ಸೂರ್ಯಮಾಮ ಕೂ...ಕಿ ( ತೊದಲುನುಡಿದೀಪ ಸಂಚಿಕೆ #2)-ಬರಹ
ನಮ್ಮನೆ
ಪುಟ್ಟಪ್ರಣತಿ ಪ್ರಸ್ತುತಿ
-----------------
ತೊದಲುನುಡಿದೀಪ
{ಬರಹ ಮಾಲಿಕೆ }
ಸಂಚಿಕೆ #2
*****
ಇಂದಿನ ಸಂಚಿಕೆ ಶೀರ್ಷಿಕೆ
-------
ಸೂರ್ಯಮಾಮ ಕೂ...ಕಿ
***
ಇಂದಿನ ವಿಷಯಕ್ಕೆ ಬರುವ ಮುನ್ನ ಒಂದು ಕಿರು ಪ್ರಸ್ತಾವನೆ
*****
ಏನಿದು ಬರಹಮಾಲಿಕೆ ‘ತೊದಲುನುಡಿದೀಪ ‘ ?
******
ನಮ್ಮನೆ ಪುಟ್ಟ ಪ್ರಣತಿ , ಒಂದೂವರೆ ವರ್ಷದ ಮೊಮ್ಮಗಳು ‘ಆರೋಹಿ’ ಯ ಇದುವರೆಗಿನ ಮತ್ತು ಮುಂದಿನ ಒಡನಾಟದಲ್ಲಿ , ನಮ್ಮ ಕುಟುಂಬದವರು { ಪುಟ್ಟಿಯ ಅಮ್ಮ, ಅಪ್ಪ, ಅಜ್ಜ, ಅಜ್ಜಿ} ಪಡೆದ ಅನುಭವಗಳನ್ನುಬರಹ ರೂಪದಲ್ಲಿ ಅಭಿವ್ಯಕ್ತಿಸಿ – ಸಂಗ್ರಹಿಸುವ ಹಂಬಲ ನನಗೆ.
ನಂಗೊತ್ತು, ನಿಮ್ಮನೆಯ
ಮಕ್ಕಳು, ಮೊಮ್ಮಕ್ಕಳಲ್ಲೂ
ಇಂತಹ ಕ್ಷಣಗಳನ್ನು ಆನಂದಿಸ್ತೀರ ಅಂತ .
----
ಎಷ್ಟಂದರೂ "ಹೆತ್ತವರಿಗೆ ಹೆಗ್ಗಣವೂ ಮುದ್ದು" ಅಲ್ವೇ?
ನಾವೇನೂ
ಹೊರತಲ್ಲ ಈ ಗಾದೆಗೆ.
ಆದರೆ, ಕೇವಲ ನಮ್ಮನೆ ಪುಟಾಣಿಯ ‘ಲೀಲೆ’ ಗಳನ್ನದೆಯೇ, ನನ್ನ ಅನುಭವಕ್ಕೆ ಬಂದ ಬೇರೆ ಮಕ್ಕಳ ಸಂಗತಿಗಳನ್ನೂ ಬರೆಯುವ ಹಂಬಲ ಇದೆ.
-----
ಈ ಬರಹಮಾಲಿಕೆಗೆ ಏನು ಪ್ರೇರೇಪಣೆ ?
----
ನನ್ನ ಪ್ರಥಮ ಬರಹವನ್ನು ತುಂಬಾ casual ಆಗಿ ಮೊನ್ನೆ ಪ್ರಕಟಿಸಿದ್ದೆ ಫೇಸ್ ಬುಕ್ ನಲ್ಲಿ. ಅದನ್ನು ಓದಿ- ಪ್ರತಿಕ್ರಿಯಿಸಿದವರ ಸಂಖ್ಯೆ ನಾ ನಿರೀಕ್ಷಿಸಿದ್ದಕ್ಕಿಂತಾ ಹೆಚ್ಚು.ನಮಗೆ ಸಂತಸದ ಆಶ್ಚರ್ಯವನ್ನು ಮೂಡಿಸಿತು. ಅಂದರೆ ಇದರ ಅರ್ಥ, ಓದುಗರು ತಮ್ಮ ಮನೆಯ ಮಕ್ಕಳ ಇಂತಹ ಕ್ಷಣಗಳಿಗೆ connect ಆಗಿದ್ದಾರೆ ಅಂತ ನನ್ನ ಊಹೆ / ಅನಿಸಿಕೆ.
