ಮುರುಟುತ್ತಿದ್ದ ಕುಸುಮ ಅರಳಿದ ಕಥೆ
CK ಮಾಸ್ತರನ ಅನುಭವ / ಚಿಂತನ / ಮಂಥನ
ಬರಹ ಮಾಲಿಕೆ
*************
ಮುರುಟುತ್ತಿದ್ದ ಕುಸುಮ ಅರಳಿದ ಕಥೆ
*************
ನೈಜ ಘಟನೆಯಾಧಾರಿತ
***********
ಯಾಕೆ ಈ ಬರಹ ?
1. ಸ್ವಾತ್ಮಸಂತೋಷ
2. ಅಕಸ್ಮಾತ್ ಈ ಬರಹ ನಾಕು ಜನಕ್ಕೆ (ವಿದ್ಯಾರ್ಥಿ, ಪೋಷಕ ಮತ್ತು ಶಿಕ್ಷಕ ಸಮುದಾಯಕ್ಕೆ) ಪ್ರಯೋಜನ ಆದರೂ ಆಗಲಿ
3. ಇತ್ತೀಚೆಗಿನ್ನೂ ಅಂಬೆಗಾಲಿಡುತ್ತಿರುವ ನನ್ನೊಳಗಿನ ಬರಹಗಾರನನ್ನು ಬೆಳೆಸುವುದಕ್ಕಾಗಿ
************
ಮುರುಟುತ್ತಿದ್ದ ಕುಸುಮ ಅರಳಿದ ಕಥೆ
*************
ದೃಶ್ಯ #1 – ಸಮಾರಂಭ- ವಿದ್ಯಾರ್ಥಿಗಳಿಗೆ ಆತನ ಸ್ಪೂರ್ತಿಕರ ಉಪದೇಶ ಭಾಷಣ
---------
ವಿದ್ಯಾರ್ಥಿಗಳನ್ನು ಕುರಿತು ಆತ ಸುಮಾರು 45 ನಿಮಿಷ ಮಾಡಿದ ಭಾಷಣಕ್ಕೆ, ಸುಮಾರು ಸಾವಿರ ವಿದ್ಯಾರ್ಥಿಗಳು ಎದ್ದು ನಿಂತು ಕರತಾಡನ ಮಾಡಿದರು. ಅಷ್ಟು ಅದ್ಭುತವಾಗಿತ್ತು ಆತನ ಅನುಭವದ ಮಾತುಗಳು ಮತ್ತು ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ.
ಇದು ಜರುಗಿದ್ದು, ಬೆಂಗಳೂರಿನ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜ್ನ, ಸುಂದರ ಭವ್ಯ ಸಭಾಂಗಣದಲ್ಲಿ, ಹಿಂದಿನ ವರ್ಷ distinction ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ – ಬಹುಮಾನ ಪ್ರಧಾನ, ಸಂಭ್ರಮದ ಅದ್ದೂರೀ ಸಮಾರಂಭ.
ನೂರಾರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಂಚುತ್ತಿರುವಾಗಲೇ, ಆತನ ಕಣ್ಣುಗಳು ಅತ್ತಿತ್ತ ಹುಡುಕಲು ಆರಂಭಿಸಿದವು, 5 ನೇ ಸೆಮಿಸ್ಟರ್, Computer Science ನಲ್ಲಿ , ವ್ಯಾಸಂಗ ಮಾಡುತ್ತಿದ್ದ ಸುರೇಶ ನಿಗಾಗಿ. ಸುರೇಶನಿಗೂ ತನ್ನ ಕೈಯಿಂದಲೇ ಪ್ರಶಸ್ತಿ ನೀಡುವ ಸಂಭ್ರಮವನ್ನು ಆನಂದಿಸುವುದಕ್ಕಾಗಿ.
ಆದರೆ..ಆದರೆ ....ಸುರೇಶ ಎಲ್ಲೂ ಕಾಣಿಸಲೇ ಇಲ್ಲ. ನಿರಾಸೆ ಆತನಿಗೆ . ನಿರಾಸೆಯ ಹಿಂದೆಯೇ ಆವರಿಸಿದ್ದು ಕುತೂಹಲ. ಈ ಹುಡುಗ ಯಾಕೆ ಬಂದಿಲ್ಲ ಎಂದು ತಿಳಿಯುವ ಕುತೂಹಲ.
ಯಾಕೀ ಈ ಸುರೇಶ ನ ಮೇಲೆ ಇಷ್ಟೊಂದು ಕುತೂಹಲ ?
