ನನ್ನ 66 ರ ಜನ್ಮದಿನದಂದು ಹೀಗೊಂದು ಕೃತಜ್ಞತೆ-ಬರಹ
ನನ್ನ 66 ರ ಜನ್ಮದಿನದಂದು ಹೀಗೊಂದು ಕೃತಜ್ಞತೆ
66 ನೇ ವಯಸ್ಸಿನ ಹೊಸಿಲಲ್ಲಿದ್ದೇನೆ ನಾನು
ಇಂದು.
--------
ವೃತ್ತಿ,
ಪ್ರವೃತ್ತಿ
ಮತ್ತು
ಕುಟುಂಬ
ಮೂರೂ
ಆವರಣದಲ್ಲಿ,
ಜೀವನವನ್ನು
‘ನಿತ್ಯೋತ್ಸವ’ ವನ್ನಾಗಿ ಆಚರಿಸಿ,
ಒಂದು
ಮಟ್ಟದ ಸಾರ್ಥಕತೆ ಪಡೆದಿದ್ದೇನೆ.
ಧನ್ಯತಾ
ಭಾವವವಿದೆ.
ಈ
ಸಂಭ್ರಮದ ಕ್ಷಣದಲ್ಲಿ,
ಒಮ್ಮೆ
ನಡೆದುಬಂದ ದಾರಿಯ ಅವಲೋಕಿಸಿ,
ಕೃತಜ್ಞತೆ
ಅರ್ಪಿಸುವ ಕರ್ತವ್ಯ
ಈ
ಬರಹದ ಮೂಲಕ.
----------
ಸ್ವಾರಸ್ಯ
ಅಂದರೆ ಈ ಬರಹದ ಪ್ರಕ್ರಿಯೆಯಲ್ಲಿ , ನನಗರಿವಿಲ್ಲದಂತೆಯೇ
ನಾ
ನಡೆದು ಬಂದ ದಾರಿಯ
ಸ್ಥೂಲ
ಅವಲೋಕನವೇ ಆಗಿಬಿಟ್ಟಿದೆ.
-----------
ಇದು
ನನ್ನ ವೈಯುಕ್ತಿಕ ಜೀವನದ ಸ್ವಗತ.
ಆದರೂ
ಯಾಕೆ ಪ್ರಕಟಿಸಿದ್ದೇನೆ?
{ ಒಂದು ರೀತಿಯ ಮುಜುಗುರದಲ್ಲೇ ಇದನ್ನು
ಬರೆದಿದ್ದೇನೆ – ಕಾರಣ ಅದ್ಯಾವ ದೊಡ್ಡಮನುಷ್ಯ ನಾನು, ಇಂಥದ್ದನ್ನು ಬರೆಯುವುದಕ್ಕೆ?....ಅನ್ನೋ ಭಾವವೂ ಒಂದುಕಡೆ !! }
*************
ಮೂರು ಕಾರಣಗಳು.
1. ನನ್ನ ಧನ್ಯತಾ ಭಾವವನ್ನು ನಾಕು
ಜನರೊಂದಿಗೆ ಹಂಚಿಕೊಂಡು ಖುಶಿಪಡುವುದಕ್ಕಾಗಿ.
2. ಜನ್ಮದಿನದಂದು, ನನ್ನಂತಹ, ಇಳಿ ವಯಸ್ಸಿನ ಬಂಧುಮಿತ್ರರಿಗೆ ಈ ಬಗೆಯ ಭಾವನೆಗಳು ಬರುತ್ತವೆಯೇ ಎಂದು
ತಿಳಿದುಕೊಳ್ಳುವ ಕುತೂಹಲ.
3. ನನಗಿಂತ ಕಿರಿಯರಿಗೆ ಇದು ಒಂದು ರೀತಿ ‘ಮಾರ್ಗದರ್ಶಿ’ ಆದರೂ ಆಗಬಹುದೇನೋ! ? ( ಆಸಕ್ತರು, ತಮ್ಮ ಪ್ರತಿ ಜನ್ಮದಿನದಂದು, ಹೀಗೊಮ್ಮೆ ನಡೆದು ಬಂದ ದಾರಿಯನ್ನು
ಅವಲೋಕಿಸಿಕೊಂಡರೆ ಚೆನ್ನಾಗಿರುತ್ತೇನೋ )
**************
**************
ಇಷ್ಟು
ಪೀಠಿಕೆ ನಂತರ , ಈಗ ನನ್ನ ಕೃತಜ್ಞತಾರ್ಪಣೆ ಪ್ರಾರಂಭ
----------------
ಈಗ
ಉದ್ಭವಿಸಿದ ಪ್ರಶ್ನೆ ???
