ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

 

ಕವಿತಾ ಸಂಗೀತ -ಸಲ್ಲಾಪಕಾರ್ಯಕ್ರಮ

ಸಾಗರ ( ಶಿವಮೊಗ್ಗ ಜಿಲ್ಲೆ)  ಕಾರ್ಯಕ್ರಮ 

16 ಜನವರಿ 26 

( ಒಂದು ಕಿರು ಅವಲೋಕನ )

-ಪ್ರೇಕ್ಷಕರ   ಪ್ರತಿಕ್ರಿಯೆಯನ್ನು ಆಧರಿಸಿ

 



 ಅದು  ಮಾಮೂಲೀ ಸುಗಮ ಸಂಗೀತ ಕಾರ್ಯಕ್ರಮ ಆಗಿರಲಿಲ.

ಕಾರ್ಯಕ್ರಮದ ಶೀರ್ಷಿಕೆಯೇ ಭಿನ್ನ – ವಿಶೇಷ

ಕವಿತಾ ಸಂಗೀತ-ಸಲ್ಲಾಪ

ಎತ್ತರದ ದೊಡ್ಡ  ವೇದಿಕೆ ಅಲ್ಲ

ಯಾವುದೇ  ಬ್ಯಾನರ್ ಇಲ್ಲ,

ಹತ್ತಾರು ಗಾಯಕರು ಇಲ್ಲ.

ವೈಭವದ  ವಾದ್ಯಸಂಗೀತಗಳು ಇಲ್ಲ.

ನೂರಾರು ಮಂದಿ ಕೇಳುಗರಿಲ್ಲ .

ಮನೆಯಂಗಳದಲ್ಲಿ ಜರುಗಿದ  ಪುಟ್ಟ ಕಾರ್ಯಕ್ರಮವಾದರೂ, ನೆನಪಿನಲ್ಲುಳಿಯುವ ಕಾರ್ಯಕ್ರಮ.

ಕಾರ್ಯಕ್ರಮ ಜರುಗಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ;  ನಿವೃತ್ತ ಶಿಕ್ಷಕ , ಹರಿಕಥೆ ಕಲಾವಿದ,  ಸಂಗೀತ –ಸಾಹಿತ್ಯ  ಕಲಾಪೋಷಕರಾದ ದತ್ತಾತ್ರೇಯ ಹೆಗ್ಡೆ ಮತ್ತು ಅವರ ಪತ್ನಿ ,  ಶಿಕ್ಷಕಿ ಗಂಗೂಬಾಯಿಯವರ ಮನೆ ಸ್ಪಂದನದಲ್ಲಿ. 

ಅದು ಸಾಂಪ್ರದಾಯಿಕ ಮಾಮೂಲೀ  ಸುಗಮ  ಸಂಗೀತ ಕಾರ್ಯಕ್ರಮ ಅಲ್ಲ , ಹೇಗೆ ?

ಎರಡು ಪ್ರಮುಖ ಅಂಶಗಳು

1.  ಸಾಹಿತ್ಯ ಪ್ರಧಾನ ಸಂಗೀತ

2.  ವೈವಿಧ್ಯತೆ

·      ಕವಿತೆಯ ವಸ್ತು / ವಿಷಯ ಗಳಲ್ಲಿ ವೈವಿಧ್ಯತೆ

·      ಪ್ರಕಟಿತ ಭಾವಗಳಲ್ಲಿ ವೈವಿಧ್ಯತೆ

·      ಪ್ರಸ್ತುತಪಡಿಸಿದ ರಾಗಗಳಲ್ಲಿ ವೈವಿಧ್ಯತೆ

·      ಕವಿಗಳ ಆಯ್ಕೆಯಲ್ಲಿ ವೈವಿಧ್ಯತೆ

 

ವಸ್ತುಗಳಲ್ಲಿ ವೈವಿಧ್ಯತೆ  

·      ಕನ್ನಡದ ಸಮೃದ್ಧ  ಕವಿತಾ ಲೋಕದ , ಜನಪ್ರಿಯವಲ್ಲದ , ಆದರೆ ಈ ಕೆಳಗಿನ ವಿಶಿಷ್ಟ , ವೈವಿಧ್ಯಮಯ  ವಸ್ತು/ ವಿಷಯ ಇರುವ ಕವಿತೆಗಳು  ಗಾಯನದ ಮೂಲಕ ಪ್ರಸ್ತುತ ವಾದದ್ದು.