Simple
ಸರಳ, ಸುರೇಶ ಬೇರೆ ಯಾರೂ ಆಲ್ಲ, ರಮೇಶನ ಸ್ವಂತ ಮಗ.
---------
ದೃಶ್ಯ #2 – ಆತನಿಗೆ ಅನಿರೀಕ್ಷಿತ ಮಾನಸಿಕ ಆಘಾತ
ಓಡಿದ ಮನೆಗೆ . ವಾಸ್ತವ ತಿಳಿಯುವ ಹಪಹಪಿಯಿಂದ. ಮಗ ಇನ್ನೂ ಮನೆಗೇ ಬಂದಿರಲಿಲ್ಲ. ಕಿಟ್ಟಿ ಪಾರ್ಟಿಗೆ ಹೋಗಿದ್ದ ಹೆಂಡತಿ ಮೀರಾಳೂ ತಡವಾಗಿ ಬಂದಳು . ವಿಷಯ ತಿಳಿಸಿದ . ಬಿಸಿಬಿಸಿ ಚರ್ಚೆಯಾಯಿತು. ಆಕೆಗೂ shock.
ಆಗರ್ಭ ಶ್ರೀಮಂತ ಕುಟುಂಬ ಅವರದು. ರಮೇಶ , ಆತನ ಹೆಂಡತಿ ಮೀರಾ , ಮಗ ಸುರೇಶ , ಮಗಳು ದೀಪ. ಭರ್ಜರಿ ಬಂಗಲೆಯಲ್ಲಿ ವಾಸ. ಮನೆಯಲ್ಲಿ ಆಳುಕಾಳು. ಎಲ್ಲಾ ಆಧುನಿಕ ಸೌಕರ್ಯ . ರಮೇಶನದು , ಬಹುರಾಷ್ತ್ರೀಯ ಕಂಪನಿಯಲ್ಲಿ , ಅತಿ ದೊಡ್ಡ ಹುದ್ದೆ, ವರ್ಷವೆಲ್ಲಾ ಪ್ರಪಂಚದಾದ್ಯಂತ ಸುತ್ತಾಟದ ಕೆಲಸ. ಸಾವಿರಾರು ಇಂಜಿನಿಯರುಗಳಿಗೆ BOSS.
ಮೀರಾಳದ್ದೋ, ಭೋಗದ ಜೀವನ. ಪಾರ್ಟಿ, ಸಿನೇಮಾ, ಮಾಲ್, ಪಿಕ್ನಿಕ್ ..ಮೋಜು, ಮಸ್ತಿ
------
ಎಚ್ಚೆತ್ತುಕೊಂಡ ಈ ಪೋಷಕರಿಂದ , ಸುರೇಶನನ್ನು ಮತ್ತೆ ದಾರಿಗೆ ತರಲು ಸಹಾಯ ಮಾಡುವಂತೆ ನಮಗೆ ವಿನಂತಿ. ವಿಭಾಗದ ಮುಖ್ಯಸ್ತರೂ ಮತ್ತು ನಾನೂ , ಸಕ್ರಿಯರಾದೆವು.
ಸಮಾಲೋಚನೆಯ ಸರಣಿ
ವಿದ್ಯಾರ್ಥಿ ಜೊತೆ ಆಪ್ತಸಮಾಲೋಚನೆ :
ಆತನ ಜೊತೆ ಖಾಸಗಿಯಾಗಿ ಸಮಾಲೋಚನೆ ಮಾಡಿದಾಗ ತಿಳಿದು ಬಂದ ,ಆಶ್ಚರ್ಯಕರ ವಿಷಯಗಳು
• ಆತನಿಗೆ ಇಂಜಿನಿಯರಿಂಗ್ , ಅದರಲ್ಲಿಯೂ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ತಾಂತ್ರಿಕ ವಿಷಯಗಳು ತಲೆಗೆ ಹೋಗ್ತಾಇರಲಿಲ್ಲ ಅಪ್ಪ, ಅಮ್ಮನ ಒತ್ತಾಯ. ಅಪ್ಪ IT ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾನೆ. ಮಗನೂ ಹಾಗೆಯೇ ಆಗಬೇಕು ಎಂಬ ಅಪ್ಪ, ಅಮ್ಮನ ಬಲವಂತ.
