ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

‘ಬಡತನ’ ಆ ‘ಬಿಕ್ಷುಕನಲ್ಲಿಯೋ’ ? ಅಥವಾ ನನ್ನೊಳಗೋ ?

ಇಮೇಜ್
‘ ಬಡತನ ’ ಆ ‘ ಬಿಕ್ಷುಕನಲ್ಲಿಯೋ ’ ? ಅಥವಾ ನನ್ನೊಳಗೋ ?   ಆತ ಹೋಳಿಗೆಯನ್ನು ಗಬ ಗಬ ತಿಂತಾ ಇದ್ದ , ತುಪ್ಪದಲ್ಲಿ ಅದ್ದಿ. ‘ಹೋಳಿಗೆಮನೆ’ ಅಂಗಡಿ ಮುಂದೆ ಮೆಟ್ಟಲ ಮೇಲೆ ತುದಿಗಾಲಿನಲ್ಲಿ ಕುಳಿತು. ತುಂಬಾ ಹಸಿವಾಗಿತ್ತೇನೋ. ಕೆದರಿದ ತಲೆ ಕೂದಲು, ಕ್ಷೌರವಿಲ್ಲದ ಗಡ್ಡ ಮೀಸೆ , ಮಾಸಿದ   ಹರುಕಲು ಬಟ್ಟೆ, ........ ಬಿಕ್ಷುಕನೇ ಇರಬೇಕು. ಸ್ವಲ್ಪ ಭೀಕರವಾಗಿ ಕಾಣಿಸ್ತಾ ಇದ್ದ.   “ಅಜ್ಜಾ , ಮಕ್ಕಳಕಳ್ಳ ನೋಡು” ನನ್ನ ಜೊತೆಗೇ ಹೆಜ್ಜೆಯಿಡುತ್ತಿದ್ದ , ಎರಡು ವರ್ಷದ   ಮೊಮ್ಮಗಳು ಆರೋಹಿಯ , ಭಯಮಿಶ್ರಿತ   ತೊದಲು ನುಡಿಯಲ್ಲಿ . { ಸ್ವಲ್ಪ ಭೀಕರವಾಗಿ ಕಾಣಿಸುವ ವ್ಯಕ್ತಿಗಳನ್ನೆಲ್ಲಾ ‘ ಮಕ್ಕಳ ಕಳ್ಳ ’   ಅಂತ ಸುಳ್ಳು ಪಟ್ಟಿ ಕೊಟ್ಟು ನಂಬಿಸಿದ್ದೇವೆ ಅವಳನ್ನು. ನಮ್ಮ ಕಾಲದಲ್ಲಿನ   ‘ ಗುಮ್ಮ ’ ನ ಹಾಗೆ. ಆಕೆ ಏನಾದರೂ ಹಟ ಮಾಡಿದಾಗ , ಭಯ ಹುಟ್ಟಿಸಿ ,   ಸುಮ್ಮನಿರಿಸಲು ನಾವು ಮಾಡಿಕೊಂಡಿರುವ ತಂತ್ರ }. ನಾನು ಆಕೆಯನ್ನು ತಟ್ಟನೇ ಎತ್ತಿಕೊಂಡೆ. ಸ್ವಾಭಾವಿಕವಾಗಿಯೇ ಆ ‘ ಹೊಲಸು ಮನುಷ್ಯ ’ ನಿಂದ ಮಗುವನ್ನು ದೂರವಿಡುವ ಉದ್ದೇಶದಿಂದ. ನಾವು ‘ ಹೋಳಿಗೆ ಮನೆ ’ ಗೆ ಹೋದ ಕೆಲಸ ಮುಂದುವರೆಸಿದೆವು. ನಾಲ್ಕು ಹೋಳಿಗೆಗೆ ಆದೇಶ ನೀಡಿದೆವು. ನಮ್ಮ ಹೋಳಿಗೆ ಬರುವವರೆಗೆ , ಆತನನ್ನು ಗಮನಿಸ್ತಾ ಇದ್ದೆ. ನನಗೆ ಇದೊಂದು ಹುಚ್ಚು. ಸಾರ್ವಜನಿಕ ಸ್ಥಳಗಳಲ್ಲಿ , ಸ್ವಲ್ಪ ವಿಶೇಷ ಅನಿಸು...