ಪೋಸ್ಟ್‌ಗಳು

2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಇಮೇಜ್
  ‘ ಕವಿತಾ ಸಂಗೀತ - ಸಲ್ಲಾಪ ’ ಕಾರ್ಯಕ್ರಮ ಸಾಗರ ( ಶಿವಮೊಗ್ಗ ಜಿಲ್ಲೆ)  ಕಾರ್ಯಕ್ರಮ  16 ಜನವರಿ 26  ( ಒಂದು ಕಿರು ಅವಲೋಕನ ) - ಪ್ರೇಕ್ಷಕರ   ಪ್ರತಿಕ್ರಿಯೆಯನ್ನು ಆಧರಿಸಿ     ಅದು  ಮಾಮೂಲೀ ಸುಗಮ ಸಂಗೀತ ಕಾರ್ಯಕ್ರಮ ಆಗಿರಲಿಲ. ಕಾರ್ಯಕ್ರಮದ ಶೀರ್ಷಿಕೆಯೇ ಭಿನ್ನ – ವಿಶೇಷ ಕವಿತಾ ಸಂಗೀತ-ಸಲ್ಲಾಪ ಎತ್ತರದ ದೊಡ್ಡ   ವೇದಿಕೆ ಅಲ್ಲ ಯಾವುದೇ   ಬ್ಯಾನರ್ ಇಲ್ಲ , ಹತ್ತಾರು ಗಾಯಕರು ಇಲ್ಲ. ವೈಭವದ  ವಾದ್ಯಸಂಗೀತಗಳು ಇಲ್ಲ. ನೂರಾರು ಮಂದಿ ಕೇಳುಗರಿಲ್ಲ . ಮನೆಯಂಗಳದಲ್ಲಿ ಜರುಗಿದ   ಪುಟ್ಟ ಕಾರ್ಯಕ್ರಮವಾದರೂ , ನೆನಪಿನಲ್ಲುಳಿಯುವ ಕಾರ್ಯಕ್ರಮ. ಕಾರ್ಯಕ್ರಮ ಜರುಗಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ;   ನಿವೃತ್ತ ಶಿಕ್ಷಕ , ಹರಿಕಥೆ ಕಲಾವಿದ ,   ಸಂಗೀತ –ಸಾಹಿತ್ಯ   ಕಲಾಪೋಷಕರಾದ ದತ್ತಾತ್ರೇಯ ಹೆಗ್ಡೆ ಮತ್ತು ಅವರ ಪತ್ನಿ ,   ಶಿಕ್ಷಕಿ ಗಂಗೂಬಾಯಿಯವರ ಮನೆ ‘ ಸ್ಪಂದನ ’ ದಲ್ಲಿ.   ಅದು ಸಾಂಪ್ರದಾಯಿಕ ಮಾಮೂಲೀ   ಸುಗಮ   ಸಂಗೀತ ಕಾರ್ಯಕ್ರಮ ಅಲ್ಲ , ಹೇಗೆ ? ಎರಡು ಪ್ರಮುಖ ಅಂಶಗಳು 1.   ಸಾಹಿತ್ಯ ಪ್ರಧಾನ ಸಂಗೀತ 2.   ವೈವಿಧ್ಯತೆ ·       ಕವಿತೆಯ ವಸ್ತು / ವಿಷಯ ಗಳಲ್ಲಿ ವೈವಿಧ್ಯತೆ ·    ...

ಪತ್ರ -ಮೊಮ್ಮಗಳಿಗೆ - ಅಧ್ಯಾಯ 8 - ಸಧ್ಯಕ್ಕೆ ಇಷ್ಟು ಸಾಕು - ಮುಕ್ತಾಯಗೊಳಿಸಲೇ ?

ಇಮೇಜ್
  ಮುಕ್ತಾಯ ಆರೋಹಿ ಪುಟ್ಟಿ , ಮುಗಿಸಲಾ ಈ   ಪತ್ರವನ್ನು ? ಸಾಕು ಅಜ್ಜ ಈ ‘ ಭೋರ್ಕೊರೆತ ’ ಅಂತ ನೀ ಮಧ್ಯೆ ಮಧ್ಯೆ ಹೇಳಿರಲೂಬಹುದು. ಅದನ್ನು ನನ್ನ ‘ ಜಾಣಕಿವಿ ’   ಕೇಳಿಸಿಕೊಳ್ಳಲೇ ಇಲ್ಲ. ಹೇಗಿದ್ದರೂ ಈ ಪತ್ರದ ನೆಪದಲ್ಲಿ ,   ‘ ತೋಚಿದ್ನೆಲ್ಲಾ ಗೀಚಲೇಬೇಕು ’ ಅಂತ ಗಟ್ಟಿ ಸಂಕಲ್ಪ ಮಾಡಿಕೊಂಡುಬಿಟ್ಟಿದ್ದ್ನಲ್ಲಾ ?     ಓದು-ಬರಹ ಪ್ರಪಂಚಕ್ಕೆ ಇನ್ನೂ ಕಾಲಿಡಬೇಕಾದ ನಿನಗೆ ,   ಈ   ಈ ಪತ್ರವನ್ನು ,   ಅಲ್ಲ  ಅಲ್ಲ , ಪತ್ರರೂಪದ ಕಿರು ಪುಸ್ತಕವನ್ನು ಬರೆದು ಮುಗಿಸಿದ್ದೇನೆ.    ಪ್ರಾರಂಭಿಸಿದಾಗ ‘ ಏನೋ ಮೂರ್ನಾಲ್ಕು ಪುಟದ ಪತ್ರ ’ ಆಗಬಹುದು  ಅಂದ್ಕೊಂಡಿದ್ದೆ , ಆದ್ರೆ ಬರೆಯುತ್ತಾ ಹೋದಂತೆಲ್ಲಾ , ನನ್ನ ಮನಸಿನ ಪುಟಗಳಲ್ಲಿ , ನೀನು ಮತ್ತೆ ಮರುಕಳಿಸಲಾರದ ಬೇರೆ ಬೇರೆ ರೂಪಗಳಲ್ಲಿ ಹರೆದು , ಹೆಜ್ಜೆಯಿಟ್ಟು , ಬಿದ್ದು , ಎದ್ದು , ಜಿಗಿಯಲು ,  ಓಡಲು  ಪ್ರಾರಂಭಿಸಿದೆ  ನನ್ನ ತಿಳುವಳಿಕೆಯ ಪ್ರಕಾರ ,   ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ   5 ವರ್ಷಗಳಿಗಿಂತ ಮುಂಚೆಯ ಚಟುವಟಿಕೆಗಳು   ನೆನಪಿನಲ್ಲಿ ಉಳಿಯುವುದಿಲ್ಲ. ಮೊದಲ 5   ವರ್ಷಗಳಲ್ಲಿ   ಮಕ್ಕಳ ನಡೆ-ನುಡಿ   ಅದೆಷ್ಟು ವಿಧ ವಿಧದ ರೂಪ ಪಡೆಯುತ್ತದೆಂದರೆ , ಆಗಸದಲ್ಲಿ   ಕ್ಷಣಕ್ಷಣಕ್ಕೆ ಬದಲಾಗುವ ಬಗೆ ಬಗೆ ಚಿತ್ತಾ...