o   ತಾಯಿ ಭಾರತಿಗೆ ನಮನ

o   ದೇವರು ದಡ್ಡನು  – ಮಗುವಿನ ಮುಗ್ಧ ತೀರ್ಮಾನ

o   ಬೀಸುವ ಕಲ್ಲಿನ ಸಂಸ್ಮರಣೆ

o   ಕಸಪೊರಕೆಯಲ್ಲದೆಯೆ ಬೇರೆ ಗುರು ಏತಕ್ಕೆ ?

o   ಮಾಗಿಯಲ್ಲಿ ಅವತರಿಸಿದ ಅಕಾಲ ವಸಂತ

o   ಕೃಷ್ಣನ ವೇಷ ಹಾಕಲು ಅಮ್ಮನಿಗೆ ಬೇಡಿಕೆ

o   ಅಂತರ್ಜಾಲದ ವ್ಯಸನಿಗಳ ಬಗ್ಗೆ ಆತಂಕ

o   ಮತ್ತೊಮ್ಮೆ ಅವತರಿಸಲು ರಾಮನಿಗೆ ಮೊರೆ

ಭಾವಾಭಿವ್ಯಕ್ತಿಯಲ್ಲಿ ವೈವಿಧ್ಯತೆ  

ಭಾವಾಭಿವ್ಯಕ್ತಿ ಯ ದೃಷ್ಟಿಕೋನದಿಂದ ಅವಲೋಕಿಸಿದರೆ , ಅಭಿವ್ಯಕ್ತವಾದ ಭಾವಗಳು :

  • ·      ಭಕ್ತಿ
  • ·      ಹತಾಶೆ
  • ·      ವಿಸ್ಮಯ
  • ·      ಪ್ರೀತಿ
  • ·      ಹಾಸ್ಯ
  • ·      ಸಂಭ್ರಮ
  • ·      ಉದಾತ್ತತೆ

 ರಾಗಗಳಲ್ಲಿ ವೈವಿಧ್ಯತೆ

ಸಂಗೀತ ರಾಗಗಳದೃಷ್ಟಿಕೋನದಿಂದ ಅವಲೋಕಿಸಿದರೆ, ಪ್ರಕಟವಾದ ರಾಗಗಳು:

( ಸುಗಮ ಸಂಗೀತದಲ್ಲಿ,  ರಾಗಗಳನ್ನು ಉಲ್ಲೇಖಿಸುವುದು ಸಮುಚಿತ ಅಲ್ಲ.ಸಂಗೀತದ  ವಿನ್ಯಾಸ ಅಂದರೆ ಸಾಹಿತ್ಯಕ್ಕೆ ಸ್ವರ ಜೋಡಣೆ. ಆದರೂ ಸ್ಥೂಲವಾಗಿ ರಾಗದ ಚೌಕಟ್ಟನ್ನು ಮಾತ್ರ ಹೆಸರಿಸಬಹುದು )

  • ·      ವಾಸಂತಿ
  • ·      ಮಧ್ಯಮಾವತಿ
  • ·      ಭೀಮಪಲಾಸ್
  • ·      ಅಹಿರ್ ಭೈರವ್
  • ·      ಕಾನಡ
  • ·      ಸಿಂಧುಬೈರವಿ

 ಕವಿಗಳಲ್ಲಿ ವೈವಿಧ್ಯತೆ

ವೈವಿಧ್ಯಮಯ ವಸ್ತುಗಳಿಗೆ ಅನುಗುಣವಾಗಿ ಈ ಕೆಳಗಿನ ಕವಿಗಳು ರಚಿಸಿದ ಗೀತೆಗಳನ್ನು ಆಯ್ದುಕೊಳ್ಳಲಾಗಿತ್ತು.

  • ·      ಡಿ.ಎಸ್.ಕರ್ಕಿ
  • ·      ಜಿ.ಎಸ್.ಶಿವರುದ್ರಪ್ಪ
  • ·      ಎಚ್.ಎಸ್.ವೆಂಕಟೇಶಮೂರ್ತಿ
  • ·      ಶಾರದಾ ವಿ ಮೂರ್ತಿ
  • ·      ಮಧು ಕೋಡನಾಡು
  • ·      ವಸುಮತಿ ರಾಮಚಂದ್ರ
  • ·      ಡುಂಡಿರಾಜ್

