ಸಾವಿರ ಸಾವಿರ ನಮನವು ನಿನಗೆ – ಓ ಅಂತರ್ಜಾಲವೇ ( ಕವಿತೆ )

 


ಶೀರ್ಷಿಕೆ
ಸಾವಿರ ಸಾವಿರ ನಮನವು ನಿನಗೆ – ಓ ಅಂತರ್ಜಾಲವೇ
*******************************
ಒಂದು ಪುಟ್ಟ ಪ್ರಸ್ತಾವನೆ
**********
ಅಂತರ್ಜಾಲ – internet ( Facebook – Whatsap – Youtube- Uber-Ola – Audacity – SwarStudio……….ಇನ್ನೂ ಹತ್ತಾರು )
·       ನನ್ನ ವೃತ್ತಿ-ಪ್ರವೃತ್ತಿ-ಕುಟುಂಬ- ಸಾಮಾಜಿಕ ಜೀವನ – ಎಲ್ಲಾ ಆವರಣಗಳನ್ನೂ  ಅರ್ಥಪೂರ್ಣವನ್ನಾಗಿಸಿದ
·       ನಿರಂತರವಾಗಿ ಬೆಳಗಲು, ಬೆಳೆಯಲು, ಬೆಳೆಸಲು ವೇದಿಕೆಯಾಗಿರುವ
·       ಜೀವನ ಪ್ರೀತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಸದಾ ಸಂಗಾತಿಯಾಗಿರುವ
ನನ್ನ ಬದುಕಿನ ಅವಿಭಾಜ್ಯ ಸೌಕರ್ಯ, ಸಾಧನ ,
ಈ ಮಾಂತ್ರಿಕ ತಂತ್ರಜ್ಞಾನಕ್ಕೆ ಹೀಗೊಂದು ಅಕ್ಷರ ನಮನ.
**************
ನನ್ನೊಳಗಿನ ವೃತ್ತಿಪರ  ಮಾಹಿತಿ ಸಂಪರ್ಕ ತಂತ್ರಜ್ಞಾನಿ
 ಮತ್ತು
 ಹವ್ಯಾಸೀ ಸಾಹಿತ್ಯ- ಸಂಗೀತ ಕಲಾ ಕೃಷಿಕನ ನಡುವಿನ 
ಪರಸ್ಪರ ಸಂವಾದದ ಫಲ ಈ ಕವಿತೆ / ಬರಹ
****
ಎರಡು  ಭಾವಗಳನ್ನು ಅಭಿವ್ಯಕ್ತಿಸುವ ಪ್ರಯತ್ನ: 
1.     ಅಂತರ್ಜಾಲ ಫಲಾನುಭವಿಯಾಗಿ ಕೃ ಕೃತಜ್ಞತಾ ಭಾವ
2.     ಮಾಹಿತಿ ತಂತ್ರಜ್ಞಾನಿಯಾಗಿ ಧನ್ಯತಾ ಭಾವ
***********
ಕವಿತೆ
*******
ಸಾವಿರ ಸಾವಿರ ನಮನವು ನಿನಗೆ – ಓ ಅಂತರ್ಜಾಲವೇ
+++++++++++++++++
ಸಾವಿರ ಸಾವಿರ ಗಾವುದ ದೂರವ
ಶೂನ್ಯವ ಮಾಡಿದ ತಾಂತ್ರಿಕ ಬಲವೇ
ಮಾಹಿತಿ ಅಂತರ್ಜಲವೇ
ಮಾಂತ್ರಿಕ ಅಂತರ್ಜಾಲವೇ
*ಸಾವಿರ ಸಾವಿರ ನಮನವು ನಿನಗೆ
ಓ ಅಂತರ್ಜಾಲವೇ*
-----------
*ಅಂದು*
         ಪುಟ್ಟ ಬಾಯ
         ರಂಗಸ್ಥಳದಲಿ
         ವಿಶ್ವರೂಪವ ತೋರಿಸಿ
         ಬೆರಗು (ಮರುಳು) ಮಾಡಿದ
*ಆ ದೇವ*

*ಇಂದು*
       ಮುಷ್ಟಿಯಲೇ
       ಸಮಷ್ಟಿ ತೋರಿಸೋ
       ಸಾಧನ ಸೃಷ್ಟಿಸಿ
       ಆ ದೇವನನೇ
       ಮರುಳು ಮಾಡಿದ
*ಈ ಮಾನವ*

ಈ ಸಾಧನೆಯ ಸಾಧನವೇ
*ಸಾವಿರ ಸಾವಿರ ನಮನವು ನಿನಗೆ
ಓ ಅಂತರ್ಜಾಲವೇ*
--------------
ಕಾಣದ ಕ್ರಿಮಿಯ ಘೋರ ದಾಳಿಗೆ
ಬಲಿಯಾಯಿತು,
ಸ್ಥಬ್ದವಾಯಿತು,
ಮನುಜ ಕುಲ.
ಭೌತಿಕ ಅಂತರದನಿವಾರ್ಯತೆಯಲಿ
ಮನೆಯಲೇ ಮುದುಡಿತು ಜನಸಂಕುಲ
ವೃತ್ತಿ, ಪ್ರವೃತ್ತಿ,ಸಂಸಾರ, ವ್ಯವಹಾರ,
ರಚನೆ, ರಂಜನೆ, ಜ್ಞಾನಾರ್ಜನೆ
ಸಕಲ ಕೆಲಸಕೂ
ಮನೆಯೇ ಆಯಿತು ಕಾರ್ಯಸ್ಥಳ
 
ಈ ಪರಿವರ್ತನೆ  ಸಾಧನವೇ
*ಸಾವಿರ ಸಾವಿರ ನಮನವು ನಿನಗೆ
ಓ ಅಂತರ್ಜಾಲವೇ*
-----------------
ಧನ್ಯರೋ ನೀವು ಧನ್ಯರು
ಮಾಹಿತಿ ತಂತ್ರಜ್ಞಾನಿಗಳು
 
ಪ್ರಕೃತಿ ಶಕ್ತಿಯ ಜೊತೆಗೆ
ಬುದ್ಧಿಶಕ್ತಿಯ ಹದದಲಿ ಬೆರೆಸಿ
ಅಂತರ್ಜಾಲವ ಸೃಷ್ಟಿಸಿ
ಮುಷ್ಟಿಲಿ ಸಮಷ್ಟಿಯ ಕಟ್ಟಿಕೊಟ್ಟವರು

ಬೆಳಗುವ,ಬೆಳೆಸುವ,ಬೆಳೆಯುವ,
ವಿಶ್ವದೊಳಿತನೇ ಬಯಸುವ
ಸಂಕಲ್ಪವ ತೊಟ್ಟವರು
 
ಸಾವಿರ ಸಾವಿರ ನಮನವು ನಿಮಗೆ
ಮಾಹಿತಿ ತಂತ್ರಜ್ಞರಿಗೆ
ಅಂತರ್ಜಾಲದ ಸೃಷ್ಟಿಕರ್ತರಿಗೆ
*************
ಈ ಸ್ವರಚಿತ ಕವಿತೆಗೆ ,  ನಾನು ಸಂಗೀತ ವಿನ್ಯಾಸ ಮಾಡಿ ಹಾಡಿದ್ದೇನೆ , 
ನಮ್ಮನೆ ಸಂಗೀತ ಪ್ರಣತಿವಾಹಿನಿಯಲ್ಲಿ.
***********
https://youtu.be/J0z76djgm48?si=qdUswz2dHC0AEVIK

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