ಆದ್ದರಿಂದ
ಇದನ್ನು ಬರಹ ಸರಣಿಯನ್ನಾಗಿ ಪ್ರಕಟಿಸುವ ಹಂಬಲ
ನನಗೆ. ಮೊಮ್ಮಗಳ ಒಡನಾಟದಲ್ಲಿ,
ನನ್ನ ಅನುಭವಕ್ಕೆ ಬಂದ ಹಲವಾರು
ವಿಷಯಗಳನ್ನು ಪಟ್ಟಿಮಾಡಿಟ್ಟಿದ್ದೇನೆ.
ಪ್ರತ್ಯಕ್ಷವಾಗಿ
ಮತ್ತು ಪರೋಕ್ಷವಾಗಿ ನನ್ನ ಮತ್ತು ಅವಳ ನಡುವೆ ಆಗಿರೋದು :
• ವಿಚಾರ ವಿನಿಮಯ
• ಭಾವ ವಿನಿಮಯ
• ಸ್ಪೂರ್ತಿ ವಿನಿಮಯ
ಆಕೆಯ 'ಮುಗ್ಧತೆ'ಯಲ್ಲಿ 'ಪ್ರಬುದ್ಧತೆ' ಯನ್ನು ಕಂಡಿದ್ದೇನೆ.
ತೊದಲುನುಡಿ, ಬೆಳಕನ್ನು
ಹಚ್ಚಿದೆ ( ಹಾಗಾಗಿ ಬರಹಮಾಲಿಕೆಯ ಹೆಸರು ‘ ತೊದಲುನುಡಿದೀಪ” )
ಇಷ್ಟು
ಪ್ರಸ್ತಾವನೆ ಸಾಕು ಅನ್ಸುತ್ತೆ.
{ ಯಕ್ಷಗಾನ ಭಾಷೆಲಿ
“ ಹ್ವಾಯ್ ಪ್ರಸಂಗಕ್ಕಿಂತಾ, ಪೀಠಿಕೆಯೇ ಉದ್ದ ಆಯ್ತಲ್ಲಾ ಮಾರಾಯ್ರೆ” ಅಂತ ಅನಿಸಿದ್ರೂ ಅನಿಸಿರಬಹುದು ನಿಮಗೆ }
********************
OK,
ಈಗ, ಇಂದಿನ ಪುಟ್ಟ ಸಂಚಿಕೆ ವಿಷಯಕ್ಕೆ ಈಗ ಬರ್ತೀನಿ
***********
*********
ಪ್ರತಿದಿನ ಆರೋಹಿ ಜೊತೆ ಪಾರ್ಕ್ ನಲ್ಲಿ morning walk ಮಾಡುವಾಗ, ಸೂರ್ಯ, ಚಂದ್ರ, ನಕ್ಷತ್ರ, ಮರ, ಗಿಡ , ಹೂವು .... ಬಗ್ಗೆ , ಏನಾದರೂ ಸಂವಾದ ಆಗ್ತಾನೇ ಇರುತ್ತೆ.
ಇಂದು
ಸೂರ್ಯ ಸಂಪೂರ್ಣ ಮರೆಯಾಗಿರಲಿಲ್ಲ.ಒಮ್ಮೊಮ್ಮೆ ಕಾಣಿಸ್ತಾ ಇದ್ದ.
ತೊದಲುನುಡಿದೀಪ
{ಬರಹ ಮಾಲಿಕೆ }
ಸಂಚಿಕೆ #2
*****
ಇಂದಿನ ಸಂಚಿಕೆ ಶೀರ್ಷಿಕೆ
-------
ಸೂರ್ಯಮಾಮ ಕೂ...ಕಿ
***
ಇಂದಿನ ವಿಷಯಕ್ಕೆ ಬರುವ ಮುನ್ನ ಒಂದು ಕಿರು ಪ್ರಸ್ತಾವನೆ
*****
ಏನಿದು ಬರಹಮಾಲಿಕೆ ‘ತೊದಲುನುಡಿದೀಪ ‘ ?
