ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #6 (ಈ ತಾರತಮ್ಯ ನ್ಯಾಯವೇ? )-ಬರಹ
ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #6
(ಈ ತಾರತಮ್ಯ ನ್ಯಾಯವೇ? )
*********
ಆಹಾ! ಅದೆಂತಹ ಧನ್ಯತಾಭಾವ ನನ್ನೊಳಗೆ!
ನಿನ್ನೆ,
ನಾನು ಕಿಂಚಿತ್ತೂ ನಿರೀಕ್ಷಿಸದ
ಕೃತಜ್ಞತೆಯ ನುಡಿನಮನ
ನನ್ನ ಗಿಡದಿಂದ, ಇಡೀ ಮನುಕುಲಕ್ಕೆ
------
ಯಾಕೆ ಈ ಭಾವತೀವ್ರತೆ?
----
ಕಾರಣ ಇಷ್ಟೇ :
ನಮ್ಮ ಸೌಕರ್ಯಕ್ಕಾಗಿ,
ಭೋಗಕ್ಕಾಗಿ,
ರಂಜನೆಗಾಗಿ,
ಪುಣ್ಯಾರ್ಜನೆಗಾಗಿ ,
ಕಡೆಗೆ ಸ್ವರ್ಗಾರೋಹಣಕ್ಕಾಗಿ
ಪ್ರಕೃತಿಯ ಶೋಷಿಸುವ
ಸ್ವಾರ್ಥಿಗಳು ,
ಕ್ರೂರಿಗಳು ನಾವು ಮನುಜರು
ಎಂಬ ಅಪರಾಧಿ ಪ್ರಜ್ಞೆಯಿಂದ ಬಳಲಿದ್ದೆ
-----
ಮಾಡೋದ್ನೆಲ್ಲಾ ಮಾಡಿ,
ನಮ್ಮನ್ನೇ ಹಳಿದುಕೊಳ್ಳುವ
ವಿಚಿತ್ರ ವಿಪರ್ಯಾಸದ ಸ್ವಭಾವದ
ನಮ್ಮ ಮನುಜ ಕುಲದ ಬಗ್ಗೆಯೇ
ಜಿಗುಪ್ಸೆ ಕಾಡುತ್ತಿದ್ದ ನನಗೆ,
ನಿನ್ನೆ ಗಿಡ ಅರ್ಪಿಸಿದ
( ಅಲ್ಲ , ಅಲ್ಲ, ಸಮರ್ಪಿಸಿದ )
‘ವಂದನೆ – ಅಭಿನಂದನೆ’
ಪುಳಕಿತನನ್ನಾಗಿ ಮಾಡಿತ್ತು
-------------
ಅದರ ‘ನಶೆ’ ಯಲ್ಲಿಯೇ
ಇಂದು ಗಿಡದ ಬಳಿ ಉತ್ಸಾಹದಿಂದ ಬಂದೆ.
“ಇನ್ನು ನನ್ನನ್ನು ಪ್ರಶ್ನೆ ಕೇಳುವುದಿಲ್ಲ, ಕಾಲೆಳೆಯುವುದಿಲ್ಲ
ಈ ಗಿಡ
ಹೇಗಿದ್ರೂ
ಸಂಧಾನ ಆಯ್ತಲ್ಲ?
”
ಇದಾಗಿತ್ತು ನನ್ನ ನಿರೀಕ್ಷೆ
----------
ಆದರೆ , ಆದರೆ
ನನ್ನ ನಿರೀಕ್ಷೆ ಸುಳ್ಳಾಯಿತು,
ಗಿಡ ಕೇಳಿದ ಈ ಪ್ರಶ್ನೆಗಳಿಂದ
*****
“ನಿಮ್ಮಿಂದ ಈ ತಾರತಮ್ಯ ಯಾಕೆ?
ಹೂಗಳ ನಡುವೆ ಭಿನ್ನತೆ
ಮೂಡಿಸಿದ್ಯಾಕೆ “
?
----
ಕೋಪ , ಆವೇಶ ದಿಂದ ಗುಡುಗಿತು ಗಿಡ
----
“ಅದೇನು – ಬಿಡಿಸಿ ಹೇಳಬಾರದೇ ?"
ತಾಳ್ಮೆಯೊಂದಲೇ ಪ್ರಶ್ನಿಸಿದೆ
-----
“ ಇದು ನನ್ನ ಗೆಳೆಯರು ನನ್ನ ಮೇಲೆ ಕಾರಿದ ಕೆಂಡ.
ನಿನ್ನೆ ಮನುಷ್ಯ ರನ್ನು ಕೊಂಡಾಡಿ ಅಟ್ಟಕ್ಕೇರಿಸಿದಿಯೆಲ್ಲ?
ನಮ್ಮ ಸಮಸ್ಯೆಗಳು ಭಾವನೆಗಳ ಪರಿವೇ ಇಲ್ವೇ ನಿನಗೆ ?
“
----
ನನ್ನ ಮರು ಪ್ರಶ್ನೆ
“ಅಯ್ಯೋ – ಯಾರು ನಿನ್ನ ಗೆಳೆಯರು ? ಏನು
ಅವರ ಸಮಸ್ಯೆ ?