----------------
ಯಾರು
ಯಾರಿಗೆ, ಯಾವುದಕ್ಕಾಗಿ ಕೃತಜ್ಞತೆ ಸಲ್ಲಿಸಲಿ ?
1. ನನಗೆ ಜನ್ಮ ನೀಡಿದ ನನ್ನಮ್ಮ – ಅನ್ನಪೂರ್ಣೆ, ನನ್ನಪ್ಪ – ನಾರಾಯಣ ( ಶೇಡಿಮನೆ ನಾರಣಣ್ಣ ). ಅತಿ
ಮುಖ್ಯವಾಗಿ, ತಮ್ಮ ಇತಿ-ಮಿತಿಯಲ್ಲಿಯೇ , ಚಂದವಾಗಿ ಪಾಲನೆ- ಪೋಷಣೆ
ಮಾಡಿದ್ದಕ್ಕಾಗಿ, ಉತ್ತಮ ಸಂಸ್ಕಾರ ಬಿತ್ತಿ, ಒಲವಿನಿಂದ ಬೆಳೆಸಿದ್ದಕ್ಕಾಗಿ.
---
2. ನನ್ನೊಳಗೆ ( ಅಂದರೆ ನನ್ನ DNA ಒಳಗೆ) ನನಗರಿಯದಂತೆಯೇ ಅಂತರ್ಗತವಾಗಿರುವ
ಪೂರ್ವಜರ ಗುಣಗಳ ಋಣಕ್ಕೋ?
----
3. ನನ್ನ ಬಾಲ್ಯದಲ್ಲಿ ಒಂದು ಶಿಕ್ಷಣ
ಶಾಲೆಯಂತಿದ್ದ, ಹಂಸಗಾರಿನ ಶೇಡಿಮನೆ ದೊಡ್ಡ ಕುಟುಂಬದ
ಪರಿಸರಕ್ಕೋ?
----
4. ಬಾಲ್ಯದಲ್ಲಿ, ಮಲೆನಾಡಿನ , ಜೋಗ ಜಲಪಾತದ ಸಮೀಪದ, ಕಣಿವೆಯೊಳಗಿನ ನಮ್ಮಹಳ್ಳಿ ಕಾಳಮಂಜಿಯ
ಹಸಿರುಕಾನು, ಕಾಲುದಾರಿ, ಬೆಟ್ಟ, ಗುಡ್ಡ, ಝರಿ, ಹಕ್ಕಿ
ಪಕ್ಷಿಗಳ ಚಿಲಿಪಿಲಿ , ವಿಸ್ಮಯದ ಪ್ರಾಕೃತಿಕ ಪರಿಸರಕ್ಕೋ?
-----
5. ಬೆಟ್ಟಕ್ಕೆ ಹೋಗಿ ಭರ್ಜರಿ ಸೊಪ್ಪಿನ ಹೊರೆ ಹೊತ್ತು ಅಡಿಕೆ
ತ್ವಾಟಕ್ಕೆ ಹಾಕಿ, ಮಳೆ-ಬಿಸಿಲೆನ್ನದೆಯೇ ಕೃಷಿ ಕೆಲಸಗಳನ್ನು
ಸ್ವಲ್ಪವೂ ಬೇಸರಿಸದೆ ಮಾಡುತ್ತಿದ್ದ, ನಮ್ಮನೆಯ
ಕೆಲಸದಾಳು , ಶೆಟ್ಟಿ ನಾರಾಯಣ ಕಲಿಸಿದ ಶ್ರದ್ಧೆ , ನಿಯತ್ತಿಗೋ ?
------
6. ಬಾಲ್ಯದಲ್ಲಿ, ರಾಮಾಯಣ , ಮಹಾಭಾರತದ ಕಥೆ ಗಳನ್ನು ನಮ್ಮೊಳಗೆ
ನಾಟಿಸಿ, ಯಾವತ್ಕಾಲಕ್ಕೂ ಸಮಾಜದ ಭಾಗವಾಗಿರುವ, ದೇವ, ರಾಕ್ಷಸ, ಮನುಷ್ಯ ಗುಣಗಳನ್ನು ಪರಿಚಯಿಸಿದ, ಭದ್ರಗಿರಿ ಅಚ್ಯುತದಾಸ ರಂತಹ ಕಲಾವಿದರ ಹರಿಕಥೆ ಕಲೆ ಗೋ?
