( ಚಿತ್ರಕವಿತೆ ) - ನಾನಲ್ಲ ‘ಅಯ್ಯೋ-ಪಾಪ’ದ ಮುದಿವನಿತೆ-ಕವಿತೆ
ಶೀರ್ಷಿಕೆ
ನಾನಲ್ಲ ‘ಅಯ್ಯೋ-ಪಾಪ’ದ ಮುದಿವನಿತೆ
**********************
ಈ
ಕವಿತೆ / ಬರಹಕ್ಕೆ ಒಂದು ಪುಟ್ಟ ಪ್ರಸ್ತಾವನೆ
**********
4 ವರ್ಷಗಳ ಹಿಂದೆ, ಶ್ರೀ ಕಿಲಾರ ರಾಜಾರಾಂ ಅವರ ನೇತ್ರತ್ವದಲ್ಲಿ, ಸಾಗರ ಫೋಟೋಗ್ರಾಫಿಕ್ ಸೊಸೈಟಿ ಅವರ “ಚಿಂತನಕ್ಕೆ ಸವಾಲ್” ಎಂಬ ಚಿತ್ರಕವಿತೆ ಸ್ಪರ್ದೆಯ ಸರಣಿಗಾಗಿ, ಬರೆದ ಕವಿತೆ / ಬರಹ ಇದು.
ಇದನ್ನು ಬರೆಯುವಾಗ , ನನ್ನ
ಸ್ಮೃತಿಪಟಲದಲ್ಲಿ ಮೂಡಿದ್ದು, ಬಾಲ್ಯದಲ್ಲಿ , ನನ್ನ ಹಳ್ಳಿಗೆ ಸಮೀಪದ ಪುಟ್ಟ ಪಟ್ಟಣ ಕಾರ್ಗಲ್ ನಲ್ಲಿ , ಸಂಭ್ರಮಿಸುತ್ತಿದ್ದ
ಭಾನುವಾರದ ಸಂತೆ. ಅಲ್ಲಿ ಇಂತಹ ವೃದ್ಧೆಯರು ಕಂಡುಬರುವುದು ಸಾಮಾನ್ಯ .
“ ಅಯ್ಯ್ಯೋ...ಪಾಪ.. ಈ ವಯಸ್ಸಿನಲ್ಲಿಯೂ ಇಷ್ಟೆಲ್ಲಾ ಕಷ್ಟಪಡಬೇಕೇ? ಇವಳನ್ನು ನೋಡ್ಕೋಳೋಕೆ ಯಾರೂ ಇಲ್ಲವೇ “
..ಇತ್ಯಾದಿ
ಆದರೆ , ಈ ಮುದುಕಿಯನ್ನು ನಾನು ಧನಾತ್ನಕ ದೃಷ್ಟಿಯಿಂದ ನೋಡಿ, ಈ ಕವಿತೆಯನ್ನು ಬರೆದಿದ್ದೇನೆ.
************************************
ಶೀರ್ಷಿಕೆ : ನಾನಲ್ಲ
'ಅಯ್ಯೋ
ಪಾಪ' ದ ಮುದಿ ವನಿತೆ
**************************************
ನಾನಲ್ಲ
'ಅಯ್ಯೋ ಪಾಪ' ದ ಮುದಿ ವನಿತೆ
ನಾನು,
ಸಂತೆಯೊಳಗಿನ ಸಂತೃಪ್ತೆ
ಅನುಭವಗಳ
ಕಂತೆ
ನನಗಿಲ್ಲ ಕೊರತೆ, ಚಿಂತೆ
ಯಾಕೆಂದರೆ
ಇರದ 'ಪಾಯಸ' ಕ್ಕೆ
ತಡಕದೆ
ಇರುವ 'ಗಂಜಿ'ಯ ಸವಿಯುವ
ಬಾಳಕಲೆಯ
ಕಲಿತ ಕಲಾವಿದೆ ( ಕಲಾವಂತೆ)
ಸಂತೆಯಿಂದ ಸಂತೆಗೆ ಚಲಿಸುವ
ಜಂಗಮ ಸಂಸ್ಥೆ
ನನ್ನಾವರಣವ ಬೆಳಗುವ ಹೆಮ್ಮೆಯ ಹಣತೆ
ಉತ್ಸಾಹದ ಅಕ್ಷಯದ ಒರತೆ
******************************************************
ಈ
ಜಗವೊಂದು ಸುಂದರ ಸಂತೆ
ಮೇಲಿನ
ವಿನ್ಯಾಸಕ ಬರೆದಿಹನು ಸಂಹಿತೆ
ಅದನು ಪಾಲಿಸಿ
ಸುಖಿಸಿ , ಸಂಭ್ರಮಿಸೋ,
ಹೊಣೆ , ಕಲೆ ಮಾತ್ರ ನಮ್ಮದಂತೆ
ಇದ
ಗ್ರಹಿಸುವ ಗ್ರಾಹಕನ ಬದುಕೇ ಸಂದರ ಕವಿತೆ
ಇದು ನನ್ನ ಜೀವನ ಪಾಠ- ಭಗವದ್ಗೀತೆ
******************************************************
ಅಲ್ಲ
ಇದು, ಬರಿ ಕೈಗಾಡಿ
ಇದು
ನನ್ನ ದೇವರ
ಗುಡಿ
ಅಲ್ಲ
ಇದು, ಬರಿ ಸರಕು ತೂಗುವ ತಕ್ಕಡಿ
ಬದುಕ
ತೂಗುವ, ತೂಗಿಸುವ , ಕೌಶಲ್ಯವ
ತೋರಿಸಿದ ಕನ್ನಡಿ
*****************************************************
ಬನ್ನಿ, ಗ್ರಾಹಕರೆ
ಸಂತೆಯ
ಸಾಗರ ಮಹಾ
ಪಾತ್ರ ನಮ್ಮದು
ಮೊಗೆಯುವ
ಬೊಗಸೆಯ ಗಾತ್ರ ನಿಮ್ಮದು
ಸಂತೆಯ
‘ಹಬ್ಬ’ ಮಾಡುವ ಪಾತ್ರ, ನಮ್ಮೆಲ್ಲರದು
********************************************
??
ಈಗ ಹೇಳಿ
ನಾನು
'ಅಯ್ಯೋ ಪಾಪ' ದ ಮುದಿ ವನಿತೆಯೇ ??
ಒಳ್ಳೆಯ ಅನುಭವದ ಚಿಂತನೆ
ಪ್ರತ್ಯುತ್ತರಅಳಿಸಿ,ಸಾರ್ ಅನುಭವದ ಮುತ್ತಿನ ಮಾತು...
ಪ್ರತ್ಯುತ್ತರಅಳಿಸಿಅದ್ಭುತ ಲೇಖನ
ಪ್ರತ್ಯುತ್ತರಅಳಿಸಿಅನುಭವದ ಮುತ್ತಿನಮಾತು
ಪ್ರತ್ಯುತ್ತರಅಳಿಸಿ