ನಮ್ಮನೆ ಪುಟ್ಟ ಪ್ರಣತಿ , ಒಂದೂವರೆ ವರ್ಷದ ಮೊಮ್ಮಗಳು ‘ಆರೋಹಿ’ ಯ ಇದುವರೆಗಿನ ಮತ್ತು ಮುಂದಿನ ಒಡನಾಟದಲ್ಲಿ , ನಮ್ಮ ಕುಟುಂಬದವರು { ಪುಟ್ಟಿಯ ಅಮ್ಮ, ಅಪ್ಪ, ಅಜ್ಜ, ಅಜ್ಜಿ} ಪಡೆದ ಅನುಭವಗಳನ್ನುಬರಹ ರೂಪದಲ್ಲಿ ಅಭಿವ್ಯಕ್ತಿಸಿ – ಸಂಗ್ರಹಿಸುವ ಹಂಬಲ ನನಗೆ.
ಎಷ್ಟಂದರೂ "ಹೆತ್ತವರಿಗೆ ಹೆಗ್ಗಣವೂ ಮುದ್ದು" ಅಲ್ವೇ?
ಆದರೆ, ಕೇವಲ ನಮ್ಮನೆ ಪುಟಾಣಿಯ ‘ಲೀಲೆ’ ಗಳನ್ನದೆಯೇ, ನನ್ನ ಅನುಭವಕ್ಕೆ ಬಂದ ಬೇರೆ ಮಕ್ಕಳ ಸಂಗತಿಗಳನ್ನೂ ಬರೆಯುವ ಹಂಬಲ ಇದೆ.
ಈ ಬರಹಮಾಲಿಕೆಗೆ ಏನು ಪ್ರೇರೇಪಣೆ ?
ನನ್ನ ಪ್ರಥಮ ಬರಹವನ್ನು ತುಂಬಾ casual ಆಗಿ ಮೊನ್ನೆ ಪ್ರಕಟಿಸಿದ್ದೆ ಫೇಸ್ ಬುಕ್ ನಲ್ಲಿ. ಅದನ್ನು ಓದಿ- ಪ್ರತಿಕ್ರಿಯಿಸಿದವರ ಸಂಖ್ಯೆ ನಾ ನಿರೀಕ್ಷಿಸಿದ್ದಕ್ಕಿಂತಾ ಹೆಚ್ಚು.ನಮಗೆ ಸಂತಸದ ಆಶ್ಚರ್ಯವನ್ನು ಮೂಡಿಸಿತು. ಅಂದರೆ ಇದರ ಅರ್ಥ, ಓದುಗರು ತಮ್ಮ ಮನೆಯ ಮಕ್ಕಳ ಇಂತಹ ಕ್ಷಣಗಳಿಗೆ connect ಆಗಿದ್ದಾರೆ ಅಂತ ನನ್ನ ಊಹೆ / ಅನಿಸಿಕೆ.
• ವಿಚಾರ ವಿನಿಮಯ
• ಭಾವ ವಿನಿಮಯ
• ಸ್ಪೂರ್ತಿ ವಿನಿಮಯ
ಆಕೆಯ 'ಮುಗ್ಧತೆ'ಯಲ್ಲಿ 'ಪ್ರಬುದ್ಧತೆ' ಯನ್ನು ಕಂಡಿದ್ದೇನೆ.
{ ಯಕ್ಷಗಾನ ಭಾಷೆಲಿ
“ ಹ್ವಾಯ್ ಪ್ರಸಂಗಕ್ಕಿಂತಾ, ಪೀಠಿಕೆಯೇ ಉದ್ದ ಆಯ್ತಲ್ಲಾ ಮಾರಾಯ್ರೆ” ಅಂತ ಅನಿಸಿದ್ರೂ ಅನಿಸಿರಬಹುದು ನಿಮಗೆ }
OK,
ಈಗ, ಇಂದಿನ ಪುಟ್ಟ ಸಂಚಿಕೆ ವಿಷಯಕ್ಕೆ ಈಗ ಬರ್ತೀನಿ
*********
ಪ್ರತಿದಿನ ಆರೋಹಿ ಜೊತೆ ಪಾರ್ಕ್ ನಲ್ಲಿ morning walk ಮಾಡುವಾಗ, ಸೂರ್ಯ, ಚಂದ್ರ, ನಕ್ಷತ್ರ, ಮರ, ಗಿಡ , ಹೂವು .... ಬಗ್ಗೆ , ಏನಾದರೂ ಸಂವಾದ ಆಗ್ತಾನೇ ಇರುತ್ತೆ.
