ಸೂರ್ಯಮಾಮ ಎಲ್ಲಿ?- ಮೊಮ್ಮಗಳ ಉತ್ತರ ( ತೊದಲುನುಡಿದೀಪ ಸಂಚಿಕೆ#1 ) -ಬರಹ

 


ಮೊಮ್ಮಗಳ ಜೊತೆ ಸರಸ ಸಲ್ಲಾಪ #1
🧏🧏‍♂️
ಸೂರ್ಯಮಾಮ ಎಲ್ಲಿ?
👩🏻👩🏻
ಒಂದೂವರೆ ವರ್ಷದ ಮೊಮ್ಮಗಳು 'ಆರೋಹಿ' ಜೊತೆ, ನನ್ನದು, ಪ್ರತಿ ಬೆಳಿಗ್ಗೆ ಒಂದು ಚಂದದ ವಾಯುವಿಹಾರ. 
ನನಗೆ ಆಕರ್ಷಣೆ ಅಂದರೆ 
ಒಂದೇ ಸಮನೆ ನನ್ನ ಅವಳ ನಡುವಿನ ಮಾತುಕತೆ.
ಆಕೆಯ ತೊದಲು ಮಾತು, ಮುಗ್ಧಪ್ರಶ್ನೆಗಳು,  ಅಂಗಿಕ ಅಭಿನಯ,ನಮ್ಮ ವಿಹಾರವನ್ನು‌ ಸ್ವಾರಸ್ಯಕರ ಮಾಡುತ್ತೆ.
*******
ಇಂದಿನ ಪುಟ್ಟ ಸಂಗತಿ
******
ಪ್ರತಿದಿನ ಆಕಾಶದ 
'ಸೂರ್ಯಮಾಮ' ನಿಗೆ
 ಒಂದು‌ ನಮಸ್ಕಾರ ಮಾಡೋ ರೂಢಿ ಇದೆ.
ಆದರೆ......
ಇಂದು ಮಳೆಯ ಮಬ್ಬು ವಾತಾವರಣ.
ಸೂರ್ಯ ಕಾಣಿಸ್ತಾನೇ ಇರಲಿಲ್ಲ.
-------
ನಾ ಹೇಳಿದೆ
"ಪುಟ್ಟಿ, 
ಇವತ್ತು ಸೂರ್ಯಮಾಮ ಕಾಣಸ್ತಾನೇ ಇಲ್ಯಲೇ?"
ತಕ್ಷಣ ನಮ್ಮ ಪುಟ್ಟಿ ಕೊಟ್ಟ ಉತ್ತರ ಕೇಳಿ 
ನನಗೆ ಆಶ್ಚರ್ಯ ಮತ್ತು ಖುಷಿಯಾಯ್ತು. 
ಒಬ್ಬ ಕವಿ,  ಆ ಮುಗ್ಧಳ ಮನಸ್ಸೊಳಗೆ ಅಡಗಿಕುಳಿತಂತೆ ಭಾಸವಾಯ್ತು
----
ಆಕೆ ಹೇಳಿದ್ದು ಇಷ್ಟೇ:

ಅಜ್ಜ,
ಮಳೆಯಿಂದ ಸೂರ್ಯಮಾಮ ಒದ್ದೆ ಒದ್ದೆಯಾಯ್ದ. 
ಡ್ರೆಸ್ಸ್ ಚೇಂಜ್ ಮಾಡಕೆ ಮೋಡದ ಹಿಂದೆ ಹೋಯ್ದ. 
ಸ್ವಲ್ಪ ಹೊತ್ತಿಗೇ ಬತ್ತ ಇರು"
*******
ವಾವ್..
ಎಷ್ಟು ಸರಳ, ಸುಂದರ ಕಲ್ಪನೆ  ಅಲ್ವೇ?
****
ಭಲೇ..ಮೊಮ್ಮಗಳೇ!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