ನಮ್ಮ ಮಾಸ್ತರ ರ ಉಚ್ಚಾರಣೆ (Pronunciation ) ತಪ್ಪಿದ್ದರೂ , ಸಂವಹನ (Communication ) ! ಮಸ್ತ್ ಮಸ್ತ್ ! 👏👏👌
x
{ ಒಂದಿಷ್ಟು ಗೀಚಿ ಹಂಚುವ ಪ್ರಯತ್ನ }
,*****
CK ಮಾಸ್ತರನ ಅನುಭವ / ಚಿಂತನ / ಮಂಥನ
ಲೇಖನ ಮಾಲಿಕೆ
#ಪದಪ್ರಣತಿಚಿದು #15
#CKಮಾಸ್ತರ #4
-----
ಶೀರ್ಷಿಕೆ
------
ನಮ್ಮ ಮಾಸ್ತರ ರ
ಉಚ್ಚಾರಣೆ (Pronunciation ) ತಪ್ಪಿದ್ದರೂ ,
ಸಂವಹನ (Communication ) ! ಮಸ್ತ್ ಮಸ್ತ್ !
👏👏👌👌👍👍
ಇದು ನಾನು ಪ್ರೈಮರಿ ಶಾಲೆಯಲ್ಲಿದ್ದಾಗ ನಡೆದ ಒಂದು ವಿನೋದದ ಪ್ರಸಂಗ
----------
ದುರಾದೃಷ್ಟವಶಾತ್, ನಮ್ಮ ಶಾಲೆಗೆ 'ಸುದ್ದ ಬಾಸೆ' ಮಾತಾಡುವ ಹೊಸ ಮಾಸ್ತರ್ ಒಬ್ಬರು ಪ್ರವೇಶಿಸಿದರು.
ಮೊದಲ ತರಗತಿ.
ಅವರ ಹೆಸರು- ಪರಿಚಯ ಏನನ್ನೂ ಮಾಡದೆಯೇ , ಸೀದಾ ಒಂದು ಉಕ್ತಲೇಖನ ( dictation ) ಶುರುಮಾಡಿಯೇಬಿಟ್ರು.
-----------
"ಮಕ್ಕಳಾ ಬರೀರಿ, ನಾನೊಂದು ಪದ ಏಳ್ತೀನಿ,
ಸರಿಯಾಗಿ ಬರೀಬೇಕು
ನಾ ಬೋರ್ಡ್ ಮೇಲೆ ಬರೆದು ತೋರ್ಸಾಂಗಿಲ್ಲ ಮತೆ?
"
-----
"ಹೇಳಿ ಸಾ..ರ್"
----
ಮಾಸ್ತರ್ ಒದರಿಯೇಬಿಟ್ರು ಆ ಪದನ
******
ನಾವೆಲ್ಲಾ ಕ್ಷಿಪ್ರವಾಗಿ ಬರೆದೇಬಿಟ್ಟೆವು
******
ಮಾಸ್ತರ್ ಪ್ರತಿ ವಿದ್ಯಾರ್ಥಿಯ ಬಳಿಯೂ ಬಂದು ಪರಿಶೀಲಿಸಿದ್ರು.
ಸಿಕ್ಕಾಪಟ್ಟೆ ನಿರಾಶೆ ಆಯ್ತು.
ಒಬ್ಬರೂ ಸರಿಯಾಗಿ ಬರೆದಿರಲಿಲ್ಲ...
( ನಾನೂ ಕೂಡ)
*****
ಮಾಸ್ತರ್ ಕೂಗಾಡಿದ್ರು
"
ಏನು ದಡ್ದರೋ ನೀವು?
ಒಬ್ಬಾನೊಬ್ಬನೂ ಸರಿಯಾಗಿ ಬರೆದಿಲ್ಲ.
ನಾನೇನು ಉದ್ದನೇ ವಾಕ್ಯ ಹೇಳಿದ್ನಾ? ಒಂದೇ ಒಂದು ಪದ ಅಷ್ಟೆ.
ಹಿಂದಿನ್ ಮಾಸ್ತರ್ ಅದೇನು ಕಲ್ಸಿದಾರೋ ನಿಮಗೆ......"
ಒಂದೇ ಸಮನೆ ಬೈದರು...
--------
'ನೋಡ್ರಪಾ,
ಇನ್ನೊಮ್ಮೆ ಹೇಳ್ತೀನಿ,
ಸರೀ ಕೇಳ್ಸ್ಕೊಂಡು ಬರೀಬೇಕು,
ತಿಳೀತಾ..
"
ಮತ್ತೆ ಹೇಳಿದ್ರು
ಈ ಬಾರಿ, ಸ್ವಲ್ಪ ಯೋಚನೆ ಮಾಡಿ ನಿಧಾನವಾಗಿ ಬರೆದೆವು. ಈ ಸರ್ತಿ, ತಪ್ಪಾಗುವುದೇ ಇಲ್ಲ ಅಂತ ನಮ್ಮ ಆತ್ಮವಿಶ್ವಾಸ👍
********
ಮತ್ತೆ ವಿದ್ಯಾರ್ಥಿಗಳ ಹತ್ರ ಬಂದು ನೋಡ್ತಾರೆ..