•ಆದರೆ ಆತ ದಡ್ಡ ಅಲ್ಲ. ಆತ, ಕಾಲೇಜಿನ Extra-curricular ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ನಾಯಕತ್ವದ ಗುಣ, ಉತ್ತಮ ಸಂವಹನ ಕಲೆ, ನಿರ್ವಹಣಾ ಕಲೆ, ಆತನಿಗಿತ್ತು. Management ಕ್ಷೇತ್ರ ಆತನ ಆಸಕ್ತಿಯ ಕ್ಷೇತ್ರ ವಾಗಿತ್ತು.
· ಮನೆಯಲ್ಲಿ ಶ್ರೀಮಂತ ಸೌಕರ್ಯ ಮಹಾಪೂರ , ಆದರೆ ಅಪ್ಪ-ಅಮ್ಮನ ಪ್ರೀತಿ-ಕಾಳಜಿಯ ಕೊರತೆ. ಅಪ್ಪ ಒಂದು ಕಡೆ, ಅಮ್ಮ ಒಂದು ಕಡೆ – ಈತನ ಅಂತರಿಕ ತುಮುಲಗಳನ್ನು ಆಲಿಸಲೂ, ಮನೆಯಲ್ಲಿ ಯಾರೂ ಇಲ್ಲದ ಪರಿಸ್ಥಿತಿ.
ಸಮಾಲೋಚನೆ: ಅಪ್ಪ, ಅಮ್ಮನ ಜೊತೆ
ಅಪ್ಪ ಸುರೇಶ ಬಿಕ್ಕಿ ಬಿಕ್ಕಿ ಅತ್ತ, ಇಂತಹ ವಿಪರ್ಯಾಸದ ಸನ್ನಿವೇಶಕ್ಕಾಗಿ.
“ಸಾವಿರಾರು ನೌಕರರಿಗೆ ನಾಯಕನಾಗಿ , ಜೀವನ ಕಲೆ ಬೋಧಿಸುವ ತಾನು, ಸ್ವಂತ ಮಗನ ನಿಯಂತ್ರಣದಲ್ಲಿ ಸೋತೆ” ಎಂದು.
ಸಮಾಲೋಚನೆ: ಅಪ್ಪ, ಅಮ್ಮ ಮತ್ತು ಮಗನನ್ನು ಜೊತೆ ಒಟ್ಟಿಗೇ
ಇಂಜಿನಿಯರಿಂಗ್ ವ್ಯಾಸಂಗದ ಅರ್ಧಭಾಗವನ್ನು ಪೂರ್ಣಗೊಳಿಸಿದ ಸುರೇಶ, ಉಳಿದರ್ಧ ಭಾಗವನ್ನು, ಕಷ್ಟಪಟ್ಟು ಓದಿ , ಪೂರ್ಣ ಗೊಳಿಸುವ ಸಂಕಲ್ಪ ಮಾಡಿದ . ನಾವು, ಕಾಲೇಜಿನಿಂದ , ಆತನಿಗೆ ವಿಶೇಷ ತರಬೇತಿ ಒದಗಿಸುವುದಾಗಿ ಭರವಸೆ ನೀಡಿದೆವು.
********
ಈಗ Fast Forward ಮಾಡ್ತೀನಿ , ಕಥೆಯ ಅಂತ್ಯಕ್ಕೆ
ಕಾಲೇಜಿನಲ್ಲಿ ನನ್ನ ಕೊಠಡಿಯ ಬಾಗಿಲನ್ನು ಯಾರೋ ತಟ್ಟಿದರು. ಬಾಗಿಲು ತೆಗೆದೆ. ಸ್ವಲ್ಪ ಧಡೂತಿ ಎನಿಸಿದ ಆ ವ್ಯಕ್ತಿಯನ್ನು ಎಲ್ಲೋ ನೋಡಿದ ನೆನಪು.
“ ಸರ್- ಗುರ್ತು ಸಿಗಲಿಲ್ವಾ? ನಾನು ಸರ್- ಸುರೇಶ – 6 ವರ್ಷಗಳ ಹಿಂದೆ ನಾಲಾಯಕ್ ಎನ್ನಿಸಿಕೊಂಡಿದ್ದ ನಿಮ್ಮ ವಿದ್ಯಾರ್ಥಿ”
ಎಲ್ಲವೂ ನೆನಪಾಯಿತು. ಕೂರಿಸಿದೆ, ಉಪಚರಿಸಿದೆ.
“ ಏನು, ಅನಿರೀಕ್ಷಿತವಾಗಿ ಕಾಲೇಜಿಗೆ ಬಂದದ್ದು?” ಕೇಳಿದೆ
ಆತ ಸಂಭ್ರಮದಿಂದಲೇ ಉತ್ತರಿಸಿದ.
