ಸೂರ್ಯಮಾಮ ಕೂ...ಕಿ ( ತೊದಲುನುಡಿದೀಪ ಸಂಚಿಕೆ #2)-ಬರಹ

 



ನಮ್ಮನೆ ಪುಟ್ಟಪ್ರಣತಿ ಪ್ರಸ್ತುತಿ 
-----------------
ತೊದಲುನುಡಿದೀಪ
{ಬರಹ ಮಾಲಿಕೆ }
ಸಂಚಿಕೆ #2 
*****
ಇಂದಿನ ಸಂಚಿಕೆ ಶೀರ್ಷಿಕೆ
-------
ಸೂರ್ಯಮಾಮ ಕೂ...ಕಿ
***
ಇಂದಿನ ವಿಷಯಕ್ಕೆ ಬರುವ ಮುನ್ನ ಒಂದು ಕಿರು ಪ್ರಸ್ತಾವನೆ
*****
ಏನಿದು ಬರಹಮಾಲಿಕೆ ತೊದಲುನುಡಿದೀಪ ‘ ?
******
ನಮ್ಮನೆ ಪುಟ್ಟ ಪ್ರಣತಿ , ಒಂದೂವರೆ ವರ್ಷದ ಮೊಮ್ಮಗಳು ಆರೋಹಿಯ ಇದುವರೆಗಿನ ಮತ್ತು ಮುಂದಿನ ಒಡನಾಟದಲ್ಲಿ , ನಮ್ಮ ಕುಟುಂಬದವರು { ಪುಟ್ಟಿಯ ಅಮ್ಮ, ಅಪ್ಪ, ಅಜ್ಜ, ಅಜ್ಜಿ} ಪಡೆದ ಅನುಭವಗಳನ್ನುಬರಹ ರೂಪದಲ್ಲಿ ಅಭಿವ್ಯಕ್ತಿಸಿ ಸಂಗ್ರಹಿಸುವ ಹಂಬಲ ನನಗೆ.
ನಂಗೊತ್ತು, ನಿಮ್ಮನೆಯ ಮಕ್ಕಳು, ಮೊಮ್ಮಕ್ಕಳಲ್ಲೂ  ಇಂತಹ ಕ್ಷಣಗಳನ್ನು ಆನಂದಿಸ್ತೀರ ಅಂತ .
----
ಎಷ್ಟಂದರೂ "ಹೆತ್ತವರಿಗೆ ಹೆಗ್ಗಣವೂ ಮುದ್ದು" ಅಲ್ವೇ?
ನಾವೇನೂ ಹೊರತಲ್ಲ ಈ ಗಾದೆಗೆ. 
ಆದರೆ, ಕೇವಲ ನಮ್ಮನೆ ಪುಟಾಣಿಯ  ಲೀಲೆಗಳನ್ನದೆಯೇ, ನನ್ನ ಅನುಭವಕ್ಕೆ ಬಂದ ಬೇರೆ ಮಕ್ಕಳ ಸಂಗತಿಗಳನ್ನೂ ಬರೆಯುವ ಹಂಬಲ ಇದೆ. 
-----
ಈ ಬರಹಮಾಲಿಕೆಗೆ ಏನು ಪ್ರೇರೇಪಣೆ ?
----
ನನ್ನ ಪ್ರಥಮ ಬರಹವನ್ನು ತುಂಬಾ casual ಆಗಿ ಮೊನ್ನೆ ಪ್ರಕಟಿಸಿದ್ದೆ ಫೇಸ್ ಬುಕ್ ನಲ್ಲಿ. ಅದನ್ನು ಓದಿ- ಪ್ರತಿಕ್ರಿಯಿಸಿದವರ ಸಂಖ್ಯೆ ನಾ ನಿರೀಕ್ಷಿಸಿದ್ದಕ್ಕಿಂತಾ ಹೆಚ್ಚು.ನಮಗೆ ಸಂತಸದ ಆಶ್ಚರ್ಯವನ್ನು ಮೂಡಿಸಿತು. ಅಂದರೆ ಇದರ ಅರ್ಥ,  ಓದುಗರು   ತಮ್ಮ ಮನೆಯ ಮಕ್ಕಳ ಇಂತಹ ಕ್ಷಣಗಳಿಗೆ connect ಆಗಿದ್ದಾರೆ ಅಂತ ನನ್ನ ಊಹೆ / ಅನಿಸಿಕೆ.
 
