ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ



ಗಿಡದ ಜೊತೆ ಮಾತುಕತೆ
ಸರಣಿ ಬರಹ 
ಸಂಚಿಕೆ #
*************************
ಪೂಜೆ ಓಕೆ – ಹೂವೇ ಯಾಕೆ ?
********************
ದೇವರ ಪೂಜೆಗೆಂದು
ಹೂ ಬಿಡಿಸಲು
ಗಿಡದ ಬಳಿಗೆ ಹೋದೆ.

ವಾವ್,
ನಳನಳಿಸುವ
ಸುಂದರ ಹೂಗಳು

ಥಟ್ಟನೆ ನನ್ನ ಮನದಲಿ
ಚಿಮ್ಮಿತೊಂದು ಪ್ರಶ್ನೆ
"ತಾಯಿಯಿಂದ
ಮಕ್ಕಳನ್ನು ದೂರ ಮಾಡುವುದು ಸರಿಯೇ?"
ಈ ಪ್ರಶ್ನೆ ಕಲಕಿತು
ಹೃದಯವ
"ಪೂಜೆ ಓಕೆ, ಹೂವೇ ಏಕೆ?"

ತಕ್ಷಣ,
ಕಾಣದ ದೇವನಿಗೆ ಹೇಳಿದೆ
ಇಂದಿನಿಂದ
ಪುಷ್ಪಾರ್ಚನೆ ಇಲ್ಲ  ನಿನಗೆ
ಬರೀ ಭಾವಾರ್ಚನೆ  ಮಾತ್ರ"

 
ಆ ದೇವ
"ತಥಾಸ್ತು"
ಅಂದನೋ ಇಲ್ಲವೋ ಗೊತ್ತಿಲ್ಲ

ಆದರೆ , ಆದರೆ
ಹೂವಿನ ಗಿಡದಲ್ಲಿ ಮಾತ್ರ
ಆನಂದದ ಕಿಲ ಕಿಲ

ಅಲ್ಲಿಯೇ ಇನ್ನಷ್ಟು ಕಾಲ ನಿಂತೆ,
ತಾಯಿ ಮಕ್ಕಳ ಹಿಗ್ಗಿನಾಟದ ಪ್ರೇಕ್ಷಕನಾಗಿ

ಒಮ್ಮೆಲೇ ಥಟ್ಟನೆ
ಪೂಜೆಯ ನೆನಪಾಯಿತು.

ಯಾರೋ
ಕಿವಿಯಲ್ಲಿ ಪಿಸುಗುಟ್ಟಿದಂತಾಯಿತು 

ಸಂತೃಪ್ತನಾದೆ
ನಿನ್ನ ಭಾವದಿಂದ
ನಿನ್ನ ನಿರ್ಧಾರದಿಂದ 
 ಪಿಸುಗುಟ್ಟಿದವ ಇನ್ಯಾರೂ ಅಲ್ಲ 
 ನಾ ಪೂಜಿಸುತ್ತಿದ್ದ ದೇವ
 

ಕಾಮೆಂಟ್‌ಗಳು

  1. ವಿಶಿಷ್ಟ ಭಾವನಾತ್ಮಕ ಚಿಂತನೆ..

    ಪ್ರತ್ಯುತ್ತರಅಳಿಸಿ
  2. ಅಮ್ಮ, ಅಜ್ಜಿ, ಅತ್ತೆ, ಸೊಸೆ ಎಲ್ಲರೂ ಹೆಣ್ಣೆಅಲ್ಲವೆ., ಮಹಾನ್ ಕವಿಗಳು ಹೇಳಿದಂತೆ ಹೆಣ್ಣು ಒಂದು ಹೂವಿನ ಹಾಗೆ ಎಂದು, ಅವಳು ತವರು ಮನೆಯಲ್ಲೇ ಇದ್ದರೆ ಬೇರೆಯವರ ಮನೆ ಬೆಳಗುವುದು ಹೇಗೆ, ಹಾಗೆಯೇ ಒಂದು ಹೊವು ದೇವರಿಗೆ ಅರ್ಪಿಸಿದ ನಂತರ ಫರಿಪೂರ್ಣತೆಯನ್ನು ಹೊಂದಲು ಸಾದ್ಯವೆಂದು ಕವಿಗಳು ಕವಿತೆಗಳಲ್ಲಿ ತಿಳಿಹೇಳಿದ್ದಾರೆ ಅಲ್ಲವೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