ಮತ್ತೆ ತಪ್ಪು ತಪ್ಪು
*****
‘ ಅಯ್ಯೋ ದೇವರೇ”
ಅವರಿಗೆ ತಲೆಕೆಟ್ಟೇ ಹೋಯ್ತು.
" ಹ್ಯಾಂಗಪ್ಪಾ ಈ ಮಕ್ಳಿಗೆ ಅರ್ಥ ಆಗೂ ಹಾಂಗೆ ಹೇಳೋದು!!??
"
ಐದು ನಿಮಿಷ, ತಲೇ ಮೇಲೆ ಕೈ ಹೊತ್ತು ಆಲೋಚನೆ ಮಾಡಿದ್ರು.
ಹಾಂ...
ಥಟ್ ಅಂತ ನಮ್ಮ 'ಶಾಣ್ಯಾ' ಮಾಸ್ತರ್ ಗೆ ಒಂದು ಉಪಾಯ ಹೊಳೀತು.
‘ ಸುಳಿವು’ ( Clue) ಕೊಟ್ಟು, ಮಕ್ಕಳಿಂದ ಬರೆಸಬೇಕು ಅಂತ
------
ಲಗಾಯಿಸಿಯೇ ಬಿಟ್ರು ಆ ಉಪಾಯನಾ
*****
"
ನೋಡ್ರಪಾ..
ಎಲ್ರೂ ಇಲ್ ಕೇಳ್ರೀ ಸರಿಯಾಗಿ.
ಮೂರೇ ಮೂರು ಅಕ್ಸರದ ಪದ.
"ಹೂಂ..ಸಾ"
ಮೊದಲನೇ ಅಕ್ಸರ
'ಸಗಣಿ' ' ಸ'
----
ಎರಡನೇ ಅಕ್ಸರ
'ಸಂಕರ’ನ 'ಸ'
----
ಮೂರನೇ ಅಕ್ಸರ !!
ಸರಿಯಾಗಿ ಕೇಳಿಸ್ಕೋರಿ.
'ಸಣ್ಮುಕ’ ನ 'ಸ'
********
🤔🤔😀😀
*******
ವಾರೆ ವಾಹ್
ಮಾಸ್ತರರ
ಉಪಾಯ ಫಲಿಸಿಯೇ ಬಿಟ್ಟಿತು👍👍
****
ಎಲ್ರೂ ಸರಿಯಾಗಿ ಬರೆದೆವು
*****
ಮಾಸ್ತರರು ಬಂದು ಪರೀಕ್ಷಿಸಿದರು
-----
ವಾರೆ ವಾಹ್!
ಎಲ್ಲರೂ ಸರಿಯಾಗಿ ಬರೆದಿದ್ದೆವು
*********
ಅದು ಸರಿ,
ಅಂದ ಹಾಗೆ ಆ ಪದ ಏನೂ ಅಂತ ಕೇಳಿದ್ರಾ?
***
ಸರಳ ಪದ
*****
'ಸಶೇಷ'
---
ಇನ್ನೊಮ್ಮೆ ಹೇಳ್ತೀನಿ ಕೇಳಿ
'ಸಶೇಷ'
----
'ಸಗಣಿ ಸ' ಸಗಣಿ ಸ
'ಸಂಕರನ ಸ' ಶಂಕರ. ಶೇ
'ಸಣ್ಮುಕನ ಸ'. ಷಣ್ಮುಖ. ಷ
*********
ಭಳಿರೇ! ಭಾಪ್ಪರೇ!
ಭೇಷ್ ಮಾಸ್ತರ್!
ಕಡೆಗೂ ‘ಸುಳಿವು’ ನೀಡಿ,
ನಿಮ್ಮ ವಿದ್ಯಾರ್ಥಿಗಳು ಸರಿಯಾದ ಪದ ಬರೆಯೋಹಾಗೆ ಮಾಡಿಯೇಬಿಟ್ರಿ!!--
********
ನಂತರ ಎಲ್ರೂ ಒಟ್ಟಿಗೇ ಕೇಳಿದೆವು
-----
ಸಾ....ನಿಮ್ಮ ಹೆಸರೇನು ಹೇಳ್ಲೇ ಇಲ್ವಲ್ಲ ಸಾ..??
---
ಓಹ್..ಹೌದಲ್ವೇ? ಮರ್ತೇಬಿಟ್ಟಿದ್ದೆ
ನನ್ನ ಹೆಸರಲ್ಲಿ ಎರಡು ಪದಗಳಿವೆ
ಬರೀರಿ ನೋಡನ
----
ಹೇಳಿ ಸಾ...
---
ಸೇಸಸಯನ ಸಸಿಬೂಸಣ
------
"ಇನ್ನೊಂದ್ಸರ್ತಿ ಹೇಳಿ ಸಾ..."