ಆದ್ದರಿಂದ ಇದನ್ನು ಬರಹ ಸರಣಿಯನ್ನಾಗಿ  ಪ್ರಕಟಿಸುವ ಹಂಬಲ ನನಗೆ. ಮೊಮ್ಮಗಳ ಒಡನಾಟದಲ್ಲಿ, ನನ್ನ ಅನುಭವಕ್ಕೆ  ಬಂದ ಹಲವಾರು ವಿಷಯಗಳನ್ನು ಪಟ್ಟಿಮಾಡಿಟ್ಟಿದ್ದೇನೆ.
 ಪ್ರತ್ಯಕ್ಷವಾಗಿ  ಮತ್ತು ಪರೋಕ್ಷವಾಗಿ  ನನ್ನ ಮತ್ತು ಅವಳ  ನಡುವೆ ಆಗಿರೋದು :
           ವಿಚಾರ ವಿನಿಮಯ
           ಭಾವ ವಿನಿಮಯ
           ಸ್ಪೂರ್ತಿ ವಿನಿಮಯ
ಆಕೆಯ  'ಮುಗ್ಧತೆ'ಯಲ್ಲಿ   'ಪ್ರಬುದ್ಧತೆ' ಯನ್ನು ಕಂಡಿದ್ದೇನೆ.
ತೊದಲುನುಡಿ, ಬೆಳಕನ್ನು ಹಚ್ಚಿದೆ ( ಹಾಗಾಗಿ ಬರಹಮಾಲಿಕೆಯ ಹೆಸರು ತೊದಲುನುಡಿದೀಪ” ) 
ಇಷ್ಟು ಪ್ರಸ್ತಾವನೆ ಸಾಕು ಅನ್ಸುತ್ತೆ.
{ ಯಕ್ಷಗಾನ ಭಾಷೆಲಿ
 ಹ್ವಾಯ್ ಪ್ರಸಂಗಕ್ಕಿಂತಾ, ಪೀಠಿಕೆಯೇ ಉದ್ದ ಆಯ್ತಲ್ಲಾ ಮಾರಾಯ್ರೆಅಂತ ಅನಿಸಿದ್ರೂ ಅನಿಸಿರಬಹುದು ನಿಮಗೆ }
********************
OK,
ಈಗ
, ಇಂದಿನ  ಪುಟ್ಟ ಸಂಚಿಕೆ ವಿಷಯಕ್ಕೆ ಈಗ ಬರ್ತೀನಿ
***********
*********
ಪ್ರತಿದಿನ ಆರೋಹಿ ಜೊತೆ ಪಾರ್ಕ್ ನಲ್ಲಿ morning walk ಮಾಡುವಾಗ,  ಸೂರ್ಯ, ಚಂದ್ರ, ನಕ್ಷತ್ರ, ಮರ, ಗಿಡ , ಹೂವು .... ಬಗ್ಗೆ , ಏನಾದರೂ ಸಂವಾದ ಆಗ್ತಾನೇ ಇರುತ್ತೆ.
ಇಂದು ಸೂರ್ಯ ಸಂಪೂರ್ಣ ಮರೆಯಾಗಿರಲಿಲ್ಲ.ಒಮ್ಮೊಮ್ಮೆ ಕಾಣಿಸ್ತಾ ಇದ್ದ.

"ಎಲ್ಲೇ ಸೂರ್ಯಮಾಮ ಕಾಣಿಸ್ತಾನೇ ಇಲ್ವಲ್ಲೇ? "
ಅಂದೆ
ಆಕೆ, ಆಕಾಶವನ್ನೊಮ್ಮೆ ನೋಡಿದಳು.  
ತಕ್ಷಣ ಅವಳ ಉತ್ತರ
  "ಸೂರ್ಯಮಾಮ ಕೂ...ಕೀ... ಆಡ್ತಾ ಇದಾನೆ ಅಜ್ಜಾ "
------
ನಿಮಗೆಲ್ಲಾ ಗೊತ್ತೇ ಇರುತ್ತೆ .  ಅಡಗು-ಹುಡುಕು ಆಟ ( Hide &Seek) ಆಟ ಮಕ್ಕಳಿಗೆ ಪ್ರಿಯವಾದ ಆಟ. ಅಡಗಿಕೊಂಡು ' ಕೂ..ಕಿ' ಹೇಳುವುದು ಆ ಆಟದ ಕ್ರಮ. ಸ್ವಾಭಾವಿಕವಾಗಿ ನಮ್ಮನೇಲೂ ಆಡ್ತೀವಿ. ಪಕ್ಕದಮನೆಯ ಆಕೆಯ ಗೆಳೆಯ ಮಿಹಿರಣ್ಣ ನ ಬಳಗ ಆಡೋದನ್ನು ನೋಡಿ ಖುಷಿಪಡ್ತಾ ಇರ್ತಾಳೆ ಯಾವಾಗ್ಲೂ.
ಸೂರ್ಯಮಾಮ ಮೋಡದಲ್ಲಿ ಅಡಗಿ ಕೂಕಿ ಆಡ್ತಾ ಇದಾನೆ ಅಂತ ಅವಳ ಕಲ್ಪನೆ.
 
ಸೂರ್ಯ ಮೋಡದಿಂದ ಆಚೆ ಬಂದಕೂಡಲೇ , ಜೋರಾಗಿಯೇ ಕೂಗಿದಳು,  ಅಲ್ಲಿರೋರಿಗೆಲ್ಲಾ ಜೋರಾಗಿ ಕೇಳಿಸುವಂತೆ
ಸೂರ್ಯಮಾಮ ಡಬ್ಬಾ
{ ಈಗಿನ ಮಕ್ಕಳ ಆಟದಲ್ಲಿ , ಅಡಗಿಕೊಂಡವನನ್ನು ಪತ್ತೆ ಹಚ್ಚಿದಕೂಡಲೇ ಹೇಳುವ ಪದ ..ಡಬ್ಬಾ }
---------
ಅಂದಹಾಗೆ , ಸೂರ್ಯ ಚಂದ್ರ ಕುರಿತು, ಇನ್ನೊಂದು ರಹಸ್ಯ ಹೇಳಿದ್ದಾಳೆ ಅವಳು ನಮಗೆ
“ ಅಜ್ಜಾ, ಸೂರ್ಯಮಾಮ ತಾ..ಚಿ ಮಾಡಕಾರೆ, ಚಂದಮಾಮ ಎದ್ದಿರ್ತ;
ಚಂದಮಾಮ ತಾ..ಚಿ ಮಾಡಕಾದ್ರೆ , ಸೂರ್ಯಮಾಮ ಎದ್ದಿರ್ತ “
ಅರ್ಥ ಆಯ್ತಲ್ಲ ?
ಸೂರ್ಯ ನಿದ್ದೆ ಮಾಡುವಾಗ ಚಂದ್ರ ಎದ್ದಿರ್ತಾನೆ
, ಚಂದ್ರ ನಿದ್ದೆ ಮಾಡುವಾಗ ಸೂರ್ಯ ಎದ್ದಿರ್ತಾನೆ.
********************************
ಇಂತಹ ಸಾಮಾನ್ಯ  ದೃಶ್ಯಗಳು,   ಪ್ರಬುದ್ಧರೆನಿಸಿಕೊಂಡಿರುವ ನಮಗೆ  ಗಮನಕ್ಕೇ ಬರುವುದಿಲ್ಲ ( ಕವಿಗಳನ್ನು ಹೊರತುಪಡಿಸಿ ). ಆದರೆ ಮುಗ್ಧರು ಅನಿಸಿಕೊಂಡಿರುವ ಮಕ್ಕಳಿಗೆ,  ಸಾಮಾನ್ಯ ವಸ್ತು, ದೃಶ್ಯ, ಸಂಗತಿಗಳಲ್ಲಿ ಅವರದೇ ಆದ ಕಲ್ಪನೆ ಮೂಡುತ್ತೆ.
 
 ಇಂತಹದನ್ನೇ ನೋಡಿಯೇ , ರಾಷ್ಟ್ಕಕವಿ ಜಿ. ಎಸ್. ಶಿವರುದ್ರಪ್ಪ  ಅವರು, ಗೊಂಬೆಯೊಂದಿಗೆ ತಾಸುಗಟ್ಟಲೇ ಆಡುವ ಮಗುವಿನ  ಕುರಿತು,  ಒಂದು ಕವಿತೆಯಲ್ಲಿ ಬರೆದ ಚಂದದ ಸಾಲುಗಳು.
“ಚಂದನದ ಗೊಂಬೆಗೂ ಜೀವ ತುಂಬುವ ಚದುರೆ ಲೋಕಮಾತೆ
ಎಲ್ಲರಿಗೂ ತಾಯಾಗಿ ಲಾಲಿ ಹಾಡುವವಳಿವಳು ವಿಶ್ವಮಾತೆ  ”
*********
 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