ಕೆರೆಮನೆ
ಶಂಭುಹೆಗ್ಡೆ, ಚಿಟ್ಟಾಣಿ ರಾಮಚಂದ್ರ ಹೆಗ್ಡೆಯಂತಹ
ಅನೇಕರ ಅದ್ಭುತ ಯಕ್ಷಗಾನ ಕಲೆಗೋ?
-------
7. ನಮ್ಮ ಅವಿಭಕ್ತಕುಟುಂಬದಲ್ಲಿ,
ಪ್ರತಿ
ಸಂಜೆಯ ಸಾಂಸ್ಕೃತಿಕ ಪರಿಪಾಠ ( ಬಾಯಿಪಾಠ, ಶ್ಲೋಕಪಠಣ, ಭಜನೆ ,ಹಾಡು ) ನನ್ನೊಳಗೆ ಬಿತ್ತಿದ ಸಂಗೀತಾಸಕ್ತಿಯ ಪರಿಗೋ?
--------
8. ಸಂಗೀತ, ನಾಟಕ, ಮಾತುಗಾರಿಕೆಯ ಹುಚ್ಚನ್ನು ಹತ್ತಿಸಿದ
ಆಕಾಶವಾಣಿಗೋ?
-------
9. ಕುಟುಂಬದಲ್ಲಿ ಆಗ್ಗಾಗ್ಯೆ ಜರುಗುತ್ತಿದ್ದ ಮದುವೆ, ಉಪನಯನ ಮುಂತಾದ ಕಾರ್ಯಕ್ರಮಗಳಲ್ಲಿ
ಲವಲವಿಕೆಯಿಂದ ಓಡಾಡಿಕೊಂಡು, ಚಂದವಾಗಿ ಎಲ್ಲವನ್ನೂ
ನಿರ್ವಹಿಸುತ್ತಿದ್ದ ನನ್ನ ಸೋದರ ಮಾವ ಉದ್ದೇಮನೆ ರಾಮಣ್ಣ, ವೆಂಕಟಗಿರಿ
ಚಿಕ್ಕಯ್ಯನಂಥವರ Management (ಇಂದಿನ
MBA ಪದವೀಧರರಿಂದಲೂ ಸಾಧ್ಯವಾಗದ) ಕೌಶಲ್ಯಕ್ಕೋ ?
---------
10. ಸ್ವೇಚ್ಚೆಯಾಗದಂತೆ ಎಲ್ಲಾ
ಸ್ವಾತಂತ್ರ್ಯವನ್ನೂ ಕೊಟ್ಟು ಜಾಗ್ರತೆಯಿಂದ
ಹದಿವಯಸ್ಸಿನವರೆಗೆ ಬೆಳೆಸಿದ ನನ್ನಪ್ಪ ಅಮ್ಮನ ಪೋಷಕರ ಜವಾಬ್ದಾರಿಗೋ ?
----------
11. ಒಂದನೇ ತರಗತಿಯಿಂದ – BE- ( Electronics& Communication ) ಸ್ನಾತಕೋತ್ತರದ
ವರೆಗೆ , ಶಾಲಾ ಕೊಠಡಿಯೊಳಗೆ, ವಿದ್ಯೆ ಕಲಿಸಿದ ವಿದ್ಯಾ ಸಂಸ್ಥೆಗಳ -
ನೂರಾರು ಶಿಕ್ಷಕರ ಜ್ನಾನ –ಕೌಶಲ್ಯಕ್ಕೋ ?
------------
12. ನನ್ನ ಸಂಗೀತಾಸಕ್ತಿ ಗಮನಿಸಿ, ಸುರತ್ಕಲ್ Engineering college ನ ಗ್ರಂಥಾಲಯದ Engineering ಪುಸ್ತಕಗಳ ನಡುವೆ ಎಲ್ಲೋ
ಅವಿತುಕೊಂಡಿದ್ದ ‘ ಸಂಗೀತ ರತ್ನ ಚೂಡಾಮಣಿ’ ಪುಸ್ತಕವನ್ನು, ಕರ್ನಾಟಕ ಸಂಗೀತದ ‘ಕಟಪಯಾದಿ ಸೂತ್ರವನ್ನು ನನಗೆ ಪರಿಚಯಿಸಿದ
ಪ್ರೊ, ಕೆ.ಎಂ. ಹೆಬ್ಬಾರ್ ಅವರ ಪ್ರೋತ್ಸಾಹಕ್ಕೋ
?
