ಇಶಿಶ್ಯೋ ರಸ್ತೆ ಮೇಲೇ ಕಕ್ಕ ಮಾಡ್ತಾ ಇದೆ...

 ತೊದಲುನುಡಿದೀಪ
--------------
ಸಂಚಿಕೆ # 4
--------------
ಇಶಿಶ್ಯೋ ರಸ್ತೆ ಮೇಲೇ ಕಕ್ಕ ಮಾಡ್ತಾ ಇದೆ...
-------------
ಎಂದಿನಂತೆಯೇ ನಮ್ಮೊಮ್ಮಗಳು 'ಆರೋಹಿ' ಮತ್ತು ನಾನೂ,  morning walk ಮಾಡ್ತಾ, ಮುಖ್ಯರಸ್ತೆಯ ಬಳಿ ಬಂದೆವು. 
ಇದ್ದಕ್ಕಿದ್ದಂತೆಯೇ ಆರೋಹಿ, 
ಒಂದು ರೀತಿಯ ಆಶ್ಚರ್ಯಭರಿತ, ತುಂಟ ನಗೆ ಬೀರುತ್ತಾ ಜೋರಾಗಿ ಹೇಳಿದಳು
" ಅಜ್ಜ, ಅಜ್ಜಾ...ಅಲ್ನೋಡು..
ರಸ್ತೇ ಮೇಲೇ ಕಕ್ಕಾ ಮಾಡ್ತಾ  ಇದೆ ..ಇಶ್ಯಿಶ್ಯೋ.."

🤦‍♂️🤦‍♂️🤦‍♂️🤦‍♂️
ನಾನಂದ್ಕೊಂಡೆ, ಯಾವುದೋ ನಾಯಿನೋ , ದನನೋ ಹಾಗೆ ಮಾಡ್ತಾ ಇರಬಹುದೇನೋ ಅಂತ.
ಆದರೆ 
ಹತ್ತಿರ ಯಾವ ನಾಯಿನೂ ಇಲ್ಲ, 
ದನಾನೂ ಇಲ್ಲ!!🤔!!!
"ಏಯ್ ಕೂಸೇ...
ಯಾರೂ ಕಕ್ಕ ಮಾಡ್ತಾ ಇರೋದು ಕಾಣಿಸ್ತಾನೇ ಇಲ್ವಲ್ಲೇ? 
"
"ಅಜ್ಜಾ ನೋಡಲ್ಲಿ" ಅಂತ ತೋರಿಸಿದಳು.
----
ನೋಡಿದೆ,
ಓಹ್.ಹೋ....
ಇದಾ ವಿಷಯ ? 
ನನ್ನ ದೊಡ್ಡ ದೃಷ್ಟಿಗೆ ಕಾಣಿಸದ್ದು, ಇವಳ 'ದಿವ್ಯದೃಷ್ಟಿ' ಗೆ ಕಂಡಿತ್ತು
------
ಏನಪ್ಪಾ ಅಂದರೆ,
ಒಂದು ಟ್ರ್ಯಾಕ್ಟರ್, ಡಾಂಬರ್ ಮಿಶ್ರಿತ ಜಲ್ಲಿಕಲ್ಲುಗಳನ್ನು ತನ್ನ ಹಿಂಬದಿಯಿಂದಾ ರಸ್ತೆ ಮೇಲೆ ಸುರಿಸ್ತಾ ಇತ್ತು. 
ಅಷ್ಟೇ...
------
ಆಹಾ..
ರವಿಗೆ ಕಾಣದ್ದು 
ಈ ನಮ್ಮ 'ಮುದ್ದುಕವಿ' ಗೆ ಕಂಡಿತ್ತು
😃🤣🤣

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