“ ನಾನೊಂದು ಬಹುರಾಷ್ತ್ರೀಯ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ( Human ResourceDevelopment ) ಮ್ಯಾನೇಜರ್ ಆಗಿ ಕೆಲಸ ಮಾಡ್ತಾ ಇದೀನಿ. ನಾ ಓದಿದ ಈ ಕಾಲೇಜಿನಲ್ಲಿ campus recruitment ಗಾಗಿ ಬಂದಿದ್ದೀನಿ. Engineering ವ್ಯಾಸಂಗ ಮುಗಿಸಿ, ನಂತರ ನನ್ನ ಅತ್ಯಾಸಕ್ತಿಯ ವಿಷಯ MBA ಸಂಪೂರ್ಣ ಮಾಡಿ, ಈ ಕಂಪೆನಿ ಸೇರಿದೆ. ”
“ ಸರ್ . ಇನ್ನೊಂದು ಅತಿ ಮುಖ್ಯ ವಿಚಾರ ಸರ್. ಅಪ್ಪ, ಅಮ್ಮ ಕೂಡ , ಬಂದಿದ್ದಾರೆ ಸರ್. ತಮ್ಮನ್ನು ಭೇಟಿ ಮಾಡೋದಕ್ಕೆ “
****
ನಮ್ಮ ವಿಭಾಗದ ಮುಖ್ಯಸ್ತಉ ಮತ್ತು ನನ್ನ ಜೊತೆ ಮತ್ತೆ ಈ ಕುಟುಂಬದ ಭೇಟಿ.
6 ವರ್ಷದ ಹಿಂದೆ ಬಿಕ್ಕಿ ಬಿಕ್ಕಿ ಅತ್ತಿದ್ದ ದಿನೇಶ್ ದಂಪತಿಗಳ ಕಣ್ಣುಗಳಲ್ಲಿ ಮತ್ತೆ ಕಣ್ಣೀರು.
“ ಮುರುಟಿ ಹೋಗುತ್ತಿದ್ದ ಕುಸುಮ ಅರಳಿಸಿದಿರಿ ಸರ್”
ಅಂದೂ ಕಣ್ಣೀರು – ಇಂದೂ ಕಣ್ಣೀರು
ಕ್ರಿಯೆ-ವಸ್ತು- ಅದೇ
ಆದರೆ ಭಾವ ಮಾತ್ರ ಬೇರೆ ಬೇರೆ
ಅಂದು ನಿರಾಸೆ- ಹತಾಶೆ
ಇಂದು ಸಂತೃಪ್ತಿ – ಧನ್ಯತೆ , ನಮ್ಮ ಐವರ ಮತ್ತು ನಮ್ಮ ವಿದ್ಯಾಸಂಸ್ಥೆಯ ಮಾಲಿಕರ ಹೃನ್ಮನಗಳಲ್ಲಿ.
****
ನೈಜ ಘಟನೆಯಾಧಾರಿತ ಕಥೆ ಮುಗಿಯಿತು.
ಈ ಅನುಭವ, ನನ್ನ ಪ್ರಾಧ್ಯಾಪಕ ವೃತ್ತಿ ಜೀವನದ ಪಯಣದಲ್ಲಿ ಒಂದು ಪ್ರಾತಿನಿಧಿಕ ಉದಾಹರಣೆ ಅಷ್ಟೆ .
ಇಂತಹ ಹಲವಾರು, ಭಿನ್ನ ಭಿನ್ನ ಸ್ವರೂಪದ ಉದಾಹರಣೆಗಳು , ನಮಗೆ ಕಲಿಸಿದ ಪಾಠಗಳು ಅನೇಕ.
ಈ ಪಾಠಗಳು , ಪೋಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ / ಶಿಕ್ಷಣ ಸಂಸ್ಥೆಗಳಿಗೆ ಪ್ರಯೋಜನ ಅಂತ ನನ್ನ ವೈಯುಕ್ತಿಕ ಅನಿಸಿಕೆ.
ಹಾಗಾದರೆ ನಾವು ಕಲಿತ ಪಾಠಗಳೇನು?
ನಿಮ್ಮ ಅನುಭವ, ಅಭಿಪ್ರಾಯ, ರಚನಾತ್ಮಕ ಟೀಕೆ, ಟಿಪ್ಪಣಿಗಳಿಗೆ , ಮುಕ್ತ ಸ್ವಾಗತ.
****
_ ಇಂತಿ ನಿಮ್ಮ CK ಮಾಸ್ತರ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