---------------
13. ದಾವಣಗೆರೆಯಲ್ಲಿ 5 ವರ್ಷದ ಇಂಜಿನಿಯರಿಂಗ್ ವ್ಯಾಸಂಗದ ಅವಧಿಯಲ್ಲಿ , ಉಚಿತ ವಸತಿ ಸೌಲಭ್ಯ ಒದಗಿಸಿದ
ಚೆನ್ನಗಿರಿ ರಂಗಪ್ಪ-ವಿರೂಪಾಕ್ಷಪ್ಪ ಅವರ ಔದಾರ್ಯದ ಗುಣಕ್ಕೋ?
--------
14. ನನ್ನ 40 ವರ್ಷದ professional ಜೀವನ ಪಯಣದಲ್ಲಿ ಹಂತ ಹಂತವಾಗಿ ಬೆಳೆಸಿದ
ಸುಬ್ಬರಾವ್, ಡಾ.ಪ್ರಭಾಕರ್ ರಂತಹ ಅದೆಷ್ಟೋ ವ್ಯಕ್ತಿಗಳ ಮಾರ್ಗದರ್ಶನಕ್ಕೋ ?
----------
13.ಬೋಧನೆಯ ತುಡಿತ ಇರುವ ನನಗೆ, PESIT Engineering ಕಾಲೇಜಿನಲ್ಲಿ ದೊರೆತ ಪ್ರೋತ್ಸಾಹಕಾರೀ ಪರಿಸರಕ್ಕೋ ?
----------
14. ನನ್ನ ಬೋಧನೆಯನ್ನು ಆನಂದಿಸುತ್ತಾ, ನನ್ನಿಂದ ಪ್ರೇರೇಪಣೆ ಪಡೆಯುತ್ತಾ, ನಾನೂ ಜೊತೆ ಜೊತೆಗೇ ಕಲಿಯುವಂತೆ ಮಾಡಿದ , ಸಾವಿರಾರು ವಿದ್ಯಾರ್ಥಿಗಳ ಮನಸುಗಳಿಗೋ?
---------
15. ನನ್ನೊಳಗಿನ ಸುಗಮ ಸಂಗೀತ ಸಂಯೋಜಕನ
ಬೆನ್ನು ತಟ್ಟಿದ ಸುಗಮ ಸಂಗೀತ ಮೇರು ಅಶ್ವತ್ಥ್, ಕವಿ
ಎಚ್.ಎಸ್. ವೆಂಕಟೇಶಮೂರ್ತಿರಂತಹ ಅನೇಕರ ಪ್ರೋತ್ಸಾಹಕ್ಕೋ?
----------
16. ನಾ ಕಟ್ಟಿ ಬೆಳೆಸುತ್ತಿರುವ ಸುಗಮ ಸಂಗೀತ
ಬಳಗ ‘ನಮ್ಮನೆ ಸಂಗೀತ ಪ್ರಣತಿ’ ಯ ಎಲ್ಲ ಕಲಾವಿದರ ಪ್ರತಿಭೆ ಮತ್ತು
ಸಹಕಾರಕ್ಕೋ?
-----------
17. ನಮ್ಮ ಸಂಗೀತವನ್ನು ಆಸ್ವಾದಿಸಿ, ಪ್ರತಿಕ್ರಿಯಿಸಿ, ಹಂಚಿ, ಪ್ರೋತ್ಸಾಹಿಸುತ್ತಿರುವ ಸಂಗೀತ ರಸಿಕರ
ಅಭಿರುಚಿ, ಅಭಿಮಾನಕ್ಕೋ ?
----------
18. ಸಂಸಾರ ಬಂಡಿಯನ್ನು ಸುಗಮವಾಗಿ ಸಾಗಿಸಲು
ಮೃದುವಾಗಿ ತಿರುಗುತ್ತಿದ್ದ ಗಾಲಿ – ಪತ್ನಿ
ವಿಜೂಳ ಪ್ರೀತಿ, ಕಳಕಳಿ, ಸರಳ, ಸಾತ್ವಿಕ
ಗುಣಕ್ಕೋ?
