದು ಕೃತಜ್ಞತೆ-ಬರಹ

ಇಮೇಜ್
ನನ್ನ 66 ರ ಜನ್ಮದಿನದಂದು ಹೀಗೊಂದು ಕೃತಜ್ಞತೆ 66 ನೇ ವಯಸ್ಸಿನ ಹೊಸಿಲಲ್ಲಿದ್ದೇನೆ ನಾನು ಇಂದು. -------- ವೃತ್ತಿ , ಪ್ರವೃತ್ತಿ ಮತ್ತು ಕುಟುಂಬ ಮೂರೂ ಆವರಣದಲ್ಲಿ , ಜೀವನವನ್ನು ‘ ನಿತ್ಯೋತ್ಸವ ’ ವನ್ನಾಗಿ ಆಚರಿಸಿ , ಒಂದು ಮಟ್ಟದ ಸಾರ್ಥಕತೆ ಪಡೆದಿದ್ದೇನೆ. ಧನ್ಯತಾ ಭಾವವವಿದೆ. ಈ ಸಂಭ್ರಮದ ಕ್ಷಣದಲ್ಲಿ , ಒಮ್ಮೆ ನಡೆದುಬಂದ ದಾರಿಯ ಅವಲೋಕಿಸಿ , ಕೃತಜ್ಞತೆ ಅರ್ಪಿಸುವ ಕರ್ತವ್ಯ ಈ ಬರಹದ ಮೂಲಕ. ---------- ಸ್ವಾರಸ್ಯ ಅಂದರೆ ಈ ಬರಹದ ಪ್ರಕ್ರಿಯೆಯಲ್ಲಿ , ನನಗರಿವಿಲ್ಲದಂತೆಯೇ ನಾ ನಡೆದು ಬಂದ ದಾರಿಯ ಸ್ಥೂಲ ಅವಲೋಕನವೇ ಆಗಿಬಿಟ್ಟಿದೆ. ----------- ಇದು ನನ್ನ ವೈಯುಕ್ತಿಕ ಜೀವನದ ಸ್ವಗತ. ಆದರೂ ಯಾಕೆ ಪ್ರಕಟಿಸಿದ್ದೇನೆ ? { ಒಂದು ರೀತಿಯ ಮುಜುಗುರದಲ್ಲೇ ಇದನ್ನು ಬರೆದಿದ್ದೇನೆ – ಕಾರಣ ಅದ್ಯಾವ ದೊಡ್ಡಮನುಷ್ಯ ನಾನು , ಇಂಥದ್ದನ್ನು ಬರೆಯುವುದಕ್ಕೆ ?.... ಅನ್ನೋ ಭಾವವೂ ಒಂದುಕಡೆ !! } ************* ಮೂರು ಕಾರಣಗಳು. 1. ನನ್ನ ಧನ್ಯತಾ ಭಾವವನ್ನು ನಾಕು ಜನರೊಂದಿಗೆ ಹಂಚಿಕೊಂಡು ಖುಶಿಪಡುವುದಕ್ಕಾಗಿ. 2. ಜನ್ಮದಿನದಂದು , ನನ್ನಂತಹ , ಇಳಿ ವಯಸ್ಸಿನ ಬಂಧುಮಿತ್ರರಿಗೆ ಈ ಬಗೆಯ ಭಾವನೆಗಳು ಬರುತ್ತವೆಯೇ ಎಂದು ತಿಳಿದುಕೊಳ್ಳುವ ಕುತೂಹಲ. 3. ನನಗಿಂತ ಕಿರಿಯರಿಗೆ ಇದು ಒಂದು ರೀತಿ ‘ ಮಾರ್ಗದರ್ಶಿ ’ ಆದರೂ ಆಗಬಹುದೇನೋ! ...