ಇಷ್ಟೂ ತಿಳಿಯಲಿಲ್ಲವೇನೇ – ಆ ದಡ್ಡ ದೇವ್ರಿಗೆ? { ತೊದಲುನುಡಿದೀಪ - ಸಂಚಿಕೆ #3 }-ಬರಹ-ಸಂಗೀತ
ತೊದಲುನುಡಿದೀಪ
{ಬರಹ ಮಾಲಿಕೆ }
ನಮ್ಮನೆ ಪುಟ್ಟಪ್ರಣತಿ ಪ್ರಸ್ತುತಿ
-----------------
ಇಂದಿನ ಸಂಚಿಕೆ ಶೀರ್ಷಿಕೆ
*************************************
ಇಷ್ಟೂ ತಿಳಿಯಲಿಲ್ಲವೇನೇ – ಆ ದಡ್ಡ ದೇವ್ರಿಗೆ?
ಮಿತ್ರರೇ,
‘ಹಾಡಿನ’ ಮೂಲಕ.
ಇಂದಿನ ಸಂಚಿಕೆ, ನಮ್ಮ ಮೊಮ್ಮಗಳದ್ದಲ್ಲ – ಸಾಮಾನ್ಯವಾಗಿ ಎಲ್ಲಾ ಮಕ್ಕಳದ್ದೂ.
50 ವರ್ಷಗಳ ಹಿಂದೆಯೇ,
ಮಕ್ಕಳ ಅಂತರಾಳಕ್ಕೆ ಇಳಿದು ರಚಿಸಿದ ಕವಿತೆ( ಭಾವಗೀತೆ).
ಕವಿ, ‘ಮಗು’ ವಾಗಿ ಅಮ್ಮನನ್ನು ಕೇಳುವ ‘ಮುಗ್ಧ’ ಪ್ರಶ್ನೆ .
ಕೇವಲ ಪ್ರಶ್ನೆ ಅಷ್ಟೇ ಅಲ್ಲ ,
“ಇಷ್ಟೂ ತಿಳಿಯಲಿಲ್ಲವೇನೇ ? ಜಗವ ಮಾಡಿದಂಥ ದೇವ ನಿಜವಾಗಿಯೂ ದಡ್ಡನು”
ಈ ಕವಿತೆಗೆ ಸಂಗೀತದ ಆಭರಣ ತೊಡಿಸಿ,
ಮತ್ತೆ ಮತ್ತೆ ಹಂಚಿಕೊಳ್ತಾ ಇರ್ತೀನಿ.
*****
ಹಾಡನ್ನು ಕೇಳಿ
ಮಕ್ಕಳ ಪ್ರಶ್ನೆಯನ್ನು ಆನಂದಿಸಿ
********
ಹಾಡಿದ ಪುಟಾಣಿಗಳು
ಅದಿತಿ,
------
ಸಂಗೀತ ಸಂಯೋಜನೆ
ಚಿದಂಬರ ಕಾಳಮಂಜಿ
-------
ವಾದ್ಯ ಸಂಗೀತ ವಿನ್ಯಾಸ
ಪ್ರವೀಣ್ ಡಿ ರಾವ್
**************************************
ಹಾಡನ್ನು ಕೇಳಿದ ನಂತರವೇ ಮುಂದಿನ ಸಾಲುಗಳನ್ನು ಓದಿ.
**************************************
ಮಕ್ಕಳು ಕೇಳುವ ಇಂತಹ ಅನೇಕ ಪ್ರಶ್ನೆಗಳಿಂದ ನಾ ಕಲಿತದ್ದು
( ಅಥವಾ ನನ್ನೊಳಗೆ ಹಚ್ಚಿದ ಹಣತೆ):
--------
ಎಲ್ಲಿಯವರೆಗೆ
ನಮ್ಮಂತರಂಗದೊಳಗೊಂದು
‘ಮಗು’
ಯಾಕೆಂದರೆ
1. ಮಗುವಿಗೆ ಎಲ್ಲವೂ ಕುತೂಹಲ
2. ತನ್ನ ಅರಿವಿಗೆ ಬರುವ ಎಲ್ಲಾ ವಸ್ತು, ವಿಚಾರಗಳ ಬಗ್ಗೆ ಏನು, ಯಾಕೆ, ಹೇಗೆ ಇತ್ಯಾದಿ ಪ್ರಶ್ನೆಗಳನ್ನು ಕೇಳ್ತಾನೇ ಇರುತ್ತೆ; ನಿರ್ಜೀವ ವಸ್ತುಗಳಿಗೂ ತನ್ನದೇ ಆದ ಕಲ್ಪನಾ ಪ್ರಪಂಚದಲ್ಲಿ , ಜೀವಂತಿಕೆ ನೀಡುತ್ತೆ
3. ಮಗುವಿನದು ನಿಷ್ಕಳಂಕ ಪ್ರೀತಿ ;
4. ಮಗುವಿಗೆ, ನಿನ್ನೆಯ ಕೊರಗಿಲ್ಲ, ನಾಳೆಯ ಭಯವಿಲ್ಲ
, ಈ ಕ್ಷಣದ ಅನುಭವ ಮಾತ್ರ ವೇದ್ಯ
...ಇನ್ನೂ ಹತ್ತು ಹಲವು
*********
ಏನಂತೀರಾ?
ನಮಸ್ಕಾರ
-----
Facebook Link
https://www.facebook.com/1027295299/videos/515053714307453/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