-----------
19.ಕೊಟ್ಟ ಸ್ವಾತಂತ್ರ್ಯವನ್ನು
ಸ್ವೇಚ್ಚೆಯನ್ನಾಗಿ ಪರಿವರ್ತಿಸದೆ, ಹಂತ
ಹಂತವಾಗಿ ಬೆಳೆದು, ಉತ್ತಮ ಇಂಜಿನಿಯರ್ ಆಗಿ, ಪತ್ನಿ ರಶ್ಮಿ ಜೊತೆಗೆ ಒಲವಿನ , ಸುಖೀ ಸಂಸಾರ ಸಾಗಿಸುತ್ತಿರುವ ಮಗ
ಶಶಾಂಕ್ ನ ಹೊಣೆಗಾರಿಕೆಯ ಜೀವನ ಕ್ರಮಕ್ಕೋ? ಜತನದಿಂದ
ಆಪ್ಪ , ಅಮ್ಮನನ್ನು ಜತನದಿಂದ
ನೋಡಿಕೊಳ್ಳುತ್ತಿರುವ ಮಗ, ಸೊಸೆಯ ಪ್ರೀತಿ, ಕಳಕಳಿಗೋ?
---------
20. 19 ತಿಂಗಳ ಹಿಂದೆಯಷ್ಟೇ, ಮೇಲಿನಿಂದ ಇಳಿದು ಬಂದು, ನಮ್ಮನೆ ಪರಿವಾರಕ್ಕೆ ಸೇರ್ಪಡೆಯಾಗಿರುವ,ಮುದ್ದು ದೇವತೆ, ಮೊಮ್ಮಗಳು ಆರೋಹಿಯ ಮುಗ್ಧ, ಲವಲವಿಕೆಯ , ಕೇಕೆ, ನಗೆಪತಾಕೆ, ತೊದಲು ನುಡಿ,ಆಟ , ಓಟ, ನಲಿದಾಟಕ್ಕೋ?
---------
21.ನನಗೆ ಬೇಕಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗಿರುವ ,ಮಾಂತ್ರಿಕ ಅಂತರ್ಜಾಲ ತಂತ್ರಜ್ನಾನದ ಸೌಕರ್ಯಕ್ಕೋ?
Facebook , YouTube ಮುಂತಾದ ಸಾಮಾಜಿಕ ಜಾಲತಾಣಗಳಿಗೋ? ಅದರಿಂದ ನಾ ಸಂಪಾದಿಸಿದ ಸ್ನೇಹ
ಸಂಪತ್ತಿಗೋ ?
----------
22. ಇದೆಲ್ಲದರ ಜೊತೆ, ಸುಗಮ ಸುಂದರ ಜೀವನದಲ್ಲಿ ಆಗೊಮ್ಮೆ , ಈಗೊಮ್ಮೆ ನುಸುಳಿರುವ ಕಹಿ ಅನುಭವಗಳು
ಕಲಿಸಿದ ಪಾಠಗಳಿಗೋ ?
----------
??
??
*******
ಓಹ್...
ಪಟ್ಟಿ ನಿಲ್ಲುವುದೇ ಇಲ್ಲ!!!!!
ಆಲೋಚಿಸಿದಂತೆಲ್ಲಾ..ಅನಂತವಾಗುವ
ಸಾಧ್ಯತೆ.
ಇಷ್ಟು
ಸಾಕು ಇಂದಿಗೆ
*********
**********
ಇಷ್ಟೆಲ್ಲಾ
ಸರಿ...ಆದರೆ?
---
ಈ
ಬರಹದಲ್ಲಿ ಒಂದು ಮಹಾ ಪ್ರಮಾದವಾಗಿದೆಯೇ!!!!???
ಇಡೀ
ಜಗತ್ತಿನ ಮಹಾಗುರು ಆ ಭಗವಂತನಿಗೇ ವಂದನೆ ಅರ್ಪಿಸೋಕೆ ಮರೆತಿದ್ದೇನೆಯೇ?
!!??!!!?!