ಪತ್ರ - ಮೊಮ್ಮಗಳಿಗೆ - ಅಧ್ಯಾಯ7- ಕೊಡು-ಪಡೆ-ಕೊಡು-ಪಡೆ ಆಟ

ಇಮೇಜ್
  ಅಧ್ಯಾಯ #7 ಪಡೆದದ್ದು -ಕೊಟ್ಟದ್ದು ಈ ಎರಡು ವರ್ಷಗಳ ಅವಧಿಯಲ್ಲಿ ನಿನ್ನ ನಗು , ಅಳು , ಕೋಪ , ಹಟ , ಆಟ , ಊಟ , ಓಟ ,   ಕಾಟ , ಕಿರಿಚಾಟ ಎಲ್ಲವನ್ನೂ ಆನಂದಿಸಿದ್ದೇವೆ , ಅನುಭವಿಸಿದ್ದೇವೆ. ಈ ಪ್ರಕ್ರಿಯೆ ಪ್ರಪಂಚದ   ಯಾವುದೇ ಪಾಲಕ , ಪೋಷಕರಿಗೂ ಸ್ವಾಭಾವಿಕ , ಅನಿವಾರ್ಯ. ಈ ಪ್ರಕ್ರಿಯೆಯಲ್ಲಿ , ನಾವು ನಿನಗೆ ಒಂದಿಷ್ಟನ್ನು ಕೊಟ್ಟಿದ್ದೇವೆ. ನಿನ್ನಿಂದ ನಾವು ಒಂದಿಷ್ಟನ್ನು ಪಡೆದಿದ್ದೇವೆ. ಹೀಗೇ , ನಮ್ಮೊಳಗೇ ಒಂದು ಚಿಂತನೆ ಪ್ರತಿ ದಿನ ಪಾರ್ಕ್ ,   ದೇವಸ್ತಾನ , ಅಂಗಡಿ ಭೇಟಿ   ಕೇವಲ ಸಮಯ ಕಳೆಯುವುದಕ್ಕಾಗಿಯೋ ? ಮನೆಯೊಳಗೇ ಇದ್ದರೆ , ನಿನಗೆ ಬೋರ್ ಆಗಬಹುದು ಎಂದೋ ? ಇಲ್ಲ , ಇಲ್ಲ ಅದು ಕೇವಲ ಸಮಯ ಕಳೆಯಿವುದಕ್ಕಾಗಿ ಅಲ್ಲ. ಇಂದಿನ ಅನೇಕ ಪಾಲಕರು ಅನುಸರಿಸುವ   ‘ ಅತ್ಯಂತ ಸುಲಭ ಮಾರ್ಗ ’ ವನ್ನು ನಾವೂ ಅನುಸರಿಸಬಹುದಿತ್ತು. ಮೊಬೈಲ್ ಎಂಬ ಪುಟ್ಟ   ಮಾಯಾಪೆಟ್ಟಿಗೆಯನ್ನು ನಿನ್ನ ಕೈಯೊಳಗೆ ಇರಿಸಿ , ನೀ ಮೈಮರೆತು ಅದರೊಳಗಿನ ಕಾರ್ಟೂನ್ ಅಥವಾ ಆಟದಲ್ಲಿ ಮುಳುಗುವಂತೆ ಮಾಡಿ , ನಾವೂ ಮೊಬೈಲ್ ನಲ್ಲಿಯೋ – ಟಿ . ವಿ.ಯಲ್ಲಿಯೋ ಕಳೆದು ಹೋಗಬಹುದಿತ್ತು. ಆದರೆ ನಾವು ಅದನ್ನು ಮಾಡಲಿಲ್ಲ . ದಿನದಲ್ಲಿ ಸುಮಾರು 4 ಗಂಟೆ , ಮನೆಯಿಂದ ಆಚೆ , ಹೊರ ಜಗತ್ತಿನಲ್ಲಿ , ನಿನ್ನನ್ನು ಓಡಾಡಿಸಿದೆವು.   ಅದೃಷ್ಟವಶಾತ್ , ಅದಕ್ಕೆ ಅನುಕೂಲವಾದ ಪರಿಸ್ಥಿತಿ ನಮ್ಮನೆಯಲ್ಲಿತ್ತು. ಕುಟ...