ಪೋಸ್ಟ್‌ಗಳು

ಆಗಸ್ಟ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುರುಟುತ್ತಿದ್ದ ಕುಸುಮ ಅರಳಿದ ಕಥೆ

ಇಮೇಜ್
  CK ಮಾಸ್ತರನ ಅನುಭವ / ಚಿಂತನ / ಮಂಥನ ಬರಹ ಮಾಲಿಕೆ ************* ಮುರುಟುತ್ತಿದ್ದ ಕುಸುಮ ಅರಳಿದ ಕಥೆ ************* ನೈಜ ಘಟನೆಯಾಧಾರಿತ *********** ಯಾಕೆ ಈ ಬರಹ ? ಈ ಮೂರು ಉದ್ದೇಶಗಳಿಗಾಗಿ 1.     ಸ್ವಾತ್ಮಸಂತೋಷ 2.     ಅಕಸ್ಮಾತ್ ಈ ಬರಹ ನಾಕು ಜನಕ್ಕೆ (ವಿದ್ಯಾರ್ಥಿ , ಪೋಷಕ ಮತ್ತು ಶಿಕ್ಷಕ ಸಮುದಾಯಕ್ಕೆ) ಪ್ರಯೋಜನ ಆದರೂ ಆಗಲಿ 3.     ಇತ್ತೀಚೆಗಿನ್ನೂ ಅಂಬೆಗಾಲಿಡುತ್ತಿರುವ ನನ್ನೊಳಗಿನ ಬರಹಗಾರನನ್ನು ಬೆಳೆಸುವುದಕ್ಕಾಗಿ ************ ಮುರುಟುತ್ತಿದ್ದ ಕುಸುಮ ಅರಳಿದ ಕಥೆ ************* ದೃಶ್ಯ  #1 – ಸಮಾರಂಭ- ವಿದ್ಯಾರ್ಥಿಗಳಿಗೆ ಆತನ ಸ್ಪೂರ್ತಿಕರ   ಉಪದೇಶ ಭಾಷಣ --------- ವಿದ್ಯಾರ್ಥಿಗಳನ್ನು ಕುರಿತು ಆತ ಸುಮಾರು 45 ನಿಮಿಷ ಮಾಡಿದ ಭಾಷಣಕ್ಕೆ , ಸುಮಾರು ಸಾವಿರ ವಿದ್ಯಾರ್ಥಿಗಳು ಎದ್ದು ನಿಂತು ಕರತಾಡನ ಮಾಡಿದರು. ಅಷ್ಟು ಅದ್ಭುತವಾಗಿತ್ತು ಆತನ ಅನುಭವದ ಮಾತುಗಳು ಮತ್ತು ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ. ಇದು ಜರುಗಿದ್ದು , ಬೆಂಗಳೂರಿನ   ಪ್ರತಿಷ್ಟಿತ ಇಂಜಿನಿಯರಿಂಗ್   ಕಾಲೇಜ್ನ , ಸುಂದರ ಭವ್ಯ ಸಭಾಂಗಣದಲ್ಲಿ ,   ಹಿಂದಿನ ವರ್ಷ distinction ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ – ಬಹುಮಾನ ಪ್ರಧಾನ ,   ಸಂಭ್ರಮದ ಅದ್ದೂರೀ ಸಮಾರಂಭ.     ಆತ ಅಂದರೆ ...

ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #8 ( ಹೂಗಳ ಕರ್ಮ )-ಬರಹ

ಇಮೇಜ್
ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #8 ( ಹೂಗಳ ಕರ್ಮ  ) *********** ಇಂದು ನಾನೇನನ್ನೂ ಗೀಚಿಲ್ಲ ಯಾಕೆಂದರೆ ಗಿಡದೊಂದಿಗೆ ಮಾತಾಡಿಲ್ಲ. ****** ಬದಲಾಗಿ , ನನ್ನನ್ನು ಅದೆಷ್ಟೋ ವರ್ಷಗಳಿಂದ ಕಾಡಿದ , ನನ್ನ ಹೃನ್ಮನವನ್ನು ತಟ್ಟಿದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ವಿರಚಿತ ಹೂವಿನ ಕುರಿತಾದ ಈ ಮನೋಜ್ಞ ಕವಿತೆಯ ವಾಚನ ಮಾಡುವ ಸಾಹಸ ಮಾಡಿದ್ದೇನೆ ದಯವಿಟ್ಟು ಆಲಿಸಿ. --------- ಕವಿತೆಯ ಶೀರ್ಷಿಕೆ *********** ಹೂಗಳ ಕರ್ಮ  *********** ವಿ.ಸೂ: ಉದ್ದೇಶಪೂರ್ವಕವಾಗಿಯೇ , ಪೂರ್ತಿ ಕವಿತೆಯನ್ನು ಇಲ್ಲಿ ಪ್ರಕಟಿಸಿಲ್ಲ ನಿಮ್ಮ ಕುತೂಹಲವನ್ನು ಅರಳಿಸಲಿ ಅಂತ , ಈ ಕವಿತೆಯಲ್ಲಿ ಬಳಸಿರುವ ಕೆಲವು ಸಾಲು , ಕೆಲವು ಅಯ್ದ ಪದಗಳನ್ನು ಮಾತ್ರ ತೋರಿಸಿದ್ದೇನೆ ********* ದೇವರಿಗೆ ಮುಡಿಪಾಗಲೆಂದು ಹುಟ್ಟದು ಹೂವು ಸೃಷ್ಟಿ ನಿಯಮದ ............ ............................... ಆ ಪುಣ್ಯವಾಕಸ್ಮಿಕ ******* ದೈವ ಪಾದದೊಳೆಂತೋ ಅಂತೆ ..................... ....................... ತನ್ನ ಹುಟ್ಟನೆ ಶಪಿಸಿ ಬಾಡಬಹುದು ; ******** ಇಲ್ಲ , ಆಹುತಿಗಾಗಿ ತಂದ ಹೋತದ ಕೊರಳನೇರಿ .......................... ........................ ...............ಮುದುರಲು ಬಹುದು ******** ಹೂ ಹೆತ್ತ ಮರಕಿಲ್ಲ ಉತ್ತರದ ಉದ್ದೇ...

ಸಾವಿರ ಸಾವಿರ ನಮನವು ನಿನಗೆ – ಓ ಅಂತರ್ಜಾಲವೇ ( ಕವಿತೆ )

ಇಮೇಜ್
  ಶೀರ್ಷಿಕೆ ಸಾವಿರ ಸಾವಿರ ನಮನವು ನಿನಗೆ – ಓ ಅಂತರ್ಜಾಲವೇ ******************************* ಒಂದು ಪುಟ್ಟ ಪ್ರಸ್ತಾವನೆ ********** ಅಂತರ್ಜಾಲ – internet ( Facebook – Whatsap – Youtube- Uber-Ola – Audacity – SwarStudio………. ಇನ್ನೂ ಹತ್ತಾರು ) ·        ನನ್ನ ವೃತ್ತಿ-ಪ್ರವೃತ್ತಿ-ಕುಟುಂಬ- ಸಾಮಾಜಿಕ ಜೀವನ – ಎಲ್ಲಾ ಆವರಣಗಳನ್ನೂ   ಅರ್ಥಪೂರ್ಣವನ್ನಾಗಿಸಿದ ·        ನಿರಂತರವಾಗಿ ಬೆಳಗಲು , ಬೆಳೆಯಲು , ಬೆಳೆಸಲು ವೇದಿಕೆಯಾಗಿರುವ ·        ಜೀವನ ಪ್ರೀತಿಯನ್ನು ಉಳಿಸಿಕೊಂಡು , ಬೆಳೆಸಿಕೊಂಡು ಹೋಗಲು ಸದಾ ಸಂಗಾತಿಯಾಗಿರುವ ನನ್ನ ಬದುಕಿನ ಅವಿಭಾಜ್ಯ ಸೌಕರ್ಯ , ಸಾಧನ , ಈ ಮಾಂತ್ರಿಕ ತಂತ್ರಜ್ಞಾನಕ್ಕೆ ಹೀಗೊಂದು ಅಕ್ಷರ ನಮನ. ************** ನನ್ನೊಳಗಿನ ವೃತ್ತಿಪರ   ಮಾಹಿತಿ ಸಂಪರ್ಕ ತಂತ್ರಜ್ಞಾನಿ  ಮತ್ತು  ಹವ್ಯಾಸೀ ಸಾಹಿತ್ಯ- ಸಂಗೀತ ಕಲಾ ಕೃಷಿಕನ ನಡುವಿನ  ಪರಸ್ಪರ ಸಂವಾದದ ಫಲ ಈ ಕವಿತೆ / ಬರಹ **** ಎರಡು   ಭಾವಗಳನ್ನು ಅಭಿವ್ಯಕ್ತಿಸುವ ಪ್ರಯತ್ನ:   1.      ಅಂತರ್ಜಾಲ ಫಲಾನುಭವಿಯಾಗಿ ಕೃ ಕೃತಜ್ಞತಾ ಭಾವ 2.      ಮಾಹಿತಿ ತಂತ್ರಜ್ಞಾನಿಯಾಗಿ ಧನ್ಯತಾ ಭಾವ ***********...

ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #7 (ಕಾಡಿನ ಹೂವು ಸೂಸಿದ ಚಂದದ ಸಂದೇಶ )-ಬರಹ

ಇಮೇಜ್
ಗಿಡದ ಜೊತೆ ನನ್ನ ಸಲ್ಲಾಪ  { ಬರಹ ಸರಣಿ} ಸಂಚಿಕೆ #7  -------- ಓದುಗರಲ್ಲಿ ವಿಜ್ಞಾಪನೆಗಳು ******* ಗಿಡದೊಂದಿಗೆ ಮಾತು ಸರಣಿಯ 7 ನೇ ಸಂಚಿಕೆ ಇದಾಗಿರೋದ್ರಿಂದ , ಹಿಂದಿನ ಸಂಚಿಕೆಗಳನ್ನು ನೀವು ಓದಿದ್ದರೆ , ಇಂದಿನ ಸಂಚಿಕೆ ಜಾಸ್ತಿ ರುಚಿಸಬಹುದೇನೋ! ********* ಗಿಡದ ರೋಷಾವೇಶ ಸ್ವಲ್ಪ ಕಡಿಮೆಯಾಗಿತ್ತು ಅನ್ಸುತ್ತೆ ,  ಕೇಳಿದೆ ಗಿಡವನ್ನು “ ನೀನೇನೋ ನಾಡಿನೊಳಗೆ ಬೆಳೆದ ನಿನ್ನ ಗೆಳೆಯರು ಚಂಡು ಹೂ , ಕನಕಾಂಬರ ... ದ ಆರೋಪ ಕೇಳಿ , ಕೂಗಾಡಿದೆ , ಕಿರುಚಾಡಿದೆ , ಪ್ರಶ್ನೆಗಳ ಮಳೆ   ಸುರಿಸಿದೆ . ಎಂದಾದರೂ ಕಾಡಿನಲ್ಲಿ ಅರಳುವ ಸುಮಗಳ ಅನಿಸಿಕೆ ಕೇಳಿದ್ದೀಯಾ ? “ ಗಿಡದ ಮರುಪ್ರಶ್ನೆ “ ಇಲ್ಲ , ನೀ ಕೇಳಿದ್ದೀಯಾ ? “ ಈ ಭಾವಗೀತೆ ಕೇಳು – ನಿನ್ನ ಒಂದಿಷ್ಟು ಗೊಂದಲಗಳಿಗೆ ಪರಿಹಾರ ಗ್ರಹಿಸು ನಾನೇ ಸಂಗೀತ ವಿನ್ಯಾಸ ಮಾಡಿದ ಮಧು ಕೋಡನಾಡ್ ಅವರ ಕವಿತೆ ದೂರದ ಕೆನಡಾದಲ್ಲಿರುವ ನಮ್ರತ ಪ್ರಸಾದ್ ಹಾಡಿರೋದು *******************