"ಎಲ್ಲೇ ಸೂರ್ಯಮಾಮ ಕಾಣಿಸ್ತಾನೇ ಇಲ್ವಲ್ಲೇ? "
ಆಕೆ, ಆಕಾಶವನ್ನೊಮ್ಮೆ ನೋಡಿದಳು.
"ಸೂರ್ಯಮಾಮ ಕೂ...ಕೀ... ಆಡ್ತಾ ಇದಾನೆ ಅಜ್ಜಾ "
------
ನಿಮಗೆಲ್ಲಾ ಗೊತ್ತೇ ಇರುತ್ತೆ . ಅಡಗು-ಹುಡುಕು ಆಟ ( Hide &Seek) ಆಟ ಮಕ್ಕಳಿಗೆ ಪ್ರಿಯವಾದ ಆಟ. ಅಡಗಿಕೊಂಡು ' ಕೂ..ಕಿ' ಹೇಳುವುದು ಆ ಆಟದ ಕ್ರಮ. ಸ್ವಾಭಾವಿಕವಾಗಿ ನಮ್ಮನೇಲೂ ಆಡ್ತೀವಿ. ಪಕ್ಕದಮನೆಯ ಆಕೆಯ ಗೆಳೆಯ ಮಿಹಿರಣ್ಣ ನ ಬಳಗ ಆಡೋದನ್ನು ನೋಡಿ ಖುಷಿಪಡ್ತಾ ಇರ್ತಾಳೆ ಯಾವಾಗ್ಲೂ.
{ ಈಗಿನ ಮಕ್ಕಳ ಆಟದಲ್ಲಿ , ಅಡಗಿಕೊಂಡವನನ್ನು ಪತ್ತೆ ಹಚ್ಚಿದಕೂಡಲೇ ಹೇಳುವ ಪದ ..”ಡಬ್ಬಾ” }
---------
ಅಂದಹಾಗೆ , ಸೂರ್ಯ ಚಂದ್ರ ಕುರಿತು, ಇನ್ನೊಂದು ರಹಸ್ಯ ಹೇಳಿದ್ದಾಳೆ ಅವಳು ನಮಗೆ
ಇಂತಹ ಸಾಮಾನ್ಯ ದೃಶ್ಯಗಳು, ‘ಪ್ರಬುದ್ಧ’ ರೆನಿಸಿಕೊಂಡಿರುವ ನಮಗೆ ಗಮನಕ್ಕೇ ಬರುವುದಿಲ್ಲ ( ಕವಿಗಳನ್ನು ಹೊರತುಪಡಿಸಿ ). ಆದರೆ ‘ಮುಗ್ಧರು’ ಅನಿಸಿಕೊಂಡಿರುವ ಮಕ್ಕಳಿಗೆ, ಸಾಮಾನ್ಯ ವಸ್ತು, ದೃಶ್ಯ, ಸಂಗತಿಗಳಲ್ಲಿ ಅವರದೇ ಆದ ಕಲ್ಪನೆ ಮೂಡುತ್ತೆ.
ಎಲ್ಲರಿಗೂ ತಾಯಾಗಿ ಲಾಲಿ ಹಾಡುವವಳಿವಳು ವಿಶ್ವಮಾತೆ ”
*********

ಮಕ್ಕಳ ತೊದಲು ನುಡಿ ಬಹಳ ಅಪ್ಯಾಯಮಾನವಾಗಿ ಇರುತ್ತದೆ, ಹಾಗೆ ಆರೋಹಿಯ ಬಾಯಲ್ಲಿ ನಾನು ಚುಬ್ಬಣ್ಣನಾದಹಾಗೆ.
ಪ್ರತ್ಯುತ್ತರಅಳಿಸಿ👏👏👏
ಪ್ರತ್ಯುತ್ತರಅಳಿಸಿ