-----
ಮತ್ತೆ ಗೊಂದಲ ನಮಗೆಲ್ಲಾ!!🤔🤔
ನಾನು ಕೇಳಿಯೇಬಿಟ್ಟೆ
"
ಸಾ....
ಒಂದು ಡೌಟೂ...."
ಏನೋ ಅದು?
ನಿಮ್ಮ ಎರಡೂ ಹೆಸರಲ್ಲಿ
ಎಷ್ಟು 'ಸಗಣಿ'
ಎಷ್ಟು 'ಸಂಕರ'
ಎಷ್ಟು 'ಸಣ್ಮುಕ'
ಹೇಳಿಬಿಡಿ ಸಾ...
🤣🤣🤣
*************
ಮಾಸ್ತರ್ ಗೆ ಎಲ್ಲಿಲ್ಲದ ಕೋಪ ..
ಧಾವಿಸಿ ಬಂದರು ನನ್ನ ಬಳಿ.
"ಏಯ್...ತರ್ಲೆ?
ಏನೋ ನಿನ್ನ ಹೆಸರು?"
-----
ನಾನು ನನ್ನ ಹೆಸರನ್ನು 'ಬದಲಾಯಿಸಿ'😉 ಹೇಳಿಯೇಬಿಟ್ಟೆ.
ಸಾ...
ನನ್ನ್ಹೆಸ್ರು
"ಸಸಿಸೇಕರ"
---------
Thank God
ಅಷ್ಟು ಹೊತ್ತಿಗೆ ಬೆಲ್ ಆಯ್ತು
ನಾವು ಬಚಾವ್
************
**********
ಮಿತ್ರರೇ,
ಹೌದು,
ಇದೊಂದು ಹಾಸ್ಯ ಪ್ರಸಂಗ.
ನನಗೆ ನೆನಪಿಸಿಕೊಂಡಾಗಲೆಲ್ಲಾ ನಗು ಬರುತ್ತೆ.
ನೀವೂ ನಕ್ಕಿರಬಹುದು ( ನನ್ನ ಊಹೆ!!)
---------
ಆದರೆ
ಈ ಹಾಸ್ಯ ಪ್ರಸಂಗದಿಂದ ನಾನು ಏನನ್ನೋ ಕಲಿತೆ
-----
ಪ್ರತಿಯೊಂದರಲ್ಲಿಯೂ ಏನನ್ನಾದರೂ 'ಸಕಾರಾತ್ಮಕ ' ( positive) ಅಂಶವನ್ನು 'ಗಣಿಗಾರಿಕೆ' ಮಾಡುವ ಸ್ವಭಾವವುಳ್ಳ ನಾನು
ಈ 'ಸಕಾರ' ದ ಮಾಸ್ತರ್ ರಿಂದ ,
ನನಗೆ ಅರಿವಿಲ್ಲದ ಹಾಗೆಯೇ ಒಂದು ಕೌಶಲ್ಯ ಕಲಿತಿದ್ದೆ.
ಉಚ್ಛಾರಣೆಯ 'ದೌರ್ಬಲ್ಯ' ಇತ್ತು ಅವರಿಗೆ ಒಪ್ಪಿಕೊಳ್ಳೋಣ.
ಅದರೆ 'ಸುಳಿವು' ( clue) ಕೊಟ್ಟು,
ವಿದ್ಯಾರ್ಥಿಗಳು ಬರೆಯುವ ಹಾಗೆ ಮಾಡಿದ ಅವರ 'ಸಂವಹನ ಮತ್ತು ಬೋಧನಾ ಕೌಶಲ್ಯ' ( communication and teaching skill) ವನ್ನು ಮೆಚ್ಚಿದೆ.
-------
ಹಾಂ..
ಈ ಸಕಾರಾತ್ಮಕ ಅಂಶ ನನಗೆ ಕಂಡುಬಂದಿದ್ದು ಆ ಪ್ರಸಂಗ ಆದ ತಕ್ಷಣ ಅಲ್ಲ!
----
40 ವರ್ಷಗಳ ನಂತರ ,
ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ತಂತ್ರಜ್ಞಾನ ದ ವಿಷಯಗಳನ್ನು ಬೋಧನೆ ಮಾಡುವಾಗ.
ಈ ತಂತ್ರವನ್ನು,
ಅಂದರೆ
'ಸುಳಿವು/clue' ಕೊಟ್ಟು,
ವಿದ್ಯಾರ್ಥಿಗಳು ಕಲಿಯುವ ಹಾಗೆ ಮಾಡುವ ತಂತ್ರವನ್ನು, ಸಾಕಷ್ಟು ಬಾರಿ ಬಳಸಿ ಯಶಸ್ಸನ್ನು ಪಡೆದಿದ್ದೇನೆ.
********
ಸೇಸಸಯನ ಸಸಿಬೂಸಣ ಮಾಸ್ತರರೇ
ನೀವೆಲ್ಲಿದ್ದಿರೋ ಗೊತ್ತಿಲ್ಲ
ಇಲ್ಲಿಂದಲೇ ತಮಗೆ ಧನ್ಯವಾದಗಳು
🙏🙏😊😊🙏🙏

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