ಪತ್ರ - ಮೊಮ್ಮಗಳಿಗೆ - ಅಧ್ಯಾಯ 5- ಆಚೇ ಮನೆ , ಈಚೇ ಮನೆ ...ಎಲ್ಲಾ ನಿನ್ನ ಮನೆ



ಅಧ್ಯಾಯ #5

ನಮ್ಮ ಬಡಾವಣೆಯ ನೆರೆ-ಹೊರೆಯವರ ಜೊತೆಗೆ ನಿನ್ನ ಒಡನಾಟ

ಸುಮಾರು 40 ಮನೆಗಳಿರುವ ನಮ್ಮ ಬಡಾವಣೆ , ಸಂತೃಪ್ತಿನಗರ 4 A Main. ಬೀದಿಯ ಒಂದು ತುದಿ dead end, ಒಂದು ದೊಡ್ಡ ಗೋಡೆ. ಕೇವಲ 200 ಮೀಟರ್ ಇರುವ ಬೀದಿಯ ಇನ್ನೊಂದು ತುದಿಯಲ್ಲಿ ಕೊತ್ತನೂರು ಮುಖ್ಯ ರಸ್ತೆ. ಎಲ್ಲ ಬಗೆಯ ಅಂಗಡಿಸಾಲು, ವಾಹನಗಳ ಭರಾಟೆ, ಗಿಜಿಗಿಜಿ ಗಲಾಟೆಯ typical city ವಾತಾವರಣ.

ಒಂದು ಕುಟುಂಬದಂತಿರುವ ನಮ್ಮ ಬಡಾವಣೆ, ಬೆಂಗಳೂರು ಮಹಾನಗರ ಸಂಸ್ಕೃತಿ ಗೆ ಸ್ವಲ್ಪ ಭಿನ್ನ ಅಂತಲೇ ಹೇಳಬೇಕು. ಮಹಾನಗರ ಸಂಸ್ಕೃತಿಯೆಂದರೆ,  ನೂರಾರು ಮನೆಗಳು ಒಂದೇ ಆವರಣದಲ್ಲಿದ್ದರೂ , ಪರಸ್ಪರ ಪರಿಚಯವೇ ಇಲ್ಲದೆ, ಸಂಬಂಧವೇ ಇಲ್ಲದ ಹಾಗೆ   ದ್ವೀಪಗಳ ಹಾಗೆ , ಬದುಕುವ ರೂಢಿ.  ಅದಕ್ಕೆ ಹಲವಾರು ಕಾರಣಗಳು. ಆದರೆ ಹೆಮ್ಮಯ ವಿಷಯ ಅಂದರೆ ನಮ್ಮ ಬಡಾವಣೆಯಲ್ಲಿನ ಸಾಮಾಜಿಕ ಸಂಸ್ಕೃತಿ. ಪರಸ್ಪರ ನೋವು-ನಲಿವುಗಳಲ್ಲಿ ಸ್ಪಂದಿಸುವ , ಒಟ್ಟಿಗೇ ರಾಷ್ಟ್ರೀಯ ಹಬ್ಬಗಳನ್ನೂ , ಧಾರ್ಮಿಕ ಹಬ್ಬಗಳನ್ನೂ ಆಚರಿಸಿ ಸಂಭ್ರಮಿಸುವ, ಅನೇಕ ಸಾಮೂಹಿಕ ಚಟುವಟಿಕೆಗಳನ್ನು ಆಚರಿಸುವ ವಾತಾವರಣ ಇರುವ ಬಡಾವಣೆ.

ಆ ದಾರಿಯಲ್ಲಿ ನೀನು , ನಮ್ಮೊಂದಿಗೆ ನಡೆದುಕೊಂಡು ಹೋಗುವಾಗ , ಒಂದೊಂದು ಮನೆಯ ಸಮೀಪ ಬಂದಾಗಲೂ , ಆ ಮನೆಯವರನ್ನು  ,  ಮುದ್ದು ಮುದ್ದಾಗಿ , ಪ್ರೀತಿಯಿಂದ ಕರೆಯುತ್ತಿದ್ದನ್ನು ಕೇಳುವುದೇ ಚಂದ

ದೊಡ್ಡಮ್ಮಾ ..(ಪಕ್ಕದ ಮನೆಯ ಪೂರ್ಣಿಮಾ ಮೇಡಂ )

ಮಿಹಿರಣ್ಣಾ(ನಿನ್ನ ಗೆಳೆಯ ಮಿಹಿರ್ )

ರಜನಿಯತ್ತೇ

ಗಿರೀಶ್ ಮಾವಾ

ಸರಸತ್ತೇ

ಸವಿತತ್ತೇ...

ರೂಪಾ ಅತ್ತೇ/

ಸೌರಭಣ್ಣ

...

ಆಂಟಿ, ಅಂಕಲ್, ಬದಲು  ಅತ್ತೆ, ಮಾವ, ಅಕ್ಕ, ಅಣ್ಣ ...ಪದಗಳನ್ನು ಬಳಸುವುದನ್ನೇ ನಾವು ಅಭ್ಯಾಸ ಮಾಡಿಸಿಬಿಟ್ಟಿದೆವು ನಿನಗೆ.