----
ಖಂಡಿತಾ
ಇಲ್ಲ
---
ನಾ
ಪಟ್ಟಿ ಮಾಡಿರುವ ಎಲ್ಲದರಲ್ಲಿಯೂ ದೇವರನ್ನು ಕಂಡಿದ್ದೇನೆ.
ಯಾಕೆ
ಅಂದರೆ
ಆ
ಕಾಣದ ದೇವರು,
ಅಥವಾ
ಜಗನ್ನಿಯಾಮಕ
ಅಥವಾ
ಒಂದು ಮಹಾ ಚೈತನ್ಯ
ನನಗೆ
ಯಾವಾಗಲೂ ವಿಸ್ಮಯ ..
ಅರ್ಥ
ಆಗಿಲ್ಲ
ಇನ್ನೂ....
*********
ಆದ್ದರಿಂದ
'ಕಾಣುವ ದೇವರುಗಳಿಗೆ' ನನ್ನ ಕೃತಜ್ಞತೆಯನ್ನು ಸಲ್ಲಿಸುವಷ್ಟು ಮಾತ್ರ , ಕಿರಿಯ, ನಮ್ರ, ಮುಗ್ಧ ನಾನು
********
ಇಷ್ಟು
ದೀರ್ಘ ಬರಹದ ಮೂಲಕ 'ಬೋರ್ ' ಗರೆತ ಮಾಡಿದರೂ, ಓದುವ ನಿಮಗೆ , ಧನ್ಯವಾದಗಳು

L💀
ಪ್ರತ್ಯುತ್ತರಅಳಿಸಿಒಳ್ಳೆಯ ಬರಹ
ಪ್ರತ್ಯುತ್ತರಅಳಿಸಿಸಾರ್ಥಕ ಗೊಳಿಸಿಕೊಳ್ಳುತ್ತಿರುವ ಬದುಕು
All the best
ಧನ್ಯವಾದಗಳು ಓದಿ, ಪ್ರತಿಕ್ರಿಯಿಸಿದ್ದಕ್ಕೆ
ಅಳಿಸಿಬಹಳ ಸೊಗಸಾಗಿ ಮೂಡಿಬಂದಿದೆ
ಪ್ರತ್ಯುತ್ತರಅಳಿಸಿಧನ್ಯವಾದಗಳು ಓದಿ, ಪ್ರತಿಕ್ರಿಯಿಸಿದ್ದಕ್ಕೆ
ಅಳಿಸಿಒಳ್ಳೆಯ ಮಳೆಯೂ ನಿಮ್ಮೂರಿನಲ್ಲಿ ನಿಮ್ಮನ್ನು ನೆನೆಯತಿಹುದು.
ಪ್ರತ್ಯುತ್ತರಅಳಿಸಿಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ.
ನಿಮ್ಮ ವಿನಯ, ಶ್ರದ್ಧೆ , ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣದಿಂದಾಗಿ ನೀವು ಈ ಮಟ್ಟಕ್ಕೆ ಏರಿದ್ದೀರಿ. ಶುಭಾಶಯಗಳು
ಪ್ರತ್ಯುತ್ತರಅಳಿಸಿಬದುಕಿನ ಅವಲೋಕನ ಒಂದು ಒಳ್ಳೆಯ ಅಭ್ಯಾಸ ಇದು ಮುಂದಿನ ಜೀವನಕ್ಕೆ ಮಾರ್ಗಸೂಚಿಯು ಹೌದು ನೀವು ಜೀವನದ ಎಲ್ಲಾ ಮಜಲುಗಳನ್ನು ತುಂಬಾ ಅರ್ಥವತ್ತಾಗಿ ಅವಲೋಕಿಸಿದ್ದೀರಿ 👌👌
ಪ್ರತ್ಯುತ್ತರಅಳಿಸಿಅರ್ಥಪೂರ್ಣ ಬರಹ
ಪ್ರತ್ಯುತ್ತರಅಳಿಸಿಅದ್ಬುತ ಬರಹ
ಪ್ರತ್ಯುತ್ತರಅಳಿಸಿಪ್ರೀತಿಯ ಚಿದಂಬರ ನಿಮಗೆ 66ನೆ ಹುಟ್ಟುಹಬ್ಬದ ಶುಭಾಶಯಗಳು. ರಾಜರಾವ್ ಹೆಚ್ ಆರ್
ಪ್ರತ್ಯುತ್ತರಅಳಿಸಿ