“ಕವಿತಾ ಸಂಗೀತವೆಂದರೆ ಸಂಗೀತದ ಆನೆಯ ಮೇಲೆ ಸಾಹಿತ್ಯದ ಅಂಬಾರಿಯ ಮೆರವಣಿಗೆ; ಎದ್ದು ಕಾಣಬೇಕಾದದ್ದು ಅಂಬಾರಿ.  ಆನೆಯೋ , ಅಂಬಾರಿಯನ್ನು  ಜವಾಬ್ದಾರಿಯುತವಾಗಿ ಹೊತ್ತು ಗಂಭೀರ ನಡಿಗೆಯಲ್ಲಿ ಸಾಗುವ ವಾಹನವಷ್ಟೆ . ಸಾಹಿತ್ಯದಂಬಾರಿಯ ಘನತೆ-ಚೆಲುವು  ಮತ್ತು  ಸಮುಚಿತ  ಶೃಂಗಾರದ ಆನೆಯ ಚೆಲುವು ಹದವಾಗಿ ಬೆರೆತಾಗ ಮಾತ್ರ  ಮೆರವಣಿಗೆಯ ರಸಾನುಭವ ರಸಿಕನಿಗೆ  

ಈ ತತ್ವಾಧಾರಿತ  ಯಶಸ್ವೀ, ಉತ್ತಮ  ಪ್ರಯೋಗ ಈ ಕಾರ್ಯಕ್ರಮ.

 

ಸುಮಾರು 75 ನಿಮಿಷದ ಪುಟ್ಟ ಕಾರ್ಯಕ್ರಮದಲ್ಲಿ, ಪ್ರತಿ ಗೀತೆಗೂ ಸ್ಪಂದಿಸಿ, ಸಲ್ಲಾಪದಲ್ಲಿ ಭಾಗವಹಿಸಿ,  ಆನಂದಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರು ,  ಪ್ರಬುದ್ಧ ಪ್ರೇಕ್ಷಕರು, ಸಾಗರದ  ಉತ್ತರ ಕನ್ನಡ ಕರಾವಳಿ ಶಿಕ್ಷಕರ ಬಳಗದವರು.

 ಕವಿತಾ ಸಂಗೀತ ಸಲ್ಲಾಪದಲ್ಲಿ ಹಾಡಿದವರು – ವ್ಯಾಖ್ಯಾನಿಸಿದವರು

 ಈ ಕಾರ್ಯಕ್ರಮ ಪ್ರಸ್ತುತ ಪಡಿಸಿದವರು  ಒಂದೇ ಕುಟುಂಬದ ಇಬ್ಬರು  ಕಲಾವಿದರು. 

ಚಿದಂಬರ ಕಾಳಮಂಜಿ

     ಮತ್ತು

ಅವರ ಸೊಸೆ ರಶ್ಮಿ ಶಶಾಂಕ್.

ಚಿದಂಬರ ಕಾಳಮಂಜಿ

ಚಿದಂಬರ ಕಾಳಮಂಜಿ ,  ಸುಗಮ ಸಂಗೀತ ಸಂಯೋಜಕ, ನಿರ್ದೇಶಕ, ಗಾಯಕ, ಬರಹಗಾರ. ಸಾಹಿತ್ಯಪ್ರಧಾನ ಸಂಗೀತ ಸಂಯೋಜನೆಯ ಕ್ರಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.

ಬೆಂಗಳೂರಿನಲ್ಲಿ 20 ವರ್ಷಗಳಿಂದ ಸಕ್ರಿಯವಾಗಿರುವ  ನಮ್ಮನೆ ಸಂಗೀತ ಪ್ರಣತಿಸುಗಮ ಸಂಗೀತ ಹವ್ಯಾಸೀ ವೇದಿಕೆಯ ಸಂಸ್ಥಾಪಕ- ನಿರ್ವಾಹಕ.

ಕನ್ನಡದ ಹಿರಿಯ ಮತ್ತು ಕಿರಿಯ ಕವಿಗಳ , ವೈವಿಧ್ಯಮಯ , ವಿಶೇಷ ಕವಿತೆಗಳಿಗೆ   ಸ್ವರ ಸಂಯೋಜನೆ ಮಾಡಿ, ಸಾಮಾಜಿಕ  ಜಾಲತಾಣಗಳ ಮೂಲಕ ಲಕ್ಷಾಂತರ ಕೇಳುಗರಿಗೆ ತಲುಪಿಸಿದವರು.