ಮುದಕೊಡುವ ಒಂದು ಸಣ್ಣ ಅಂಶ ಅಂದರೆ , ಅವರೆಲ್ಲರಿಗೂ ಆಂಗ್ಲ ಭಾಷೆಯ  ಆಂಟಿ, ಅಂಕಲ್ ಅಂತ ಕರೆಸಿಕೊಳ್ಳುವುದಕ್ಕಿಂತಾ ದೇಶೀಯ  ಅತ್ತೆ, ಮಾವ , ಅಣ್ಣ , ಅಕ್ಕ ಅಂತ ಕರೆಸಿಕೊಳ್ಳುವುದು ಇಷ್ಟ ಆಗ್ತಾ ಇತ್ತು.. ನಮಗೆ ಆಶ್ಚರ್ಯ ಆಗ್ತಾ ಇದ್ದದ್ದು, ಒಂದೂವರೆ ವರ್ಷ ಇರುವಾಗಲೇ ನೀನು ಸುಮಾರು 25  ಹೆಸರುಗಳನ್ನು ನೆನಪಿನಲ್ಲಿಟ್ಟಿಕೊಂಡಿದ್ದು.

ಇಡೀ ಬಡಾವಣೆಯರೆಲ್ಲರಿಗೂ ನೀನೂ ಅಂದರೆ ಅಷ್ಟಿಷ್ಟ. ಯಾಕೆ ಅಂದರೆ ನೀನು ಅವರ ಜೊತೆ ಮುದ್ದು ಮುದ್ದಾಗಿ ಮಾತಾಡ್ತಾ ಇದ್ದ ರೀತಿ.

ಬಡಾವಣೆಯ ಮೂರು ದಿನದ ಅದ್ದೂರೀ ಗಣೇಶ ಹಬ್ಬದ ಸಂದರ್ಭದಲ್ಲಿ, ವೇದಿಕೆ ಮೇಲೆ ಹೋಗಿ ವಕ್ರತುಂಡ ಮಹಾಕಾಯ ...”  ಶ್ಲೋಕ ಹೇಳಿ ಒಂದು ಪದಕ ಪಡೆದದ್ದು , ನಮಗೆಲ್ಲಾ ಸಂಭ್ರಮ.

ಇನ್ನೂ ಚೆನ್ನಾಗಿ ನೆನಪಿರೋದು ಅಂದ್ರೆ, ಆ ಪದಕವನ್ನು ಧರಿಸಿಕೊಂಡೇ ಮಲಗಿದ್ದೆ ನೀನು ರಾತ್ರಿಯೆಲ್ಲಾ.

 ಒಂದು ಪುಟ್ಟ ಸ್ವಾರಸ್ಯ ನೆನಪಾಗ್ತಾ ಇದೆ.

ನಮ್ಮನೆಯ ಕಾಂಪೌಂಡ್ ಮೇಲೆ ನೀನು ನಾಯಕಿಯ ಹಾಗೆ ಕುಳಿತಿದ್ದೆ, ನನ್ನ ಕೈಯ ಸಹಕಾರದಿಂದ. ಆಟ ಆಡುತ್ತಿದ್ದ ಸುಮಾರು 15 ಮಕ್ಕಳು ನಿನ್ನ ಕಂಡ ಕೂಡಲೇ ಓಡಿ ಬಂದರು. ನೀನು ಓ..ಎಂದು ದೀರ್ಘವಾಗಿ ಕೂಗಿದೆ. ಅಹಾ! ಆ ಎಲ್ಲಾ ಮಕ್ಕಳೂ ಸಮೂಹಧ್ವನಿಯಲ್ಲಿ “ಓ...” ಎಂದು ಕೂಗಿದ್ರು. ಮತ್ತೆ ನಿನ್ನsolo ಧ್ವನಿ , ಅವರ ಸಮೂಹಧ್ವನಿ. ಆಮೇಲೆ ಸುಮಾರು ಐದು ನಿಮಿಷ ಈ ಸಂಗೀತಪಾಠ’ /voice culture.  ಬೆಂಗಳೂರಿನ ಅನೇಕ ಪಾರ್ಕ್ ಗಳಲ್ಲಿ laughing club ನವರು ಪ್ರತಿದಿನ “ಹೋ...” ಅಂತ ಕಿರುಚುವ ಸನ್ನಿವೇಶದ ಅನುಕರಣೆ ಥರಾ ಅನಿಸ್ತಾ ಇತ್ತು.

 ಎದುರು ಮನೆಯ ತಾತನ ಜೊತೆ ನಿನ್ನ ಸಂಭಾಷಣೆ,

ರಜನಿ ಅತ್ತೆ ಮನೆಯ ರಂಗೋಲಿಯ ವೀಕ್ಷಣೆ ಮತ್ತು ಶ್ಲಾಘನೆ

ಸವಿತತ್ತೇ..” ರೂಪತ್ತೇ” ಅಂತ ಅವರ  ಮನೆ ಮುಂದೆ ನಿಂತು ಕರೆಯೋದು.

ಆಕಾಶದಲ್ಲಿ ವಿಮಾನ ಹಾರುವ ಶಬ್ದ ಕೇಳಿದಾಗ, “ ಮೋದಿ , ಡೆಲ್ಲಿಗೆ ಹೊಗ್ತಾ ಇದಾರೆಅಂತ ಉದ್ಘಾರ

ಹೀಗೇ ಅನೇಕ ಸಣ್ಣ ಸಣ್ಣ ನೆನಪುಗಳು 


 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