ಸುಮ್ನೇ build up ಮಾಡಬೇಡ –ಬೇಗ
ಹೇಳು”
-------
ಉತ್ತರಿಸಿತು ಗಿಡ
“ ನನ್ನ ಗೆಳೆಯರು
ಕನಕಾಂಬರ – ಗೊಂಡೆ ಹೂವು – ಚಂಡು
ಹೂ- ಶಂಖಪುಷ್ಪ------
---
ಸಮಸ್ಯೆ :
ತಮ್ಮನ್ನು ದೇವರ ಮುಡಿಗೆ , ಪಾದಕ್ಕೆ
ಅರ್ಪಿಸುವುದಿಲ್ಲ!
ಗುಡಿಯ ಹೊರಗೆ / ದೇವರಮನೆಯ ಹೊರಗೆ
ಅಲಂಕಾರಕ್ಕೆ ಮಾತ್ರ ನಾವೇ?
ಅದೇನೇನೇನೇನೋ ನಿಯಮ-ನಿರ್ಬಂಧ- ಪದ್ದತಿ-ಆಚರಣೆ !!
---
ಸುವಾಸನೆ ಇರಬೇಕಂತೆ ?
( ನಮ್ಮ ಸುವಾಸನಾರಹಿತ ಸೃಷ್ಟಿ , ಆ ದೇವನದೇ ಅಲ್ಲವೆ?
ಮತ್ತೇಕೆ ಈ ನಿರ್ಬಂಧ ?
----
ಕೆಸರಿನಲ್ಲಿ ಬೆಳೆದಿರಬಾರದಂತೆ ?
( ಕೆಸರಿನಲ್ಲಿ ಬೆಳೆದ ಮಾತ್ರಕ್ಕೆ ಅಂದ – ಚಂದ-ಪರಿಮಳ
ಇಲ್ಲವೇ ?
ಕಮಲಕ್ಕೆ ಮಾತ್ರ ಈ ನಿರ್ಬಂಧ
ಇಲ್ಲ?!! )
----
ಇನ್ನು ಶ್ರೇಷ್ಠತೆಯ ಶಿಫಾರಸು ಬೇರೆ
ಗಣಪತಿಗೆ ಕೆಂಪು, ಶಿವನಿಗೆ – ಬಿಳಿ
...
ಗಣಪತಿಗೆ ತುಳಸಿ ಏರಿಸಬಾರದು
ಇತ್ಯಾದಿ- ಇತ್ಯಾದಿ
“
*********
ಗಿಡ ಮುಂದುವರೆಸಿತು
"
ಕ್ಷಮೆ ಇರಲಿ,
ಈ ನನ್ನ
ಮೂಲಭೂತ,
ಪ್ರಬಲ,ಕಠೋರ ಅನಿಸಬಹುದಾದ
ಸಂದೇಹ/ ಪ್ರಶ್ನೆ :
ಈ ಎಲ್ಲಾ
ನೀತಿ ಸಂಹಿತೆ
ನಿಯಮ-ನಿರ್ಬಂಧ
ಸಂವಿಧಾನ
ಆ ದೇವರು ಮಾಡಿದ್ದೋ ?
??????
ಅಥವಾ
ದೇವರ ನೆಪದಲ್ಲಿ ನೀವು ಮಾಡಿಕೊಂಡದ್ದೋ?
????
ನಿಮ್ಮಿಷ್ಟದ ಹೂವು, ಅಲಂಕಾರ, ಪೂಜೆ, ಪುನಸ್ಕಾರ
ನಿಮ್ಮಿಷ್ಟದ ಕಜ್ಜಾಯದ ನೈವೇದ್ಯ
ನಿಮ್ಮಿಷ್ಟದ ವಿಧಿ, ವಿಧಾನ, ಆಚರಣೆ
"
--------
ಇನ್ನೂ ನಿಲ್ಲಿಸಲಿಲ್ಲ ಗಿಡ;
“
ನಂಗೊತ್ತು ,
ಅದಕ್ಕಿದೆ ನಿನ್ನಿಂದ ,
ರಂಜನೀಯ ಪುರಾಣ ಕಥೆಗಳ
ಸಮರ್ಥನೆ – ಸಮಜಾಯಿಷಿ
“
*********
********
ಸುಸ್ತಾದೆ ನಾನು !!
ನನ್ನಲ್ಲಿ ನಿರುತ್ತರ;
ಸಧ್ಯಕ್ಕೆ ನಾ ಕೊಟ್ಟ ಉತ್ತರ
“ ಬಲ್ಲವರ ಕೇಳಿ ಹೇಳುವೆ”
-------
ಈಗ ಉತ್ತರ ಹುಡುಕುವ ಹೊಣೆ ನನ್ನದು
Google ಸಮುದ್ರದಲ್ಲಿ ತಡಕಾಡಲೇ ?
ಅಯ್ಯೋ ಅದ್ಯಾಕೆ ಬೇಕು ?
ಬಲ್ಲವರು ನೀವೆಲ್ಲಾ ಇದ್ದೀರಲ್ಲ
ಉತ್ತರ ಕೊಡೋಕೆ?
*********

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