Youtube ನ ಅವರ ವಾಹಿನಿ, ಸುಗಮ ಸಂಗೀತದ ಪುಟ್ಟ ಭಂಡಾರ.  ಸುಮಾರು 115 ಗೀತೆಗಳ ಜೊತೆಗೆ , ಪರಿಣತರ ಉಪನ್ಯಾಸ, ಚಿಂತನ , ಮಂಥನ , ಪ್ರಾತ್ಯಕ್ಷಿಕೆಗಳೂ ಸಂಗ್ರಹವಾಗಿರುವ ಒಂದು ಸಂಪನ್ಮೂಲ. (https://www.youtube.com/chidvijay)

------

https://youtube.com/@chidambarakalamanji?si=2kWlL0AwyYFWNi8c


ರಶ್ಮಿ ಶಶಾಂಕ್

ರಶ್ಮಿ ಶಶಾಂಕ್ ಹಿಂದೂಸ್ತಾನಿ ಸಂಗೀತ ಹಿನ್ನೆಲೆಯಿರುವ ಗಾಯಕಿ. ಸಾಗರದ ಪ್ರಖ್ಯಾತ ಸಂಗೀತ ವಿದುಷಿ ವಸುಧಾ ಶರ್ಮ ಅವರ ಶಿಷ್ಯೆ. ಶಾಸ್ತ್ರೀಯ ಸಂಗೀತ ಮತ್ತು ಲಘು ಸಂಗೀತ ಎರಡನ್ನೂ ಸಮರ್ಪಕವಾಗಿ ಹಾಡಬಲ್ಲ ಗಾಯಕಿ.  ಅತ್ಯಂತ ಜೀವಂತಿಕೆ ಮತ್ತು ಮಾಧುರ್ಯ ಇರುವ ಶಾರೀರದ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದ ಗಾಯಕಿ. ಈ ಕಾರ್ಯಕ್ರಮದ ಆತಿಥೇಯರಾದ ಡಿ.ಆರ್. ಹೆಗ್ಡೆ ಮತ್ತು ಗಂಗೂಬಾಯಿಯವರ ಪುತ್ರಿ.

***************************

ಅಂದಿನ ಪ್ರೇಕ್ಷಕರು ನೀಡಿದ ಶ್ಲಾಘನೀಯ ಅಭಿಪ್ರಾಯ.

·     ಸಂಗೀತ ಮತ್ತು ಮಾತು

·     ರಂಜನೆ ಮತ್ತು ಚಿಂತನೆ

ಎರಡರ ಹದವಾದ ಮಿಶ್ರಣದಿಂದಾಗಿ ವಿಶಿಷ್ಟ ಅನುಭವ

·     ಕನ್ನಡ ಸಾಹಿತ್ಯ ಮತ್ತು ಸುಗಮ ಸಂಗೀತ ಎರಡೂ ಕ್ಷೇತ್ರಗಳನ್ನೂ

ವೃದ್ಧಿಸುವಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳು ಪರಿಣಾಮಕಾರಿ

 

 

 

ಕಾಮೆಂಟ್‌ಗಳು

  1. ಹರಿದಾಸ್ ಡಿ ಆರ್ ಹೆಗಡೆಫೆಬ್ರವರಿ 1, 2026 ರಂದು 06:37 AM ಸಮಯಕ್ಕೆ

    ಕಾರ್ಯಕ್ರಮ ವಿಭಿನ್ನ ಹಾಗೂ ವೈಶಿಷ್ಟ ಪೂರ್ಣವಾಗಿತ್ತು ಸಂಗೀತ ಹಾಗೂ ಸಾಹಿತ್ಯದ ಆಲೋಚನಾ ಲಹರಿಯಲ್ಲಿ ಪ್ರೇಕ್ಷಕರನ್ನ ಮುಳುಗಿಸಿತ್ತು ಹಾಡಿನಲ್ಲಿ ವೈವಿಧ್ಯತೆ ಮಾತಿನಲ್ಲಿ ವೈವಿಧ್ಯತೆ ಜೊತೆಗೆ ಕಾರ್ಯಕ್ರಮ ಇಷ್ಟಕ್ಕೆ ಮುಗಿದು ಹೋಯ್ತಾ ಅಂತ ಬೇಸರವಾಯಿತು ಇನ್ನೊಂದು ಸಲ ಇಂಥ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಬೇಕು ಎನ್ನುವ ಬಯಕೆ ಹುಟ್ಟಿಸಿದೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