ಡಾ.ಎಚ್.ಎಸ್. ಮೋಹನ್ ಅವರ ಹೊಸಮನೆಯ ಉದ್ಘಾಟನೆ ಶುಭ ಸಂದರ್ಭ / ಯಕ್ಷಗಾನ
ಡಾ.ಎಚ್.ಎಸ್. ಮೋಹನ್ ಅವರ ಹೊಸಮನೆಯ ಉದ್ಘಾಟನೆ ಶುಭ ಸಂದರ್ಭ / ಯಕ್ಷಗಾನ
ಮುದ ಕೊಟ್ಟ ಕ್ಷಣಗಳು
-ಚಿದಂಬರ ಕಾಳಮಂಜಿ
ಬೆಂಗಳೂರು
ನಿವಾಸಿಯಾಗಿರುವ ನಾನು,
ಡಾ.ಮೋಹನ್ ಅವರ ಆತ್ಮೀಯ ಕರೆಯಿಂದಾಗಿ, ಅವರ ಹೊಸಬಾಳೆಯ ಹೊಸಮನೆಯ ಉದ್ಘಾಟನೆಯ ನೆಪದಲ್ಲಿ , ಸ್ನೇಹಮಿಲನ ಮತ್ತು ಯಕ್ಷಗಾನದವನ್ನು
ಆನಂದಿಸುವ ಸಲುವಾಗಿಯೇ ಹೋಗಿ ಬಂದೆ . ಈ ಸಂದರ್ಭದಲ್ಲಿ ನನಗೆ ತುಂಬಾ ಖುಷಿ ಕೊಟ್ಟಿದ್ದು,
ಯಕ್ಷಗಾನ –‘ ಜಾಂಬವತಿ ಕಲ್ಯಾಣ’
ಅನಿಸಿಕೆ (ಸ್ಥೂಲ)
ಈ ಯಕ್ಷಗಾನ
·
ಒಂದು ಪರಿಪೂರ್ಣ ಪ್ರದರ್ಶನ
·
ಹಳೆ ಬೇರು – ಹೊಸ ಚಿಗುರು ಕೂಡಿದ್ದ ಸೊಬಗು
·
ಹಿಮ್ಮೇಳ ಮತ್ತು ಮುಮ್ಮೇಳದ ಹದವಾದ ಸಮತೋಲನ.
·
ಎಲ್ಲಾ ಕಲಾವಿದರಿಂದ, ಔಚಿತ್ಯತೆಯನ್ನು ಮೀರದ ಪ್ರದರ್ಶನ
·
ಸುಮಾರು 2 ಗಂಟೆ ಅವಧಿ, ಏಕಾಗ್ರತೆಯಿಂದ ನೋಡಿಸಿದ , ಸಾಂಪ್ರದಾಯಿಕ ಶೈಲಿಯ ಪ್ರದರ್ಶನ
ಅನಿಸಿಕೆಯ ( ವಿಸ್ತಾರ )
ಪರಿಪೂರ್ಣತೆ
ಹಿಮ್ಮೇಳ
, ಮುಮ್ಮೇಳ ಮತ್ತು ಪ್ರೇಕ್ಷಕ ವರ್ಗ ಹದವಾಗಿ ಮಿಳಿತವಾಗಿತ್ತು.
ಹಳೆ ಬೇರು – ಹೊಸ ಚಿಗುರು ಕೂಡಿದ್ದ ಸೊಬಗಿನ ಪ್ರದರ್ಶನ
ಹಳೆ ಬೇರು ಹಿಮ್ಮೇಳದಲ್ಲಿ
ಭಾಗವತಿಕೆಯಲ್ಲಿ
ಶ್ರೀಪಾದ ಹೆಗಡೆ ಬಾಳೆಗದ್ದೆ
ಯಕ್ಷಗಾನದ
ಸಾಂಪ್ರದಾಯಿಕ ಶೈಲಿಗೆ ಚ್ಯುತಿ ಬಾರದಂತೆ,
ಜೀವಂತಿಕೆಯಿಂದ, ಸಾಹಿತ್ಯ ಸ್ಪಷ್ಟವಾಗಿ ಕೇಳಿಸುವ
ಹಾಗೆ ಮಾಡಿದ ಗಾಯನ, ಪ್ರಸಂಗದ
ಯಶಸ್ಸಿಗೆ ಮೂಲ ಕಾರಣ.
ಮದ್ದಲೆಯಲ್ಲಿ ಶಂಕರ ಭಾಗವತರು
ಮದ್ದಲೆ ವಾದನ , ಅವರಿಗೆ ಉಸಿರಾಡಿದಷ್ಟೇ ಸರಾಗ. ಆದ್ದರಿಂದ ಇನ್ನೇನೂ
ವಿಮರ್ಶೆಯೇ ಬೇಕಿಲ್ಲ.
ಹೊಸ ಚಿಗುರು ಹಿಮ್ಮೇಳದಲ್ಲಿ
ಚಂಡೆಯಲ್ಲಿ ಗಣೇಶ್ ಗಾಂವ್ಕರ್
ಅಚ್ಚುಕಟ್ಟಾದ,
ಅಬ್ಬರವಿಲ್ಲದ, ಔಚಿತ್ಯಪೂರ್ಣ ವಾದನ
ಹೇಳಲೇಬೇಕಾದ
ಇನ್ನೊಂದು ಅಂಶವಿದೆ
ಭಾಗವತರು
ಮತ್ತು ಚಂಡೆವಾದಕರು , ಯಾಂತ್ರಿಕವಾಗಿ ಭಾಗವತಿಕೆ ಮತ್ತು ಲಯವಾದ್ಯಗಳನ್ನು
ಪ್ರಸ್ತುತ ಪಡಿಸಲಿಲ್ಲ.
ಬದಲಾಗಿ, ಮುಮ್ಮೇಳದ ಕಲಾವಿದರ ಅಭಿನಯವನ್ನು ಆನಂದಿಸುತ್ತ, ಸಹಜವಾಗಿ,
ಲವಲವಿಕೆಯಿಂದ ಅವರೊಂದಿಗೆ ಬೆರೆತಿದ್ದರು.
ಇದು ಸ್ವಲ್ಪ ಅಪರೂಪವೇ.
ಮುಮ್ಮೇಳದಲ್ಲಿ
ಹಳೆಬೇರು
ಪ್ರಮುಖವಾಗಿ ಜಾಂಬವಂತನ ಪಾತ್ರದಲ್ಲಿ ಸಂಜಯ ಬೆಳೆಯೂರು
ಜಾಂಬವಂತನ ವೇಷ ಭೂಷಣ
,
ತುಂಬಾ ಚೆನ್ನಾಗಿತ್ತು. ಆ ಪಾತ್ರಕ್ಕೆ ಬೇಕಾದ ಆಕರ್ಷಣೆಯನ್ನು ಲೇಪಿಸಿತ್ತು.
ಸಾಮಾನ್ಯವಾಗಿ ಜಾಂಬವಂತನ
ವೇಷದಲ್ಲಿ,
ಮೌಖಿಕ ಅಭಿನಯ ಮತ್ತು ಭಾವನೆಗಳು ಕಾಣಿಸುವುದಿಲ್ಲ. ಈ ಪಾತ್ರಧಾರಿಗೆ ಇರುವ
ಸವಾಲು ಇದು. ಕೇವಲ ಆಂಗಿಕ ಅಭಿನಯ ಮತ್ತು ಮಾತಿನ
ಏರಿಳಿತದಿಂದ, ಭಾವನೆಗಳನ್ನು ಅಭಿವ್ಯಕ್ತಿಸಬೇಕಾಗುತ್ತದೆ. ಇದನ್ನು
ಸಮರ್ಥವಾಗಿ ನಿಭಾಯಿಸಿದರು ಅನುಭವೀ ಕಲಾವಿದ
ಸಂಜಯ್ ಬೆಳೆಯೂರು.
ಪ್ರಸಂಗದ ಅಂತಿಮ ಕ್ಷಣದಲ್ಲಿ ಜಾಂಬವತಿಯನ್ನು
ಕೃಷ್ಣನ ಜೊತೆ ಕಳಿಸುವಾಗ ಆಡಿದ ಭಾವನಾತ್ಮಕ
ಮಾತುಗಳು ನಮ್ಮ ಕಣ್ಣುಗಳನ್ನು ಒದ್ದೆ ಮಾಡಿದವು.
ಮುಮ್ಮೇಳದಲ್ಲಿ
ಹೊಸಚಿಗುರು
ಕೃಷ್ಣನ ಪಾತ್ರದ ಪ್ರವೀಣ್ ತಟ್ಟಿಸರ
ನಾನು ಪ್ರಥಮ ಬಾರಿಗೆ
ನೋಡಿದ್ದು ಈ ಕೃಷ್ಣನನ್ನು.
ಮೂರು ಚಂದಗಳು ಎದ್ದು
ಕಾಣಿಸಿದವು.
ಚಂದ (ವೇಷ), ಛಂದ (ಅಭಿನಯ)
, ಚಂ...ದ ( ಮಾತು – ತುಂಟತನ ಮತ್ತು ಗಾಂಭೀರ್ಯತೆಯ ಹದ ).
ಬಲರಾಮ, ಜಾಂಬವತಿ,
ನಾರದ ತುಂಬಾ ವಿಶೇಷ ಅನಿಸದಿದ್ದರೂ, ಪಾತ್ರಕ್ಕೆ
ನ್ಯಾಯ ಒದಗಿಸಿದರು
ಔಚಿತ್ಯತೆಯನ್ನು ಮೀರದ ಭಾಗವತಿಕೆ, ಅಭಿನಯ ಮತ್ತು
ಅರ್ಥಗಾರಿಕೆ.
ಇತ್ತೀಚಿನ ದಿನಗಳಲ್ಲಿ, ಚಪ್ಪಾಳೆ
ಗಿಟ್ಟಿಸುವ ಉದ್ದೇಶದಿಂದ, ಯಕ್ಷಗಾನದ ಶಾಸ್ತ್ರೀಯತೆಯ ಪರಿಧಿಯನ್ನು ದಾಟುವ ‘ಫ್ಯಾಶನ್’ ರೂಢಿಯಾಗಿದೆ. ಪ್ರೇಕ್ಷಕರ
ಅಭಿರುಚಿಯನ್ನೇ ಕೆಡಿಸುತ್ತಿದೆ. ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು ಹಾಡುವ ಭಾಗವತರು, ಹುಚ್ಚು ಹುಚ್ಚಾಗಿ ಕುಣಿಯುವ ವೇಷಧಾರಿಗಳು ಮತ್ತು ಯಕ್ಷಗಾನದ ಘನತೆ ಮೀರಿ ನಗಿಸಲು
ಪ್ರಯತ್ನಿಸುವ ಹಾಸ್ಯಪಾತ್ರಧಾರಿಗಳು .......
ಆದರೆ ಇಲ್ಲಿ ಮಾತ್ರ ಇದು ಯಾವುದೂ
ಕಂಡು ಬರಲಿಲ್ಲ.
ಮೇಲ್ನೋಟಕ್ಕೆ
‘ಇದೂ ಒಂದು ಉಲ್ಲೇಖಿಸಬಹುದಾದ ಅಂಶವೇ?’ ಅನಿಸಬಹುದು. ಆದರೆ ನನ್ನಂಥವನಿಗೆ ಈ ಅಂಶವೂ ಪ್ರಮುಖವೇ.
ಅದೇನೆಂದರೆ
ನನ್ನ ಸಹ ಪ್ರೇಕ್ಷಕರ ಪ್ರಬುದ್ಧತೆ.
ಸಾಮಾನ್ಯವಾಗಿ
ಟೆಂಟ್ ಒಳಗೆ ಯಕ್ಷಗಾನ ನೋಡುವಾಗ,
ವಿವಿಧ ಅಭಿರುಚಿ ಸ್ತರದ ಪ್ರೇಕ್ಷಕರಿರ್ತಾರೆ. ಕಲಾವಿದರು ಔಚಿತ್ಯ ಮೀರಿ ‘ಗಿಮಿಕ್ಸ್’
ಮಾಡಿದಾಗ ಚಪ್ಪಾಳೆ , ಸಿಳ್ಳಿಯ ಅರ್ಭಟ ತೋರಿಸುವವರು.
ಅದು ಕಿರಿ ಕಿರಿಯುಂಟು ಮಾಡುತ್ತೆ.
ಇಲ್ಲಿ ಆ ಸಮಸ್ಯೆ ಇರಲಿಲ್ಲ. ಔಚಿತ್ಯಪೂರ್ಣ ಮೌನ ಮತ್ತು ಕರತಾಡನ.
ಮುಗಿಸುವ ಮುನ್ನ,
ಯಕ್ಷಗಾನಕ್ಕೆ
ಮುನ್ನ ಸವಿದ ರುಚಿ ರುಚಿ ಮಸಾಲೆ ಮಂಡಕ್ಕಿ,
ಮಿರ್ಚಿ ಬೋಂಡ, ಸಿಹಿ ಕಬ್ಬಿನಹಾಲು
ಯಕ್ಷಗಾನದ
ನಂತರದ ಭರ್ಜರೀ ಊಟ
ಕುಟುಂಬದವರ
ಆತಿಥ್ಯ
ಹಲವು
ಬಂಧು ಮಿತ್ರರ ಭೇಟಿ ,
ಒಟ್ಟಿನಲ್ಲಿ , ಈ ಸಂದರ್ಭದಲ್ಲಿ ಭಾಗವಸಿಸಲೆಂದೇ 375 (+375) ಕಿ.ಮೀ. ಪ್ರಯಾಣ ಮಾಡಿದ್ದಕೆ, ಪೂರ್ತಿ ಮೌಲ್ಯ ಸಿಕ್ಕಿದೆ.
ಆಯೋಜಿಸಿ , ಆಹ್ವಾನಿಸಿದ ಡಾ.ಮೋಹನ್ ಕುಟುಂಬಕ್ಕೆ ವಂದನೆಗಳು.




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